Yash Birthday: ಜಗತ್ತಿನ ಹೀರೋ ಆಗಲು ಹೊರಟಿರುವ ನಟ ಯಶ್‌ಗೆ ಕನ್ನಡ ನಾಡು ಹೇಳಿತ್ತಿರೋ ಮಾತೇನು?

Published : Jan 08, 2026, 06:40 PM IST
Yash

ಸಾರಾಂಶ

ತಮ್ಮ ಮುಂದಿನ ಚಿತ್ರ 'ಟಾಕ್ಸಿಕ್' ಮೂಲಕ ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಲು ಸಜ್ಜಾಗಿರುವ ನಮ್ಮ ರಾಕಿ ಭಾಯ್‌ಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ನಿಮ್ಮ ಸಾಧನೆಯ ಪಯಣ ಹೀಗೆಯೇ ಮುಂದುವರಿಯಲಿ, ಕನ್ನಡದ ಕೀರ್ತಿ ಹಿರಿದಾಗಲಿ. Happy Birthday, Rocky Bhai❤️ ಎನ್ನುತ್ತಿದೆ ಕರುನಾಡು..

ಸ್ಯಾಂಡಲ್‌ವುಡ್‌ನ 'ಸುಲ್ತಾನ' ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದ ಸಂಭ್ರಮ; ಇಡೀ ಜಗತ್ತನ್ನೇ ಗೆದ್ದ ಅಪ್ಪಟ ಕನ್ನಡಿಗನ ಸ್ಫೂರ್ತಿದಾಯಕ ಪಯಣ!

ಕನ್ನಡ ಚಿತ್ರರಂಗದ ಕೀರ್ತಿಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದು, ಇಡೀ ಭಾರತೀಯ ಸಿನಿ ದುನಿಯಾ ಸ್ಯಾಂಡಲ್‌ವುಡ್ ಕಡೆಗೆ ತಿರುಗಿ ನೋಡುವಂತೆ ಮಾಡಿದ 'ರಾಕಿಂಗ್ ಸ್ಟಾರ್' ಯಶ್ ಅವರಿಗೆ ಇಂದು (08 January) ಹುಟ್ಟುಹಬ್ಬದ ಸಡಗರ.

ಇದು ಕೇವಲ ಒಬ್ಬ ನಟನ ಜನ್ಮದಿನವಲ್ಲ, ಇದು ದೊಡ್ಡದಾಗಿ ಕನಸು ಕಾಣುವ ಮತ್ತು ಆ ಕನಸುಗಳನ್ನು ಬೆನ್ನಟ್ಟುವ ಕೋಟ್ಯಂತರ ಯುವಕರಿಗೆ ಸ್ಫೂರ್ತಿಯ ಹಬ್ಬ. ಯಶ್ ಇಂದು ಕನ್ನಡವನ್ನು, ಕರ್ನಾಟಕವನ್ನು ಜಾಗತಿಕ ಮಟ್ಟದಲ್ಲಿ ಪ್ರತಿನಿಧಿಸುತ್ತಿರುವ ನಿಜವಾದ ಹೀರೋ ಎನ್ನಿಸಿದ್ದಾರೆ. ರೀಲ್‌ನಲ್ಲಿ ಮಾತ್ರವಲ್ಲ, ರಿಯಲ್ ಅಗಿ ಕೂಡ ಇಂದು ನಟ ಯಶ್ ಅವರು ಕರ್ನಾಟಕ ಹಾಗೂ ಭಾರತದ ಪ್ರತಿನಿಧಿ ಎಂಬಂತೆ ಆಗಿದ್ದಾರೆ.

ಬಸ್ ಕಂಡಕ್ಟರ್ ಮಗ ಇಂದು ಸ್ಟಾರ್ ಹೀರೋ

ಯಶ್ ಎಂದರೆ ಕೇವಲ ಒಬ್ಬ ಸ್ಟಾರ್ ನಟನಲ್ಲ, ಅವರೊಬ್ಬ ಚಲಿಸುವ ಶಕ್ತಿ. "ದೊಡ್ಡದಾಗಿ ಕನಸು ಕಾಣಿ, ನಿಮ್ಮ ಕನಸು ಅದೆಷ್ಟು ದೊಡ್ಡದಾಗಿರಬೇಕೆಂದರೆ, ಆ ಕನಸನ್ನು ನನಸು ಮಾಡಲು ಇಡೀ ಬ್ರಹ್ಮಾಂಡವೇ ಒಂದಾಗಬೇಕು" ಎಂಬುದನ್ನು ಯಶ್ ತಮ್ಮ ಜೀವನದ ಮೂಲಕ ಸಾಬೀತುಪಡಿಸಿದ್ದಾರೆ. ಅಂದು ಬಸ್ ಕಂಡಕ್ಟರ್ ಮಗನಾಗಿ ಗಾಂಧಿನಗರಕ್ಕೆ ಬಂದ ಹುಡುಗ, ಇಂದು ಜಾಗತಿಕ ಮಟ್ಟದ ಐಕಾನ್ ಆಗಿ ಬೆಳೆದಿರುವುದು ಒಂದು ಅದ್ಭುತ ಪವಾಡವೇ ಸರಿ.

ತನ್ನ ಸಾಮರ್ಥ್ಯದ ಮೇಲೆ ತನಗಿದ್ದ ಅಚಲವಾದ ಆತ್ಮವಿಶ್ವಾಸವೇ ಇಂದು ಅವರನ್ನು ಈ ಎತ್ತರಕ್ಕೆ ತಂದು ನಿಲ್ಲಿಸಿದೆ. ಜಗತ್ತು ಅವರಿಗೆ ಚಪ್ಪಾಳೆ ತಟ್ಟಿ ಗೌರವ ನೀಡುವ ಮೊದಲೇ, ಅವರಿಗೆ ತಮ್ಮ ಬೆಲೆ ಏನೆಂದು ಚೆನ್ನಾಗಿ ತಿಳಿದಿತ್ತು. ಎಲ್ಲದಕ್ಕಿಂತ ಮಿಗಿಲಾದದ್ದು ಆತ್ಮವಿಶ್ವಾಸ ಎಂಬ ಸತ್ಯವನ್ನು ಅವರು ನಮಗೆ ಕಲಿಸಿಕೊಟ್ಟಿದ್ದಾರೆ. ತನ್ನ ರಾಜ್ಯಕ್ಕೆ ಹೆಮ್ಮೆ ತರಬೇಕು, ಕನ್ನಡ ಸಿನಿಮಾವನ್ನು ಜಗತ್ತಿನ ಮೂಲೆ ಮೂಲೆಗೂ ತಲುಪಿಸಬೇಕು ಎಂಬ ಹಠ ಗೆದ್ದಿದೆ.

ಯಶ್ ಎಂದಿಗೂ ವಿಶ್ರಮಿಸುವವರಲ್ಲ. ಒಂದು ಗುರಿ ತಲುಪಿದ ಮೇಲೆ ಮತ್ತೊಂದು ಬೃಹತ್ ಗುರಿಯತ್ತ ಅವರ ಪಯಣ ಸಾಗುತ್ತದೆ. ಇಡೀ ಜಗತ್ತನ್ನೇ ತನ್ನ ಸಾಮ್ರಾಜ್ಯವನ್ನಾಗಿ ಮಾಡಿಕೊಳ್ಳುವ ಛಲ ಅವರ ಕಣ್ಣುಗಳಲ್ಲಿದೆ. ಕೆಜಿಎಫ್ ಮೂಲಕ ಆರಂಭವಾದ ಅವರ ವಿಜಯಯಾತ್ರೆ, ಈಗ 'ಟಾಕ್ಸಿಕ್' ಸಿನಿಮಾ ಮೂಲಕ ಮತ್ತೊಂದು ಹಂತಕ್ಕೆ ತಲುಪಲು ಸಜ್ಜಾಗಿದೆ.

ಕನಸು ಕಂಡರು, ಅದಕ್ಕಾಗಿ ಅಹೋರಾತ್ರಿ ಶ್ರಮಿಸಿದರು, ಅಸಾಧ್ಯವಾದುದನ್ನು ಸಾಧಿಸಿದರು ಮತ್ತು ಇಂದು ಸಿನಿಮಾದ ಹೊಸ ಸಾಮ್ರಾಜ್ಯಕ್ಕೆ ಅವರೇ ಒಡೆಯರಾಗಿದ್ದಾರೆ. ಅವರ ಈ ಅಸಾಧಾರಣ ಜರ್ನಿ ನಮಗೆಲ್ಲರಿಗೂ ಒಂದು ದೊಡ್ಡ ಪಾಠ. ಹುಟ್ಟುಹಬ್ಬದ ಶುಭಾಶಯಗಳು ರಾಕಿ ಭಾಯ್! ನಿಮ್ಮ ಛಲ ಮತ್ತು ಸಾಹಸ ಹೀಗೆಯೇ ಮುಂದುವರಿಯಲಿ.

ಯಶ್ ಸಕ್ಸಸ್ ಮಂತ್ರವೇನು?

ಯಶ್ ಅವರ ಯಶಸ್ಸಿನ ಹಿಂದಿರುವ ಗುಟ್ಟೆಂದರೆ ಅದು ಅವರ 'ಆತ್ಮವಿಶ್ವಾಸ'. ಇಡೀ ಜಗತ್ತು ಅವರಿಗೆ ಚಪ್ಪಾಳೆ ತಟ್ಟಿ ಗೌರವ ನೀಡುವ ಮೊದಲೇ, ಅವರಿಗೆ ತಮ್ಮ ಬೆಲೆ ಏನೆಂದು ಚೆನ್ನಾಗಿ ತಿಳಿದಿತ್ತು. "ನಾನು ಗೆದ್ದೇ ಗೆಲ್ಲುತ್ತೇನೆ" ಎಂಬ ಅಚಲ ನಂಬಿಕೆ ಅವರನ್ನು ಇಂದು ಈ ಎತ್ತರಕ್ಕೆ ತಂದು ನಿಲ್ಲಿಸಿದೆ. ಆತ್ಮವಿಶ್ವಾಸವಿದ್ದರೆ ಎಂತಹ ಗುಡ್ಡವನ್ನಾದರೂ ಸರಿಸಬಹುದು ಎಂಬುದಕ್ಕೆ ಯಶ್ ಅವರೇ ಜೀವಂತ ಉದಾಹರಣೆ.

ಕನಸು ಕಂಡರು, ಸಾಧಿಸಿದರು, ಈಗ ಸಾಮ್ರಾಜ್ಯವನ್ನೇ ಆಳುತ್ತಿದ್ದಾರೆ:

ಯಾವುದನ್ನು ಅವರು ಮನಸ್ಸಿನಲ್ಲಿ ಕನಸು ಕಂಡರೋ, ಅದಕ್ಕಾಗಿ ಅಹೋರಾತ್ರಿ ಶ್ರಮಿಸಿದರು. ಆ ಶ್ರಮದ ಫಲವಾಗಿ ಇಂದು ಅವರು ಸಿನಿಮಾದ ಹೊಸ ಸಾಮ್ರಾಜ್ಯಕ್ಕೆ ಸುಲ್ತಾನನಾಗಿ ಹೊರಹೊಮ್ಮಿದ್ದಾರೆ. ಇಂದು ಯಶ್ ಕೇವಲ ಒಬ್ಬ ನಟನಲ್ಲ, ಬದಲಾಗಿ ಕೋಟ್ಯಂತರ ಯುವಜನತೆಗೆ ಧೈರ್ಯದ ಮೂಲ. ಶೂನ್ಯದಿಂದ ವಿಶ್ವದ ಉತ್ತುಂಗಕ್ಕೇರಿದ ಅವರ ಈ ಪಯಣ ಪ್ರತಿಯೊಬ್ಬರಿಗೂ ಒಂದು ಸ್ಫೂರ್ತಿಯ ಪಾಠ.

ತಮ್ಮ ಮುಂದಿನ ಚಿತ್ರ 'ಟಾಕ್ಸಿಕ್' ಮೂಲಕ ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಲು ಸಜ್ಜಾಗಿರುವ ನಮ್ಮ ರಾಕಿ ಭಾಯ್‌ಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ನಿಮ್ಮ ಸಾಧನೆಯ ಪಯಣ ಹೀಗೆಯೇ ಮುಂದುವರಿಯಲಿ, ಕನ್ನಡದ ಕೀರ್ತಿ ಹಿರಿದಾಗಲಿ.

Happy Birthday, Rocky Bhai! 🫡🔥❤️ ಎನ್ನುತ್ತಿದೆ ಕರುನಾಡು..

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ದೊಡ್ಡದಾಗಿ ಕನಸು ಕಾಣುವುದನ್ನು ಕಲಿಸಿಕೊಟ್ಟ ಗುರು ಯಶ್'.. 'ಬಿಗ್ ಬಾಸ್' ಕಾರ್ತಿಕ್ ಮಹೇಶ್ ಪೋಸ್ಟ್ ವೈರಲ್!
Yash: ರಾಕಿಂಗ್ ಸ್ಟಾರ್ ಯಶ್ ಮೊದಲ ಸಂಭಾವನೆ ಇಷ್ಟು.. ಇಂದು ಈ ಪ್ಯಾನ್ ಇಂಡಿಯಾ ಸ್ಟಾರ್ ಎಷ್ಟು ತಗೋತಾರೆ?