ವಿನೇಶ್ ಪೋಗತ್ ಅನರ್ಹ ಕುರಿತು ಪ್ರಧಾನಿ ಮೋದಿ ಟೀಕಿಸಿ ನಟ ಪ್ರಕಾಶ್ ರಾಜ್ ಹಂಚಿಕೊಂಡ ಪೋಸ್ಟರ್ ಭಾರಿ ವಿವಾದ ಸೃಷ್ಟಿಸಿತ್ತು. ಇದರ ನಡುವೆ ಪ್ರಕಾಶ್ ರಾಜ್ ನಿರ್ಧಾರ ಇದೀಗ ಮೆಚ್ಚುಗೆಗೆ ಪಾತ್ರವಾಗಿದೆ.
ಬೆಂಗಳೂರು(ಆ.09) ನಟ ಪ್ರಕಾಶ್ ವಿವಾದಗಳಿಂದಲೇ ಸುದ್ದಿಯಾಗುತ್ತಿರುವುದು ಹೊಸದೇನಲ್ಲ. ಸಾಮಾಜಿಕ ಜಾಲತಾಣದಲ್ಲಿ ಜಸ್ಟಿ ಆಸ್ಕಿಂಗ್ ಅಭಿಯಾನದ ಮೂಲಕ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಇದೀಗ ಒಲಿಂಪಿಕ್ಸ್‌ನಲ್ಲಿ ವಿನೇಶ್ ಫೋಗಟ್ ಅನರ್ಹತೆ ಕುರಿತು ಪ್ರಧಾನಿ ಮೋದಿ ಟೀಕಿಸಿ ಪೋಸ್ಟ್ ಮಾಡಿದ ಕಾರ್ಟೂನ್ ವಿವಾದಕ್ಕೆ ಕಾರಣಾಗಿದೆ. ಈ ವಿವಾದ ತಾರಕಕ್ಕೇರಿದ ನಡುವೆ ಪ್ರಕಾಶ್ ಮಹತ್ವದ ನಿರ್ಧಾರ ಒಂದನ್ನು ಪ್ರಕಟಿಸಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿ ಘೋಷಿಸಿದ ವಾರ್ಷಿಕ ಪ್ರಶಸ್ತಿಯನ್ನು ಸ್ವೀಕರಿಸಲು ಪ್ರಶಾಶ್ ರಾಜ್ ನಿರಾಕರಿಸಿದ್ದಾರೆ. ತನಗಿಂತ ಅರ್ಹರು ರಂಗಭೂಮಿಯಲ್ಲಿರುವುದರಿಂದ ಈ ಪುರಸ್ಕಾರ ಸ್ವೀಕರಿಸುತ್ತಿಲ್ಲ ಎಂದಿದ್ದಾರೆ.
ಕರ್ನಾಟಕ ಅಕಾಡೆಮಿ ಪ್ರಶಸ್ತಿ ಘೋಷಣೆ ಬೆನ್ನಲ್ಲೇ ಪ್ರಕಾಶ್ ನಿರ್ಧಾರ ಪ್ರಕಟಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಪ್ರಕಾಶ್ ರಾಜ್, ನಾನು ಈಗಷ್ಟೇ ರಂಗಭೂಮಿಗೆ ಮರಳಿ ಬಂದಿದದೇನೆ. ಮಾಡಬೇಕಾದ ಕೆಲಸ ಬೆಟ್ಟದಷ್ಟಿದೆ. ನನಗಿಂತಲೂ ಅರ್ಹರೂ ರಂಗಭೂಮಿಯಲ್ಲಿರುವುದರಿಂದ, ಈ ಪುರಸ್ಕಾರ ಸ್ವೀಕರಿಸಲು ಮನಃಸಾಕ್ಷಿ ಒಪ್ಪುತ್ತಿಲ್ಲ. ಕ್ಷಮಿಸಿ, ಅಭಿನಂಧಿಸಿ ಸಹೃದಯರಿಗೆ ಧನ್ಯವಾದಗಳು ಎಂದು ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ.
ಮೋದಿ ಟೀಕಿಸಿದ ನಟ ಪ್ರಕಾಶ್ ರಾಜ್ ಅಜ್ಞಾನಿ, ಕೆಟ್ಟ ಹೋರಾಟಗಾರ; ಅಹಿಂಸಾ ಚೇತನ್
ಪ್ರಕಾಶ್ ರಾಜ್ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ತನಗಿಂತಲೂ ಅರ್ಹರಿಗೆ ಮೊದಲು ಈ ಪ್ರಶಸ್ತಿ ಸಲ್ಲಬೇಕು ಅನ್ನೋ ನಟರ ನಿರ್ಧಾರವನ್ನು ಜನ ಸ್ವಾಗತಿಸಿದ್ದಾರೆ.ದಿಟ್ಟ ನಿರ್ಧಾರ ಘೋಷಿಸಿದ ಪ್ರಕಾಶ್ ರಾಜ್‌ಗೆ ಅಭಿನಂದನೆಗಳು ಎಂದು ಹಲವರು ಕಮೆಂಟ್ಸ್ ಮಾಡಿದ್ದಾರೆ. ಪ್ರಕಾಶ್ ರಾಜ್, ಹಿರಿಯ ನಟಿ ಉಮಾಶ್ರಿ ಸೇರಿದಂತೆ 93 ಗಣ್ಯರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪ್ರಕಟಿಸಿದೆ. ಉಮಾಶ್ರಿ , ನಾಟಕಕಾರ ಎಚ್‌ಹೆಸ್ ಶಿವಪ್ರಕಾಶ್ , ರಂಗ ಸಂಘಟಕ ಕೋಟಗಾನಹಳ್ಳಿ ರಾಮಯ್ಯಗೆ ಕರ್ನಾಟಕ ಅಕಾಡಮೆ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿ ಘೋಷಿಸಿ ಗೌರವಿಸಿದೆ.
ನಾನು ಈಗಷ್ಟೆ ರಂಗಭೂಮಿಗೆ ಮರಳಿ ಬಂದ್ದಿದ್ದೇನೆ .. ಮಾಡಬೇಕಾದ ಕೆಲಸ ಬೆಟ್ಟದಷ್ಟಿದೆ..ನನಗಿಂತಲೂ ಅರ್ಹರು ರಂಗಭೂಮಿಯಲ್ಲಿರುವುದರಿಂದ, ಈ ಪುರಸ್ಕಾರವನ್ನು ಸ್ವೀಕರಿಸಲು ನನ್ನ ಮನಃಸಾಕ್ಷಿ ಒಪ್ಪುತ್ತಿಲ್ಲ .. ಕ್ಷಮಿಸಿ🙏🏿🙏🏿🙏🏿 ಅಭಿನಂದಿಸಿದ ಸಹ್ರುದಯರಿಗೆ ಧನ್ಯವಾದಗಳು pic.twitter.com/PuzFx3boPK
— Prakash Raj (@prakashraaj)
ಪ್ರಕಾಶ್ ರಾಜ್ ಬಹುತೇಕ ಪೋಸ್ಟ್‌ಗಳು ಬಾರಿ ವಿವಾದ ಸೃಷ್ಟಿಸಿದೆ. ಇದಕ್ಕೂ ಮೊದಲು ಮಾಡಿದ್ದ ವಿನೇಶ್ ಫೋಗಟ್ ಟ್ವೀಟ್ ವಿವಾದ ಇನ್ನೂ ಆರಿಲ್ಲ. ವಿನೇಶ್ ಫೋಗಟ್ 100 ಗ್ರಾಮ್ ತೂಕ ಹೆಚ್ಚಾದ ಕುರಿತ ಕಾರ್ಟೂನ್ ಹಂಚಿಕೊಂಡಿದ್ದರು. ವಿನೇಶ್ ಫೋಗಟ್ ತೂಕ ಮಶೀನ್ ಮೇಲೆ ನಿಂತಿರುವಾಗ ಹಿಂಭಾಗದಿಂದ ಕಾಲು ಇಟ್ಟು ತೂಕ ಹೆಚ್ಚಿಸಿದ ರೀತಿಯಲ್ಲಿರುವ ಕಾರ್ಟೂನ್ ಇದಾಗಿತ್ತು. ಈ ಕಾರ್ಟೂನ್ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಹಲವರು ಈ ಕಾರ್ಟೂನ್ ವಿರುದ್ಧ ಆಕ್ರೋಶ ಹೊರಹಾಕಿದ್ದರು.
ವಿನೇಶ್ ಫೋಗಟ್ ವಿಷ್ಯದಲ್ಲಿ ಈ ಅಪಹಾಸ್ಯ ಪ್ರಕಾಶ್ ರಾಜ್‌ಗೆ ಬೇಕಿತ್ತಾ? ಕೋಲು ಕೊಟ್ಟು ಬಾರಿಸಿಕೊಂಡ ನಟ!