ರಾಕಿಂಗ್ ಸ್ಟಾರ್ ಯಶ್ ವಿಡಿಯೋ ವೈರಲ್ ಆಗ್ತಿದೆ; ಅಂಥಾದ್ದೇನಿದೆ ಅದ್ರಲ್ಲಿ ಗುರೂ!

By Shriram Bhat  |  First Published Jul 18, 2024, 12:06 PM IST

ಈ ಹಿನ್ನೆಲೆಯಲ್ಲಿ ಇರಬಹುದು ಅಥವಾ ಬೇರೇನೋ ಕಾರಣವಿರಬಹುದು. ಸೋಷಿಯಲ್ ಮೀಡಿಯಾದಲ್ಲಿ ಇಂದು ಯಾವ ವೀಡಿಯೋ ಅದ್ಯಾವ ಕಾರಣಕ್ಕೆ ವೈರಲ್ ಆಗುತ್ತದೆ ಎಂಬುದನ್ನು ಊಹಿಸಲೂ ಕಷ್ಟವಾಗುತ್ತದೆ. ಕಾರಣ, ಒಬ್ಬರಿಗೆ ಒಂದು ವೀಡಿಯೋ ಇಷ್ಟವಾಗಿಬಿಟ್ಟರೆ ..


ಕನ್ನಡದ ನಟ, ಪ್ಯಾನ್ ಇಂಡಿಯಾ ಸ್ಟಾರ್ ಯಶ್ (Rocking Star Yash) ಅವರು ಹಿಂದೆ ಮಾತನಾಡಿದ್ದ ವಿಡಿಯೋ ಒಂದು ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಕಾರಣ, ನಟ ಯಶ್-ರಾಧಿಕಾ ಪಂಡಿತ್ ಜೋಡಿ ಇತ್ತೀಚೆಗೆ ಅಂಬಾನಿ ಫ್ಯಾಮಿಲಿ ಮದುವೆಗೆ, ಅಂದರೆ ಅನಂತ್ ಅಂಬಾನಿ-ರಾಧಿಕಾ ಮರ್ಚಂಟ್ ಮದುವೆಗೆ ಹೋಗಿ ಸಖತ್ ಮಿಂಚಿರುವುದು ಇರಬಹುದು. ಜಗತ್ತಿನ ಅತ್ಯಂತ ಶ್ರೀಮಂತರ ಮದುವೆಯಲ್ಲಿ ನಟ ಯಶ್ ಹೋಗಿ ಅಲ್ಲಿ ಆದರಾತಿಥ್ಯ ಸ್ವೀಕರಿಸಿ ಬಂದಿದ್ದಾರೆ. 

ಈ ಹಿನ್ನೆಲೆಯಲ್ಲಿ ಇರಬಹುದು ಅಥವಾ ಬೇರೇನೋ ಕಾರಣವಿರಬಹುದು. ಸೋಷಿಯಲ್ ಮೀಡಿಯಾದಲ್ಲಿ ಇಂದು ಯಾವ ವೀಡಿಯೋ ಅದ್ಯಾವ ಕಾರಣಕ್ಕೆ ವೈರಲ್ ಆಗುತ್ತದೆ ಎಂಬುದನ್ನು ಊಹಿಸಲೂ ಕಷ್ಟವಾಗುತ್ತದೆ. ಕಾರಣ, ಒಬ್ಬರಿಗೆ ಒಂದು ವೀಡಿಯೋ ಇಷ್ಟವಾಗಿಬಿಟ್ಟರೆ ಅವರು ಅದನ್ನು ಸಾವಿರ ಜನರಿಗೆ ಶೇರ್ ಮಾಡಿಬಿಡುತ್ತಾರೆ. ಆ ಸಾವಿರದಲ್ಲಿ ಐನೂರು ಜನ ಒಬ್ಬೊಬ್ಬರೂ ಸಾವಿರದಷ್ಟು ಮಾಡಿದರೂ ಅದು ಪ್ರಪಂಚದ ತುಂಬಾ ಪರ್ಯಟನೆ ಮಾಡುತ್ತಾ ಇದ್ದುಬಿಡುತ್ತದೆ. 

Tap to resize

Latest Videos

undefined

ಇವ್ರು ಮುಂದೆ ಒಳ್ಳೆಯ ಖಳನಾಯಕ ಆಗ್ತಾರೆ; ಚಂದನ್‌ ಶೆಟ್ಟಿ ಈ ಮಾತನ್ನು ಯಾರಿಗೆ ಎಲ್ಲಿ ಹೇಳಿದರು..?

ಹಾಗಿದ್ದರೆ, ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ನಟ ಯಶ್ ತಮ್ಮ ತಾಯಿ ಬಗ್ಗೆ ಹೇಳಿದ್ದಾರೆ. ಅಂದು 'ಮದರ್ಸ್ ಡೇ' ಅಂಗವಾಗಿ ಮಾತನಾಡಿದ್ದ ವೀಡಿಯೋ ಅದಾಗಿರಬಹುದು. ನಟ ಯಶ್ ಅವರು 'ಪ್ರತಿಯೊಬ್ಬರ ಜೀವನದಲ್ಲೂ ತಾಯಿ ತುಂಬಾ ಮುಖ್ಯ ಆಗ್ತಾರೆ. ನಮ್ಮ ತಾಯಿ ಯಾವತ್ತೂ ತಲೆ ತಗ್ಗಿಸಿ ಬದುಕು ಅಂತ ಕಲಿಸಿಲ್ಲ, ಸ್ಟ್ರಾಂಗ್ ಆಗಿನೇ ಬೆಳೆಸಿರೋದು.. ಏನಾದ್ರೂ ನಾವು, ಚಿಕ್ಕವಯಸ್ಸಿಂದ ಆಗ್ಬಹುದು, ಇವತ್ತೇ ಆಗ್ಬಹುದು, ಒಂದ್ಸಲ ನಾವು ನೆನಪಿಸಿಕೊಳ್ಳೊದೋ ನಮ್ ತಂದೆ-ತಾಯಿನಾ. 

ಅದ್ರಲ್ಲೂ ತಾಯಿ ಅಂದ್ರೆ ಮಕ್ಕಳಿಗೆ ಎಲ್ಲಾನೂ, ತಾಯಿನೇ ಭಯ ಪಟ್ಕೊಂಡಿದ್ರೆ, ತಾಯಿನೇ ಹೆದ್ರಕೊಂಡಿದ್ರೆ ಮಕ್ಕಳು ಕೂಡ ಹಾಗೇ ಆಗ್ತಾರೆ. ಯಾವಾಗ ತಾಯಿ ಯಾವಾಗ ತುಂಬಾ ಸ್ಟ್ರಾಂಗ್ ಆಗಿ ಇರ್ತಾರೆ, ಆಗ ಸಮಾಜದಲ್ಲಿ ಮಕ್ಕಳು ಕೂಡ ಅಷ್ಟೇ ಸ್ಟ್ರಾಂಗ್ ಆಗಿ ಬೆಳಿತಾರೆ. ನಾನೇನಾದ್ರೂ ಆಗಿದೀನಿ ಅಂದ್ರೆ ಅದಕ್ಕೆ ನಮ್ಮ ತಾಯಿನೇ ಕಾರಣ..' ಎಂದಿದ್ದಾರೆ. ನಟ ಯಶ್ ಮಾತಿಗೆ ಅಲ್ಲಿದ್ದವರೆಲ್ಲರೂ ತಲೆದೂಗಿ ಚಪ್ಪಾಳೆ ಹೊಡೆದಿದ್ದಾರೆ. ಹಲವರ ಪಾಲಿಗೆ ಯಶ್ ಮಾತು ಚೈತನ್ಯ ನೀಡಿರಬಹುದು. 

ಕ್ಯಾನ್ಸರ್ ಬಾಧಿಸುತ್ತಿದ್ದರೂ ಅಂದು ಅಪರ್ಣಾ ಹೇಳಿದ್ದ ಮಾತುಗಳು ಕಣ್ಣೀರು ತರಿಸದೇ ಇರದು..!

ಅಮ್ಮ-ಅಪ್ಪ ಎಂಬುದು ಪ್ರತಿಯೊಬ್ಬರ ಪಾಲಿಗೂ ಮುಖ್ಯವೇ. ಆದರೆ ಮಕ್ಕಳು ಅದನ್ನು ತಮ್ಮತಮ್ಮ ಪೋಷಕರು ಬದುಕಿದ್ದಾಗಲೇ ಅರ್ಥಮಾಡಿಕೊಳ್ಳುತ್ತಾರೋ ಅಥವಾ ಸತ್ತಮೇಲೋ ಎಂಬುದು ಮಾತ್ರ ಯಕ್ಷಪ್ರಶ್ನೆ ಎನ್ನಬಹುದು. ಕಾರಣ, ಸಮಾಜದಲ್ಲಿ ಅಪ್ಪ-ಅಮ್ಮನ ಪ್ರೀತಿಯ ಬಗ್ಗೆ ಸರಿಯಾದ ಜ್ಞಾನವೇ ಇಲ್ಲ. ಈಗಂತೂ ವಿದೇಶಗಳಿಂದ ಬಂದಿದೆ ಎನ್ನಬಹುದಾದ, ವರ್ಷದಲ್ಲಿ ಒಂದು ದಿನ ಅಪ್ಪನ ದಿನ, ಇನ್ನೊಂದು ದಿನ ಅಮ್ಮನ ದಿನ ಆಚರಿಸುವ ಪರಿಪಾಠ ಬೆಳೆಯುತ್ತಿದೆ. ಈ ಸಮಯದಲ್ಲಿ ಯಶ್ ಮಾತು ಹಲವರ ಪಾಲಿಗೆ ಜ್ಞಾನೋದಯದ ದೀಪವಾಗಬಹುದೇ?

click me!