
ಯಶ್ ಇಂದು ಬರ್ತ್‌ಡೇ ಬಾಯ್
ಕನ್ನಡದ ನಟ, ರಾಕಿಂಗ್ ಸ್ಟಾರ್ ಖ್ಯಾತಿಯ ನಟ ಯಶ್ (Rocking Star Yash) ಅವರು ಇಂದು ಪ್ಯಾನ್ ಇಂಡಿಯಾ ಸ್ಟಾರ್.. ಇಂದು (08 January ) ನಟ ಯಶ್ ಅವರ ಹುಟ್ಟುಹಬ್ಬ. ಇಂದು ಜಗತ್ತೇ ತಿರುಗಿ ನೋಡುವಂತೆ ಬೆಳೆದಿರುವ ನಟ ಯಶ್ ಅವರು ಹಿಂದೊಮ್ಮೆ ಅವಕಾಶಕ್ಕಾಗಿ ರಂಗಭೂಮಿ ಹಾಗೂ ಸೀರಿಯಲ್ ಆಶ್ರಯಿಸಿದ್ದ ನಟ ಎಂಬುದು ಬಹುತೇಕರಿಗೆ ಗೊತ್ತು. ಇಂದು 'ನ್ಯಾಷನಲ್ ಸ್ಟಾರ್' ಆಗಿ ಬೆಳೆದಿರುವ ಯಶ್ ತಮ್ಮ ಮೊಟ್ಟಮೊದಲ ಸಂಭಾವನೆಯನ್ನು ಎಷ್ಟು ಪಡೆದಿದ್ದರು ಎಂಬುದು ತಿಳಿದರೆ ಖಂಡಿತವಾಗಿಯೂ ಶಾಕ್ ಆಗೋದು ಗ್ಯಾರಂಟಿ!
ಹೌದು, ನಟ ಯಶ್ ಅವರು ಸಿನಿಮಾ ನಟರಾಗಲು ಬಂದಿದ್ದರು, ಅವರಿಗೆ ಮೊದಲು ಚಾನ್ಸ್ ಸಿಕ್ಕಿದ್ದು ಸೀರಿಯಲ್‌ಗಳಲ್ಲಿ. ಅದಕ್ಕೂ ಮೊದಲು ನಟ ಯಶ್ ಅವರು ಬೆನಕ ತಂಡದ ನಾಟಕಗಳಲ್ಲಿ ಭಾಗಿಯಾಗಿದ್ದರು. ಬೆನಕ ತಂಡದಲ್ಲಿ ಅಂದು ಅವರು ಪಡೆದ ಮೊದಲ ಸಂಭಾವನೆ ಕೇವಲ 50 ರೂ. ಅಂದಿನ ಕಾಲದಲ್ಲಿ 50 ರೂ.ಗೆ ಸಿಕ್ಕಾಪಟ್ಟೆ ವ್ಯಾಲ್ಯೂ ಇತ್ತು ಅನ್ನೋದು ಬೇರೆ ವಿಷಯ. ಆದರೆ ನಟ ಯಶ್ ಅವರು ಏಕಾಏಕಿ ರಾತ್ರಿ ಬೆಳಗಾಗುವುದರೊಳಗೆ ಸ್ಟಾರ್ ಆಗಿರುವ ನಟ ಅಲ್ಲ.
ನಟ ಯಶ್ ಯಾರ ಇನ್‌ಫ್ಲುಯೆನ್ಸ್ ಕೂಡ ಇಲ್ಲದೇ, ಚಿತ್ರರಂಗದ ಹಿನ್ನಲೆಯೂ ಇಲ್ಲದೇ ಚಿತ್ರರಂಗಕ್ಕೆ ಸ್ವಂತ ಪರಿಶ್ರಮದಿಂದ ಬಂದವರು. ಅವರ ಮೊದಲ ಹೆಸರು ನವೀನ್ ಕುಮಾರ್. ಆದರೆ, ಈಗ ಅವರು ಕಾನೂನುಬದ್ಧವಾಗಿ ಹೆಸರನ್ನು ಯಶ್ ಎಂದು ಬದಲಾಯಿಸಿಕೊಂಡಿದ್ದು, ಅವರೀಗ 'ಯಶ್' ಎಂದೇ ಜಗತ್ತಿನ ತುಂಬ ಪರಿಚಿತರು.
ಕಿರುತೆರೆಗೆ ಎಂಟ್ರಿ ಕೊಡುವ ಮೊದಲೂ ಅವರು ರಂಗಭೂಮಿಯಲ್ಲಿ ಕೆಲಸ ಮಾಡಿದ್ದರು. ಬೆನಕ ತಂಡದಲ್ಲಿ ಯಶ್ ನಟನೆಯ ಪಟ್ಟುಗಳನ್ನು ಕಲಿತರು. ರಂಗಭೂಮಿಯಲ್ಲಿ ನಟನೆಯ ಎಬಿಸಿಡಿ ಕಲಿತರು. ಕಾಲೇಜಿನಲ್ಲಿದ್ದಾಗಲೇ ಯಶ್ ಅವರಿಗೆ ಸಿಕ್ಕಾಪಟ್ಟೆ ಡ್ಯಾನ್ಸ್ ಹುಚ್ಚಿತ್ತು. ಅವರು ಮೊದಲು ಸಂಭಾವನೆ ಪಡೆದಿದ್ದು ಬೆನಕ ತಂಡದಲ್ಲಿ. ಆಗ ಅವರಿಗೆ ಸಿಕ್ಕಿದ್ದ ಸಂಭಾವನೆ ಕೇವಲ 50 ರೂ. ಅದರೂ ಅವರು ಹಂತಹಂತವಾಗಿ ಬೆಳದು ಇಂದು ಭಾರತದ ಸೂಪರ್ ಸ್ಟಾರ್ ಆಗಿ ಬೆಳೆದರು.
ಸಿಕ್ಕ ಮಾಹಿತಿ ಪ್ರಕಾರ, ನಟ ಯಶ್ ಅವರು ಸಿನಿಮಾ ನಟನಾಗಲು ಮನೆಯಿಂದ ಹೊರಟಾಗ, ಕೇವಲ 300 ತೆಗೆದುಕೊಂಡು ಬೆಂಗಳೂರಿಗೆ ಬಂದವರು. ಯಶ್ ರಂಗಭೂಮಿ ಬಳಿಕ ಕಿರುತೆರೆಗೆ ಕಾಲಿಟ್ಟರು. 2007 ರಲ್ಲಿ 'ಜಂಭದ ಹುಡುಗಿ' ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟರು. ಆದರೆ, ಅವರಿಗೆ ಹೆಸರು ತಂದುಕೊಟ್ಟಿದ್ದು ರಾಧಿಕಾ ಪಂಡಿತ್ ಜೊತೆಗೆ ಅಭಿನಯಿಸಿದ 'ಮೊಗ್ಗಿನ ಮನಸ್ಸು' ಸಿನಿಮಾ. ಅಲ್ಲಿಂದ ಮುಂದೆ ನಟ ಯಶ್ ಅವರು ಹಿಂತಿರುಗಿ ನೋಡಿದ್ದೇ ಇಲ್ಲ. ಇಂದು ಅವರು ಫ್ಯಾನ್ ಇಂಡಿಯಾ ಸ್ಟಾರ್.
ನಟ ಯಶ್ ಅವರು ಕನ್ನಡದಲ್ಲಿ ಹಲವಾರು ಸಿನಿಮಾಗಳನ್ನು ಮಾಡಿದ್ದಾರೆ. ಸೂಪರ್ ಹಿಟ್ ಚಿತ್ರಗಳಾದ ಮೊಗ್ಗಿನ ಮನಸ್ಸು, ರಾಜಾಹುಲಿ, ಕಿರಾತಕ, ಡ್ರಾಮಾ ಸೇರಿದಂತೆ ನಟ ಯಶ್ ಅವರು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಕೆಜಿಎಫ್ ಸಿನಿಮಾದ ಬಳಿಕವಷ್ಟೇ ನಟ ಯಶ್ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದುನಿಂತಿದ್ದಾರೆ. ಕೆಜಿಎಫ್ 1 ಹಾಗೂ ಕೆಜಿಎಫ್ 2 ಸಿನಿಮಾಗಳ ಮೂಲಕ ಯಶ್ ಅವರು ಕನ್ನಡ ಇಂಡಸ್ಟ್ರಿಯ ಸೂಪರ್ ಸ್ಟಾರ್ ಆಗಿ ಬೆಳೆದರು. ಇಂದು ಯಶ್ ಅವರ ಸಂಭಾವನೆ 50 ಕೋಟಿಯಿಂದ 100 ಕೋಟಿ ಇದೆ ಎನ್ನಲಾಗುತ್ತಿದೆ. ಜೊತೆಗೆ, ಅವರೀಗ ಸಿನಿಮಾ ನಿರ್ಮಾಣದಲ್ಲೂ ಪಾಲುದಾರರು ಆಗಿರೋದ್ರಿಂದ ಬಂದ ಲಾಭಾಂಶದಲ್ಲಿ ಕೂಡ ಪಾಲು ಸಿಗುವುದರಿಂದ ಅವರ ಸಂಭಾವನೆಯ ಲೆಕ್ಕಾಚಾರ ಸಿಗೋದು ಕಷ್ಟ!
ಕೆಜಿಎಫ್ ಸಿನಿಮಾ ಬಳಿಕ ನಟ ಯಶ್ ಅವರು 'ಟ್ಯಾಕ್ಸಿಕ್' ಸಿನಿಮಾ ಮೂಲಕ ಇದೀಗ ಪ್ಯಾನ್ ವರ್ಲ್ಡ್ ಸ್ಟಾರ್ ಅಗುವತ್ತ ಹೆಜ್ಜೆ ಇಟ್ಟಿದ್ದಾರೆ. ಈ ಮೂಲಕ ಕನ್ನಡ ಸಿನಿಮಾ ಹಾಗೂ ಸಿನಿಮಾ ಉದ್ಯಮವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ಹಂತದಲ್ಲಿದ್ದಾರೆ. ಇಂತಿಪ್ಪ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಇಂದು 40ನೇ ಜನ್ಮದಿನದ ಸಂಭ್ರಮ. ಜೊತೆಗೆ, ಯಶ್ ಅವರು ತಮ್ಮ ಅಭಿಮಾನಿಗಳಿಗೆ ಟ್ರೈಲರ್ ಟೀಸರ್ ರಿಲೀಸ್ ಮಾಡುವ ಮೂಲಕ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ. ಟ್ರೈಲರ್ ಈಗಾಗಲೇ 5.4 ಮಿಲಿಯನ್ ವೀಕ್ಷಣೆ ಪಡೆದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.