ದೈವ ನರ್ತಕರು ಹಾಗೂ ಕರ್ನಾಟಕ ರತ್ನ ಪುನೀತ್ ರಾಜಕುಮಾರ್‌ಗೆ ಸಿದ್ದಶ್ರೀ ಅರ್ಪಣೆ ಎಂದ ರಿಷಬ್ ಶೆಟ್ಟಿ
ಇಲ್ಲಿನ ಆಳಂದ ತಾಲೂಕಿನಲ್ಲಿರುವ ಜಿಡಗಾ ಸಿದ್ರಾಮೇಶ್ವರ ಶಿವಯೋಗಿಗಳ ನವ ಕಲ್ಯಾಣ ಮಠದಲ್ಲಿಂದು ಸಂಜೆ ನಡೆದ 38 ನೇಯ ಗುರು ವಂದನಾ ಸಮಾರಂಭದಲ್ಲಿ ಕಂತಾರಾ ಸಿನಿಮಾದ ನಟ, ನಿರ್ದೇಶಕ ರಿಷಬ್ ಶೆಟ್ಟಿಇವರಿಗೆ ಸಿದ್ದಶ್ರೀ ಪುರಸ್ಕಾರ ಪ್ರದಾನ ಮಾಡಲಾಯ್ತು.
ಜಿಡಗಾ, ಮುಗುಳಖೋಡದ ಮುರುಘರಾಜೇಂದ್ರ ಮಹಾಸ್ವಾಮಿಗಳ ಗುರುವಂದನ ಕಾರ್ಯಕ್ರಮದಲ್ಲಿ ನಡೆದ ಸಮಾರಂಭದಲ್ಲಿ ರಿಷಬ್ ಶೆಟ್ಟಿಯವರಿಗೆ ಸಿದ್ದಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯ್ತು. 1 ಲಕ್ಷ ರು ನಗದು ಹಣ, 2 ತೊಲೆ ಬಂಗಾರ ಸದರಿ ಪುರಸ್ಕಾರ ಒಳಗೊಂಡಿದೆ.
undefined
ಡಾ. ಮುರುಘರಾಜೇಂದ್ರ ಸ್ವಾಮಿಗಳು, ದಾಸೋಹ ಪೀಠದ 9 ನೇ ಪೀಠಾಧಿಪತಿ ಚಿ. ದೊಡ್ಡಪ್ಪ ಅಪ್ಪ, ಹಾರಕೂಡ ಶ್ರೀಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದು ರಿಷಬ್ ಶೆಟ್ಟಿಯವರಿಗೆ ಆಶಿರ್ವಾದ ಮಾಡಿದರು. ಗುರುವಂದನ ಕಾರ್ಯಕ್ರಮ ನಿಮ್ಮಿತ್ಯ ಸಂಗೀತ ರಸಮಂಜರಿ ಕಾರ್ಯಕ್ರಮ ಸಂಘಟಿಸಲಾಗಿತ್ತು. ಖ್ಯಾತ ಗಾಯಕ ವಿಜಯ ಪ್ರಕಾಶ ಹಾಗೂ ಅನುರಾಧಾ ಭಟ್ ಅವರಿಂದ ಕಾಂತಾರಾ ಸಿನಿಮಾದ ಸಿಂಗಾರ ಸಿರಿಯೇ ಹಾಡು ಮೂಡಿ ಬಂದಾಗ ಸೇರಿದ್ದ ಪ್ರೇಕ್ಷಕರು ಕರತಾಡನ ಮಾಡಿದರು.
ಗುರುವಂದನ ಕಾರ್ಯಕ್ರಮದಲ್ಲಿ ಕರ್ನಾಟಕ ರತ್ನ ಅಪ್ಪು ಸ್ಮರಣೆ ನಡೆಯಿತು. ನಿನೇ ರಾಜಕುಮಾರ ಹಾಡು ಹಾಡಿ ಅಪ್ಪು ಸ್ಮರೀಸಿದ ಗಾಯಕರು, ಗಾಯಕರೊಂದಿಗೇ ಸಿರಿದ್ದ ಜನಸ್ತೋಮ ನಿನೇ ರಾಜಕುಮಾರ ಹಾಡಿಗೆ ಮೊಬೈಲ್ ಟಾಚ್‌ರ್ ಹಾಕಿ ಸಾಥ್ ನೀಡಿತು. ನಿರೂಪಕಿ ಅನುಶ್ರೀ ಕಾರ್ಯಕ್ರಮ ನಡೆಸಿಕೊಟ್ಟರು.
Kantara: ಕಾಂತಾರ-2 ಬರುವುದು ಫಿಕ್ಸ್?: ರಿಷಬ್‌ಗೆ ಜೊತೆಯಾಗ್ತಾರಾ ರಕ್ಷಿತ್?
ಪುರಸ್ಕಾರ ಸ್ವೀಕರಿಸಿ ಮಾತನಾಡಿದ ರಿಷಬ್ ಶೆಟ್ಟಿಕಾಂತಾರ ಚಿತ್ರದಿಂದ ಮಠದವತಿಯಿಂದ ಮೋದಲ ಪ್ರಶಸ್ತಿ ಪಡೆದುಕೊಂಡಿರುವುದು ಬದುಕಿನ ಸಾರ್ಥಕ ಕ್ಷಣ, ದೈವ ನರ್ತಕರ ಕುಟುಂಬಕ್ಕೆ ಈ ಪ್ರಶಸ್ತಿ ಅರ್ಪಣೆ, ನನ್ನ ಬದುಕೀನ ಪ್ರೇರಣೆ ಸ್ಪೂರ್ತಿ ಪುನೀತರಾಜ ಕುಮಾರವರಿಗೆ ಸಮರ್ಪಣೆ, ನಾನು ಪೂಜ್ಯ ಶ್ರೀಗಳವರು ಭಕ್ತಿಪೂರ್ವಕವಾಗಿ ನಮನ ಸಮರ್ಪಣೆ ಮಾಡುತ್ತೆನೆಂದರು.
ಡಾ. ಮುರುಘರಾಜೇಂದ್ರ ಸ್ವಾಮಿಗಳು ಮಾತನಾಡುತ್ತ ಕಾಂತಾರ ಚಲನ ಚಿತ್ರ ಇಡಿ ವಿಶ್ವಕ್ಕೆ ದೈವತ್ವದ ಶಕ್ತಿಯನ್ನು ಪರೀಚಯಿಸಿ ಕೊಟ್ಟಿದೆ. ಬಹುಶಃ ಈ ವೇದಿಕೆಗೆ ನಾವು ಆಹ್ವಾನ ಮಾಡಬೇಕಾದರೆ ಶ್ರೀಮಠದಲ್ಲಿ ಒಂದು ಪವಾಡ ನಡೆಯಿತು, ರಿಷಬ್ ಶೆಟ್ಟಿಗೆ ಆಹ್ವಾನಿಸುತ್ತಿದ್ದೇವೆಂದು ಸಂಕಲ್ಪಿಸಿ ಗುರುಗಳ ಗ್ದದುಗೆಯ ಮುಂದೆ ಪ್ರಾರ್ಥಿಸಿದಾಗ ಶ್ರೀಗಳವರ ಜಾಗೃತ ಗದ್ದುಗೆಯಿಂದ ಬಲಭಾಗದಿಂದ ಹೂ ಉರಳಿತು ಎಂದರು. ತಮ್ಮ ಜೀವನದ ಇತಿಹಾಸದಲ್ಲಿ ನೊಡೀರುವ ಚಿತ್ರ ಯಾವುದಾದರೂ ಇದ್ದಿದ್ದರೆ ಅದು ಕಾಂತಾರ ಎಂದು ಶ್ರೀಗಳು ರಿಷಬ್ ಶೆಟ್ಟಿಯವರಿಗೆ ಪ್ರಶಸ್ತಿ ನೀಡಿ ಅಭಿನಂದಿಸಿದರು.