Kiran Raj: 'ಭರ್ಜರಿ ಗಂಡು' ಟೀಸರ್‌ನಲ್ಲಿ ಮಾಸ್​ ಎಂಟ್ರಿ ಕೊಟ್ಟ 'ಕನ್ನಡತಿ' ಧಾರಾವಾಹಿ ನಟ!

Suvarna News   | Asianet News
Published : Mar 10, 2022, 06:59 PM IST
Kiran Raj: 'ಭರ್ಜರಿ ಗಂಡು' ಟೀಸರ್‌ನಲ್ಲಿ ಮಾಸ್​ ಎಂಟ್ರಿ ಕೊಟ್ಟ 'ಕನ್ನಡತಿ' ಧಾರಾವಾಹಿ ನಟ!

ಸಾರಾಂಶ

'ಕನ್ನಡತಿ' ಸೀರಿಯಲ್ ಖ್ಯಾತಿಯ ಕಿರಣ್ ರಾಜ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ, ಪ್ರಸಿದ್ಧ್ ನಿರ್ದೇಶಿಸಿರುವ 'ಭರ್ಜರಿ ಗಂಡು' ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಮಾಸ್‌ ಲುಕ್‌ನಲ್ಲಿ ಖಡಕ್ ಡೈಲಾಗ್ ಹೊಡೆದಿದ್ದಾರೆ. 

ಕಿರುತೆರೆಯಲ್ಲಿ ದೊಡ್ಡ ಮಟ್ಟದಲ್ಲಿ ಕಿರಣ್​ ರಾಜ್​ (Kiran Raj) ಹೆಸರು ಮಾಡಿದ್ದಾರೆ. ಖಾಸಗಿ ವಾಹಿನಿಯ 'ಕನ್ನಡತಿ' ಧಾರಾವಾಹಿಯಲ್ಲಿ (Kannadathi Serial) ಮಿಂಚುತ್ತಿರುವ ಅವರ ಪಾತ್ರ ವೀಕ್ಷಕರಿಗೆ ಇಷ್ಟವಾಗಿದ್ದು, ಕಿರಣ್​ ರಾಜ್​ ಲವರ್ ಬಾಯ್​ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಮಾತ್ರವಲ್ಲದೇ ಈಗಾಗಲೇ ಒಂದೆರೆಡು ಚಿತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಕಿರಣ್ ರಾಜ್ ಅಭಿನಯದ 'ಭರ್ಜರಿ ಗಂಡು' (Bharjari Gandu) ಚಿತ್ರದ ಟೀಸರ್ ಬಿಡುಗಡೆಯಾಗಿದೆ. ವಿಶೇಷವಾಗಿ ಈ ಚಿತ್ರದಲ್ಲಿ ಅವರ ಸ್ಟೈಲ್​, ಲುಕ್​ ಸಂಪೂರ್ಣ ಭಿನ್ನವಾಗಿದೆ. ಅವರ ಮೈಕಟ್ಟು ನೋಡಿ ಅನೇಕರು ಫಿದಾ ಆಗಿದ್ದಾರೆ. ಮಾತ್ರವಲ್ಲದೇ ಅವರ ಆ್ಯಕ್ಷನ್​ ದೃಶ್ಯಗಳನ್ನು ಕಣ್ತುಂಬಿಕೊಂಡು ಅಭಿಮಾನಿಗಳು ಖುಷಿಪಟ್ಟಿದ್ದಾರೆ. 

ಬಿಡುಗಡೆಯಾದ 'ಭರ್ಜರಿ ಗಂಡು' ಟೀಸರ್‌ನಲ್ಲಿ ಮಾಸ್‌ ಲುಕ್‌ನಲ್ಲಿ ಕಿರಣ್ ರಾಜ್ ಎಂಟ್ರಿ ಕೊಟ್ಟಿದ್ದು, ಲವರ್ ಬಾಯ್​ ರೀತಿಯಲ್ಲೂ ಕಾಣಿಸಿಕೊಂಡಿದ್ದಾರೆ. ಚಿತ್ರದ ಟೀಸರ್‌ನಲ್ಲಿ ಕಿರಣ್ ರಾಜ್ ಸಖತ್ತಾಗಿ ಡೈಲಾಗ್ ಹೊಡೆದಿದ್ದಾರೆ. 'ಪ್ರೀತಿ ಮಾಡೋಕೆ ಶುರು ಮಾಡಿದರೆ ಪ್ರೀತಿಸಿದವಳ ಹೃದಯ ಗೆಲ್ಲೋವರೆಗೂ ಬಿಡಲ್ಲ. ದ್ವೇಷ ಮಾಡೋಕೆ ಶುರು ಮಾಡಿದ್ರೆ, ದ್ವೇಷಿಸಿದವನ ಹೃದಯ ನಿಲ್ಲೋವರೆಗೂ ಬಿಡಲ್ಲ' ಎಂಬ ಡೈಲಾಗ್​ ಟೀಸರ್‌ನಲ್ಲಿ​ ಹೈಲೈಟ್​ ಆಗಿದೆ. ಈ ಟೀಸರ್‌ಗೆ ನಾನಾ ರೀತಿಯಲ್ಲಿ ಮೆಚ್ಚುಗೆಯ ಕಮೆಂಟ್​ಗಳು ಬರುತ್ತಿದ್ದು, ಒಳ್ಳೆಯ ಟೀಸರ್, ಚಿತ್ರಕ್ಕೆ ಒಳ್ಳೆಯದಾಗಲಿ ಹಾಗೂ ಕಿರಣ್ ರಾಜ್ ಅವರಿಗೆ ಒಳ್ಳೆಯದಾಗಲಿ' ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

Kiran Raj: ಪುನೀತ್ ರಾಜ್‌ಕುಮಾರ್‌ಗಾಗಿ 'ಬಹದ್ದೂರು ಗಂಡು' ಶೀರ್ಷಿಕೆ ಬದಲಾವಣೆ!

ಈ ಮೊದಲು ಚಿತ್ರಕ್ಕೆ 'ಬಹದ್ದೂರ್ ಗಂಡು' (Bahaddur Gandu) ಎಂದು ಹೆಸರಿಡಲಾಗಿತ್ತು. ಆ ನಂತರ 'ಭರ್ಜರಿ ಗಂಡು' ಎಂದು ಟೈಟಲ್ ಬದಲಾಯಿಸಲಾಗಿದೆ. ಈ ಬಗ್ಗೆ ಕಿರಣ್ ರಾಜ್, ನಾವು ಈ ಮೊದಲು 'ಬಹದ್ದೂರ್ ಗಂಡು' ಎಂಬ ಶೀರ್ಷಿಕೆ ಇಟ್ಟು ಸಿನಿಮಾ ಮಾಡಲು ಮುಂದಾಗಿದ್ದೆವು. ಆದರೆ  'ಬಹದ್ದೂರ್ ಗಂಡು' ಚಿತ್ರದ ಟೈಟಲ್ ಅನ್ನು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ (Puneeth Rajkumar) ಅವರಿಗೆ ಅರ್ಪಿಸಿ ಚಿತ್ರದ ಟೈಟಲ್ ಬದಲಾಯಿಸಿಕೊಂಡು ನಮ್ಮ ಚಿತ್ರತಂಡ ಹೆಮ್ಮೆ ಮೆರೆದಿದೆ ಎಂದು ಇನ್‌ಸ್ಟಾಗ್ರಾಮ್ (Instagram) ಖಾತೆಯಲ್ಲಿ ಬರೆದುಕೊಂಡಿದ್ದರು.



ಪ್ರಸಿದ್ಧ್ (Prasiddh) ಆಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಡಬಲ್‌ ಶೇಡ್‌ಗಳಲ್ಲಿ ಕಿರಣ್ ಕಾಣಿಸಿಕೊಂಡಿದ್ದಾರೆ. ಚಿತ್ರದ ಸಲುವಾಗಿ ದೇಹವನ್ನು ಹುರಿಗೊಳಿಸಿರುವ ಅವರು, ದೊಣ್ಣೆ ವರಸೆ ಸಾಹಸದಲ್ಲಿ ಮಿಂಚಿದ್ದಾರೆ. ಸಿನಿಮಾದ ಕ್ಲೈಮ್ಯಾಕ್ಸ್​ನಲ್ಲಿ ಬರುವ ಫೈಟ್​ಗೋಸ್ಕರ್​ ಕಿರಣ್​ ರಾಜ್​ ನಾಲ್ಕು ತಿಂಗಳ ಕಾಲ ಸತತವಾಗಿ ವರ್ಕೌಟ್​ ಮಾಡಿದ್ದಾರೆ. 'ರಾತ್ರಿ 12ರಿಂದ ಮುಂಜಾನೆ 4:30ವರೆಗೆ ನಾನು ನಿರಂತರವಾಗಿ 4 ತಿಂಗಳು ವರ್ಕೌಟ್​ ಮಾಡಿದ್ದೇನೆ. ಅದು ಸಿನಿಮಾದಲ್ಲಿ ಬರುವ ಕ್ಲೈಮ್ಯಾಕ್ಸ್​ ದೃಶ್ಯಕ್ಕೋಸ್ಕರ. ಬೆಳಗ್ಗೆ ಧಾರಾವಾಹಿ ಶೂಟಿಂಗ್​, ಚ್ಯಾರಿಟಿ ಕೆಲಸಗಳು ಇರುತ್ತಿದ್ದವು. ಹೀಗಾಗಿ, ರಾತ್ರಿ ವರ್ಕೌಟ್​ ಮಾಡುತ್ತಿದ್ದೆ' ಎಂದು ಕಿರಣ್​ ರಾಜ್​ ಈ ಹಿಂದೆ ತಿಳಿಸಿದ್ದರು.

ಈ ಚಿತ್ರದ ಭರ್ಜರಿ ಸಾಹಸ ಸನ್ನಿವೇಶವೊಂದರ ಚಿತ್ರೀಕರಣ ಇತ್ತೀಚೆಗೆ ನಂದಿ ಬೆಟ್ಟದ (Nandi Hills) ಬಳಿ ನಡೆದಿದೆ. ನಾಯಕ ಕಿರಣ್ ರಾಜ್ ಈ ಸಾಹಸ ಸನ್ನಿವೇಶಕ್ಕಾಗಿ ಸುಮಾರು ಮೂರು ತಿಂಗಳಿನಿಂದ ದೊಣ್ಣೆ ವರಸೆ ಕಲಿತಿದ್ದರಂತೆ. ಕಿರಣ್ ರಾಜ್ ಹಾಗೂ ಶಬರಿ ಮಂಜು (Shabari Manju) ಅವರ ನಡುವೆ ಈ ಸಾಹಸ ದೃಶ್ಯ ನಡೆಯುತ್ತದೆ. ವಿನೋದ್ (Vinod) ಅವರ ಸಾಹಸ ನಿರ್ದೇಶನದಲ್ಲಿ ಅದ್ದೂರಿಯಾಗಿ ಈ ಸನ್ನಿವೇಶ ಮೂಡಿಬಂದಿದೆ. ನಮ್ಮ ಚಿತ್ರದಲ್ಲಿ ನಾಲ್ಕು ಸಾಹಸ ಸನ್ನಿವೇಶಗಳಿದೆ. ಈ ಸಾಹಸ ಸನ್ನಿವೇಶದಲ್ಲಿ ದೊಣ್ಣೆ ವರಸೆ ಪ್ರಮುಖ ಆಕರ್ಷಣೆ. ಇದಕ್ಕಾಗಿ ನಾಯಕ ಕಿರಣ್ ರಾಜ್ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ ಎಂದು ನಿರ್ದೇಶಕ ಪ್ರಸಿದ್ದ್ ಹೇಳಿದ್ದಾರೆ. 

Kiran Raj: ನಂದಿ ಬೆಟ್ಟದಲ್ಲಿ 'ಬಹದ್ದೂರು ಗಂಡು' ಸಾಹಸ ದೃಶ್ಯ ಚಿತ್ರೀಕರಣ

ಇನ್ನು 'ಭರ್ಜರಿ ಗಂಡು' ಚಿತ್ರದಲ್ಲಿ ಯಶಾ ಶಿವಕುಮಾರ್‌ (Yasha Shivakumar) ಮತ್ತು ನಿಸರ್ಗ ಲಕ್ಷ್ಮಣ್ (Nisarga Lakshman) ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಪ್ರಸಿದ್ಧ್ ಸಿನಿಮಾಸ್ ಸಂಸ್ಥೆ (Prasiddh Cinemas) ಹಾಗೂ ರಮೇಶ್ ರೆಡ್ಡಿ (Ramesh Reddy) ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಬಹುಬೇಗನೆ ಚಿತ್ರದ ಚಿತ್ರೀಕರಣ ಮುಗಿಸಿ ಈ ವರ್ಷದಲ್ಲಿ'ಭರ್ಜರಿ ಗಂಡು ಬಿಡುಗಡೆ ಆಗೋದಕ್ಕೆ ಸಜ್ಜಾಗಿದೆ. ಗುಮ್ಮಿನೇನಿ ವಿಜಯ್ ಸಂಗೀತ ಸಂಯೋಜನೆ, ವೆಂಕಿ ಯು ಡಿ ವಿ ಸಂಕಲನ, ಕಿಟ್ಟಿ ಕೌಶಿಕ್ ಛಾಯಾಗ್ರಾಹಣ, ಮಳ್ಳವಳ್ಳಿ ಸಾಯಿಕೃಷ್ಣ ಅವರ ಸಂಭಾಷಣೆ ಸೇರಿದಂತೆ ಮೋಹನ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ