ಎಂದೂ ಹುಟ್ಟುಹಬ್ಬ ಆಚರಿಸದ ಹಿರಿಯ ನಟನಿಂದ ಕೇಕ್ ಕಟ್‌ ಮಾಡಿಸಿದ ಪ್ರಥಮ್!

Suvarna News   | Asianet News
Published : Jun 28, 2020, 05:02 PM IST
ಎಂದೂ ಹುಟ್ಟುಹಬ್ಬ ಆಚರಿಸದ ಹಿರಿಯ ನಟನಿಂದ ಕೇಕ್ ಕಟ್‌ ಮಾಡಿಸಿದ ಪ್ರಥಮ್!

ಸಾರಾಂಶ

68ರ ಸಂಭ್ರಮದಲ್ಲಿರುವ ಹಿರಿಯ ನಟ ಬಿರಾದರ್‌ ಅವರಿಗೆ ಬರ್ತೆಡೇ ಸರ್ಪ್ರೈಸ್‌ ಕೊಟ್ಟ ಸ್ಯಾಂಡಲ್‌ವುಡ್‌ ಒಳ್ಳೆ ಹುಡುಗ ಪ್ರಥಮ್..

ಜೂನ್‌ 26ರಂದು  ಕನ್ನಡ ಚಿತ್ರರಂಗದ ಹಿರಿಯ ಹಾಸ್ಯ ಕಲಾವಿದ  ವೈಜನಾಥ್‌ ಬಿರಾದಾರ್‌  ಅವರು 68ರ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರ ಸಂತೋಷದ ದಿನದಂದು ಸರ್ಪ್ರೈಸ್ ನೀಡಿದ  ನಟ ಒಳ್ಳೆ ಹುಡುಗ ಪ್ರಥಮ್‌ ಜನರ ಮೆಚ್ಚುಗೆ ಪಡೆದುಕೊಂಡಿದ್ದಾರೆ...

ಮದ್ರಾಸಿನ ಆ 30 ರೂ., ಜೀವನವನ್ನೇ ಬದಲಾಯಿಸಿದ ಉಪ್ಪಿ-ಬಿರಾದಾರ್ ಒಪ್ಪಂದ! 

ಹೌದು! ನಟ ಬಿರಾದಾರ್ ಎಂದೂ ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡವರಲ್ಲ. ಪ್ರತಿ ವರ್ಷವೂ ಆ ಭಗವಂತನಲ್ಲಿ ನೆಮ್ಮದಿ ಹಾಗೂ ಆರೋಗ್ಯ ಬೇಡಿಕೊಳ್ಳುವ ಇವರಿಗೆ ಈ ವರ್ಷ ದೊಡ್ಡ ಸರ್ಪ್ರೈಸ್‌ವೊಂದು ಕಾದಿತ್ತು. ಕನ್ನಡ ಚಿತ್ರರಂಗದಲ್ಲಿ ಎಲ್ಲರನ್ನೂ ಒಂದೇ ರೀತಿಯಲ್ಲಿ  ಆತ್ಮೀಯತೆಯಿಂದ ಮಾತನಾಡಿಸುತ್ತಾ ಉತ್ತಮ ಬಾಂಧವ್ಯ ಹೊಂದಿರುವ ನಟಭಯಂಕರ ಪ್ರಥಮ್‌ ಮಾಡಿರುವ ಒಳ್ಳೆ  ಕೆಲಸಕ್ಕೆ ಕನ್ನಡ ಸಿನಿ ಪ್ರೇಮಿಗಳ  ಮೆಚ್ಚುಗೆ ಪಡೆದುಕೊಂಡಿದ್ದಾರೆ. 

 

ಬಡತನದಲ್ಲೇ ಹುಟ್ಟಿ ಬೆಳೆದ ಬಿರಾದಾರ್‌ ಎಂದೂ ಬರ್ತಡೇ ಕೇಕ್‌ ಅಂತ ಸಂಭ್ರಮಿಸಿದವರಲ್ಲ ಆದರೆ  ಈ ವರ್ಷ ಹುಟ್ಟು ಹಬ್ಬ ಆಚರಿಸಲೇ ಬೇಕು ಎಂದು ಅವರ ಮನಗೆ ಕೇಕ್‌ ಹಿಡಿದು ಹೊರಟಿದ್ದಾರೆ ಪ್ರಥಮ್. ಈ ವಿಡಿಯೋವನ್ನು ಪ್ರಥಮ್‌ ಅಭಿಮಾನಿಗಳು ಶೇರ್ ಮಾಡಿಕೊಂಡಿದ್ದಾರೆ. ಸಂತೋಷದಿನದಂದು ಭಾವುಕರಾದ ಬಿರಾದಾರ್‌ ಮಾತನಾಡಿದ್ದಾರೆ.

'ಎಲ್ಲರಿಗೂ ನನ್ನ ಶಿರಸಾಷ್ಟಾಂಗ ನಮಸ್ಕಾರಗಳು, ನಾನು ರಂಗಭೂಮಿ ಹಾಗೂ ಚಲನಚಿತ್ರ ನಟ. ಇವತ್ತು ಖುಷಿ ದಿನ ಯಾಕೆ ಅಂದ್ರೆ ಇಷ್ಟು ವರ್ಷ ಆದ್ರೂ ನಾನು ಕೇಕ್‌ ಕಟ್‌ ಮಾಡಿರಲಿಲ್ಲ. ಪ್ರಥಮವಾಗಿ ಪ್ರಥಮ್ ಅವರು ಬಂದು ಕಟ್ ಮಾಡಿಸಿದ್ದಾರೆ' ಎಂದು ಬಿರಾದಾರ್‌ ಮಾತನಾಡಿದ್ದಾರೆ. 

 

ವೈಜನಾಥ್‌ ಬಿರಾದಾರ್‌ ಹುಟ್ಟಿದ್ದು 1952 ಜೂನ್‌ 26ರಂದು ಬೀದರ್‌ನಲ್ಲಿ. ರಂಗಭೂಮಿ ಕಲಾವಿದನಾಗಿರುವ ಇವರು ಅನೇಕ ಕನ್ನಡ ಸಿನಿಮಾಗಳಲ್ಲಿ ಹಾಸ್ಯ ಕಲಾವಿದನಾಗಿ ಮಿಂಚಿದ್ದಾರೆ. ಅಷ್ಟೆ ಅಲ್ಲದೆ ಗಿರಿಶ್‌ ಕಾಸರವಳ್ಳಿ ನಿರ್ದೇಶನ 'ಕನಸೆಂಬ ಕುದುರೆಯನೇರಿ' ಚಿತ್ರಕ್ಕೆ ಸ್ಪೇನ್‌ ದೇಶದಲ್ಲಿ 2011 ಇಂಡಿಯಾ ಮ್ಯಾಗಜಿನ್‌ ಅವರ ಟಾಪ್‌ ನಟ ಎಂದ ಪ್ರಶಸ್ತಿ ಪಡೆದುಕೊಂಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ