ಅಯ್ಯೋ ಈ ನಟಿಗೆ ಏನಾಯ್ತು..! ಮೆಹ್ರೀನ್ ಕೌರ್ ಮುಖದ ತುಂಬಾ ಸೂಜಿಗಳನ್ನು ನೋಡಿ ಫ್ಯಾನ್ಸ್‌ ಶಾಕ್

By Vaishnavi Chandrashekar  |  First Published Dec 2, 2022, 4:37 PM IST

ವೈರಲ್ ಆಯ್ತು ಮೆಹ್ರೀನ್ ಕೌರ್ ಫೋಟೋ. ಮುಖದ ತುಂಬಾ ಸೂಜಿ ಚುಚ್ಚಿಸಿಕೊಂಡ ನಟಿ ನೋಡಿ ನೆಟ್ಟಿಗರು ಶಾಕ್....


'ನೀ ಸಿಗೋವರೆಗು' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ಗೆ ಜೋಡಿಯಾಗಿರುವ ಮೆಹ್ರೀನ್ ಕೌರ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಫೋಟೋ ಸಾಕಷ್ಟು ಚರ್ಚೆಗಳಿಗೆ ಗುರಿಯಾಗಿದೆ. ಮುಖದ ತುಂಬಾ ಸೂಜಿ ಚುಚ್ಚಿಸಿಕೊಂಡಿರುವ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ. ಏನಿದು ಹೀಗೆ ಎಂದು ಗಾಬರಿಗೊಂಡ ಫ್ಯಾನ್ಸ್‌ ವಿಚಾರಿಸಿದ್ದಾರೆ.

ಸೂಜಿ ಚುಚ್ಚಿಸಿರುವುದು ಯಾಕೆ?

Tap to resize

Latest Videos

ಮೆಹ್ರೀನ್ ಕೌರ್ ತಮ್ಮ ಸೌಂದರ್ಯವೃದ್ಧಿಗೆಂದು ಮಾಡಿಸಿಕೊಂಡಿರುವ ಥೆರಪಿ ಇದು. ಇದನ್ನು ಆಕ್ಯು ಸ್ಕಿನ್ ಲಿಫ್ಟ್‌ ಎನ್ನು ಸ್ಕಿನ್‌ ಥೆರಪಿ. ಈ ಥೆರಪಿ ಮೂಲಕ ತಮ್ಮ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು. ಥೆರಪಿ ಮಾಡಿಸಿಕೊಳ್ಳುತ್ತಿರುವ ಮೆಹ್ರೀನ್ ಕೌರ್ ಡಾಕ್ಟರ್ ಜೊತೆ ಫೋಟೋ ಅಪ್ಲೋಡ್ ಮಾಡಿದ್ದಾರೆ. ಈ ಥೆರಪಿಯಲ್ಲಿ ಮುಖಕ್ಕೆ ಸಣ್ಣ ಪುಟ್ಟ ಸೂಜಿಗಳನ್ನು ಚುಚ್ಚುತ್ತಾರೆ. ತ್ವಚ್ಛೆ ಸದಾ ಹೊಳೆಯುತ್ತದೆ, ಮೇಕಪ್ ಇಲ್ಲದೆಯೂ ಸ್ಕಿನ್ ಗ್ಲೋ ಆಗುತ್ತದೆ. 

'ಏನ್ ಮೇಡಂ? ಬ್ಯುಟಿ ನೋಡಿಕೊಳ್ಳಬೇಕು ಎಂದು ಈ ರೀತಿ ಮಾಡಿದ್ದರೆ ಭವಿಷ್ಯದ ಕಥೆ ಏನಾಗಬೇಕು?'ಎಂದು ಅಭಿಮಾನಿಗಳು ಕಾಳಜಿಯಿಂದ ಪ್ರಶ್ನೆ ಮಾಡಿದ್ದಾರೆ. 

ಮೆಹ್ರೀನ್ ಕೌರ್ ಸಿನಿ ಜರ್ನಿ?

ಕೃಷ್ನಗಾಡಿ ವೀರ ಪ್ರೇಮಗಾದ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಮೆಹ್ರೀನ್ ಕೌರ್ ಮಹಾನುಭಾವುಡು, ರಾಜಾ ದಿ ಗ್ರೇಟ್‌, ನೋಟಾ, F2 ಮತ್ತು F3 ಸಿನಿಮಾದಲ್ಲಿ ನಟಿಸಿದ್ದಾರೆ. ಮಹಾನುಭಾವುಡು ಚಿತ್ರಕ್ಕೆ ಸಂತೋಷಂ ಫಿಲ್ಮ್‌ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದಾರೆ. ಸದ್ಯ ಸ್ಪಾರ್ಕ್‌ ಮತ್ತು ಶಿವಣ್ಣ ಜೊತೆ ನೀ ಸಿಗೋವರೆಗು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಮೆಹ್ರೀನ್ ಕೌರ್ ಎರಡು ಶೇಡ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ, ರಾಮ್ ಧೂಲಿಪುಡಿ ಆಕ್ಷನ್ ಕಟ್ ಹೇಳುತ್ತಿದ್ದು ಇದು ಜನುಮದ ಜೋಡಿ ಮತ್ತು ನಮ್ಮೂರ ಮಂದಾರ ಹೂವೆ ಸ್ಟೈಲ್‌ನಲ್ಲಿ ಮೂಡಿ ಬರುತ್ತಿರುವ ಸಿನಿಮಾ ಎಂದು ಹ್ಯಾಟ್ರಿಕ್ ಹೀರೋ ಮುಹೂರ್ತ ಸಮಾರಂಭದಲ್ಲಿ ಹೇಳಿದ್ದರು.

Fibromyalgia ಕಾಯಿಲೆಯಿಂದ ಬಳಲ್ತಿರೋ ನಟಿ ಪೂನಂ ಕೌರ್‌, ಹಾಗಂದ್ರೇನು ?

ಸ್ಟಾರ್ಡಂ:

'ಕಲಾವಿದ ಜೀವನದ ಬಗ್ಗೆ ತಿಳಿದುಕೊಳ್ಳಲು ಜನರಿಗೆ ಒಂದು ರೀತಿ ಕ್ರೇಜ್ ಇರಬೇಕು. ಲೈಫ್‌ಟೈಂ ಆದರೆ ಯಾವ ಗ್ಯಾರಂಟಿ ಇರುವುದಿಲ್ಲ. ನಾವು ಕುಳಿತುಕೊಂಡರೂ, ನಿಂತರೂ, ಮಲಗಿದ್ದರೂ ಒಟ್ಟಿನಲ್ಲಿ ಏನೇ ಮಾಡಿದ್ದರೂ ಶೇರ್ ಮಾಡುತ್ತಾರೆ. ನಮ್ಮ ಬ್ರೇಕ್‌ ಪಾಯಿಂಟ್ ತಲುಪುವವರೆಗೂ ನಾನು ಶ್ರಮದಿಂದ ಕೆಲಸ ಮಾಡಬೇಕು. ಕೆಲಸ ಮೇಲೆ ಹೊರಗಡೆ ಹೋದರೆ ಫ್ಯಾಮಿಲಿಗಳಿಂದ ಹಲವು ತಿಂಗಳು ದೂರ ಇರಬೇಕು. ಸ್ಟಾರ್ ಜೀವನ ಸುಲಭವಲ್ಲ' ಎಂದಿದ್ದಾರೆ ಮೆಹ್ರೀನ್ ಕೌರ್.

click me!