ಪ್ರಸ್ತುತ ಕಾಲಕ್ಕೆ ಬೇಕಾದ ಉತ್ತಮ ಸಿನಿಮಾ ಗಾಳಿಪಟ 2: ಅನಂತನಾಗ್‌

By Kannadaprabha News  |  First Published Apr 25, 2022, 9:01 AM IST
  • ಭಟ್ಟರು ಬರುತ್ತಿದ್ದಾರೆ ದಾರಿಬಿಡಿ
  • ಪ್ರಸ್ತುತ ಕಾಲಕ್ಕೆ ಬೇಕಾದ ಉತ್ತಮ ಸಿನಿಮಾ ಗಾಳಿಪಟ 2: ಅನಂತನಾಗ್‌

ಆಪ್ತವಾದ ತಂಡವೊಂದು ಮತ್ತೆ ಜೊತೆಗೂಡಿ ಸಿನಿಮಾ ಮಾಡಿದರೆ ಆ ತಂಡದ ಬಾಂಧವ್ಯ ಎಷ್ಟುಮಧುರವಾಗಿರುತ್ತದೆ ಎಂಬುದಕ್ಕೆ ಸಾಕ್ಷಿ ಗಾಳಿಪಟ 2 ತಂಡ. ಯೋಗರಾಜ ಭಟ್ಟರ ಸಿನಿಮಾ ಚಿತ್ರಮಂದಿರಕ್ಕೆ ಬರಲು ತಯಾರಾಗುತ್ತಿದೆ. ಈ ಮಧ್ಯೆ ಎಕ್ಸಾಮ್‌ ಹಾಡಿನ ಬಿಡುಗಡೆಗೆ ಜೊತೆಯಾಗಿದ್ದ ಗಾಳಿಪಟ 2 ತಂಡದ ಎಲ್ಲರೂ ಆಪ್ತವಾಗಿ, ಮನಸ್ಸು ತಾಕುವ ಹಾಗೆ ಮಾತನಾಡಿದರು.

ಮನೆಯ ಹಿರಿಯನಂತೆ ಮಾತನಾಡಿದ ಅನಂತ್‌ನಾಗ್‌, ‘ಯೋಗರಾಜ ಭಟ್ಟರಿಗೆ ಸುಧಾಮೂರ್ತಿ ಗಾಡ್‌ ಮದರ್‌ ಇದ್ದಂತೆ. ಅವರೇ ಈ ಸಿನಿಮಾ ಆಗಲು ಕಾರಣಕರ್ತರು. ಈ ಸಿನಿಮಾ ಆಗುವಾಗಲೇ ಭಟ್ರಿಗೆ ಮುಂಗಾರು ಮಳೆ ಸಿನಿಮಾ ಸಂದರ್ಭದಲ್ಲಿ ಕಷ್ಟಪಟ್ಟಂತೆ ಕೆಲಸ ಮಾಡಬೇಕು ಎಂದು ಹೇಳಿದ್ದೆ. ಅವರು ಮನಸ್ಸು ಕೊಟ್ಟು ಕೆಲಸ ಮಾಡಿದರೆ ಯಾವ ಥರ ಸಿನಿಮಾ ಮಾಡಬಹುದು ಅನ್ನುವುದಕ್ಕೆ ಈ ಸಿನಿಮಾ ಪುರಾವೆ. ಅವರಲ್ಲಿ ಕನ್ನಡದ ನಿಷ್ಠೆ ಇದೆ. ನನಗೆ ಒಂದು ಅದ್ಭುತ ಪಾತ್ರ ಇದೆ. ಕನ್ನಡತನ ಉಳಿಸಿಕೊಳ್ಳಬೇಕಾದರೆ ಏನು ಮಾಡಬೇಕು ಎಂದು ತೋರಿಸಿಕೊಟ್ಟಿದ್ದಾರೆ. ಪ್ರಸ್ತುತ ಕಾಲಕ್ಕೆ ಬೇಕಾದ ಅತ್ಯುತ್ತಮ ಸಿನಿಮಾ ಇದು’ ಎಂದರು.

Tap to resize

Latest Videos

ಕಡಿಮೆ ಮಾತಿನ ನಿರ್ಮಾಪಕ ರಮೇಶ್‌ ರೆಡ್ಡಿ ನಂಗ್ಲಿ ಕೂಡ ಅಂದು ಉತ್ಸಾಹಿತರಾಗಿದ್ದರು. ‘ಒಮ್ಮೆ ಸುಧಾಮೂರ್ತಿ ಮೇಡಮ್‌ ನನ್ನ ಬಳಿ ಭಟ್ರ ಬಳಿ ಒಳ್ಳೆಯ ಕತೆ ಇದೆಯಂತೆ, ಸಿನಿಮಾ ಮಾಡ್ತೀಯಾ ಎಂದು ಕೇಳಿದರು. ಸುಧಾಮೂರ್ತಿ ಮೇಡಮ್‌ ನನ್ನ ಅಮ್ಮನ ಥರ. ನಾನು ಈ ಜಾಗಕ್ಕೆ ಬರಲು ಅವರೇ ಕಾರಣ. ಅವರ ಮಾತಿಗೆ ನಾನು ಎದುರು ಮಾತನಾಡಲ್ಲ. ನಾನು ಸರಿ ಎಂದು ಒಪ್ಪಿ ಮಾಡಿದೆ. ಈ ಸಿನಿಮಾ ನೋಡಿದರೆ ಖುಷಿಯಾಗುತ್ತದೆ. ಕಣ್ಣಲ್ಲಿ ನೀರು ಬರೋ ಥರ ಸಿನಿಮಾ ಮಾಡಿದ್ದಾರೆ ಭಟ್ರು. ನಾನು ಈಗಾಗಲೇ 4 ಸಲ ಪರೀಕ್ಷೆ ಬರೆದಿದ್ದೇನೆ. ಫೇಲಾಗಿದ್ದೇನೆ. 5ನೇ ಸಲ ಪಾಸಾಗುವ ನಿರೀಕ್ಷೆ ಇದೆ’ ಎಂದರು.

Gaalipata 2: ದಾಖಲೆ ಮೊತ್ತಕ್ಕೆ ಭಟ್ರು-ಗಣಿ ಚಿತ್ರದ ಸ್ಯಾಟಲೈಟ್ ಮತ್ತು ಡಿಜಿಟಲ್ ಹಕ್ಕು ಮಾರಾಟ

ಯೋಗರಾಜ ಭಟ್ಟರು ಸ್ವಲ್ಪ ಗಂಭೀರವಾಗಿದ್ದರು. ವೇದಿಕೆ ಮೇಲೆ ಬಂದು ಸುದೀರ್ಘವಾಗಿ ಮಾತನಾಡಿ ಸರ್ವರಿಗೂ ಧನ್ಯವಾದ ಸಲ್ಲಿಸಿದರು. ಕೊನೆಯಲ್ಲಿ ಮಾತನಾಡಲು ಬಂದ ಗಣೇಶ್‌ ಎಲ್ಲರ ಕಾಲೆಳೆಯುತ್ತಲೇ ಈ ಸಿನಿಮಾ ಅದ್ಭುವಾಗಿದೆ ಎಂದು ಹೇಳಿಕೊಂಡರು. ದೃಶ್ಯ ಚಿತ್ರೀಕರಿಸುತ್ತಾ ಭಟ್ಟರು ಕಣ್ಣೀರು ಹಾಕಿದ್ದನ್ನು ನೆನಪಿಸಿಕೊಂಡರು. ಆನಂದ್‌ ಆಡಿಯೋದ ಶಾಮ್‌, ವಿಜಯ್‌ ಸೂರ್ಯ, ಪವನ್‌ ಕುಮಾರ್‌, ಜಯಂತ್‌ ಕಾಯ್ಕಿಣಿ, ನಾಯಕಿಯರಾದ ಶರ್ಮಿಳಾ ಮಾಂಡ್ರೆ, ವೈಭವಿ ಶಾಂಡಿಲ್ಯ, ನಿಶ್ವಿಕ ನಾಯ್ಡು, ಪದ್ಮಜಾ ರಾವ್‌, ಸಂತೋಷ್‌ ರೈ ಪಾತಾಜೆ, ರಂಗಾಯಣ ರಘು ಇದ್ದರು.

click me!