ಕನ್ನಡದ ಖ್ಯಾತ ಹಾಸ್ಯ ನಟ ಮೋಹನ್ ಜುನೇಜಾ ಇನ್ನಿಲ್ಲ

Published : May 07, 2022, 08:45 AM ISTUpdated : May 07, 2022, 10:12 AM IST
ಕನ್ನಡದ ಖ್ಯಾತ ಹಾಸ್ಯ ನಟ ಮೋಹನ್ ಜುನೇಜಾ ಇನ್ನಿಲ್ಲ

ಸಾರಾಂಶ

ಅನಾರೋಗ್ಯದಿಂದ ಕೊನೆಯುಸಿರೆಳೆದ ಚಿತ್ರರಂಗದ ಹಿರಿಯ ನಟ ಮೋಹನ್ ಜುನೇಜಾ.

ಕನ್ನಡ ಚಿತ್ರರಂಗ ಮತ್ತು ಕಿರುತೆರೆ ಜನಪ್ರಿಯ ಹಾಸ್ಯ ನಟ ಮೋಜನ್ ಜುನೇಜಾ (Mohan Juneja) ಅವರು ಇಂದು ಅಗಲಿದಾರೆ. ಅನಾರೋಗ್ಯದಿಂದ ಬಳಲುತ್ತಿದ್ದು ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. 

ಮೋಹನ್‌ ಅವರು ಶನಿವಾರ ಬೆಳಗ್ಗೆ 6.15ಕ್ಕೆ ನಿಧನರಾಗಿದ್ದಾರೆ. ಅವರ ಕಿರಿಯ ಪುತ್ರ ಅಕ್ಷಯ್ ಖಾಸಗಿ ವೆಬ್‌ ಸೈಟ್‌ಗೆ ಮಾಹಿತಿ ನೀಡಿದ್ದಾರೆ.  ಮೋಹನ್ ಅವರಿಗೆ ಕರುಳಿನ ತೊಂದರೆ ಅಗಿದ್ದು ಚಿಕ್ಕಬಾಣಾವರದ ಸಪ್ತಗಿರಿ ಆಸ್ಪತ್ರೆಗೆ ದಾಖಲಾಗಿದ್ದರು ಆದರೆ ಆರೋಗ್ಯದ ಪರಿಸ್ಥಿತಿ ಅಂತಿಮ ಹಂತ ತಲುಪಿದ ಕಾರಣ ವೈದ್ಯರು ಕೈಮೀರಿದೆ ಎಂದು ಹೇಳಿದ್ದರಂತೆ. 

ಶ್ರೀಯುತ ಮೋಹನ್‌ ಜುನೇಜಾ ಅವರ ಕೆಜಿಎಫ್ (KGF)  ಚಾಪ್ಟರ್ 1 ಮತ್ತು ಚಾಪ್ಟರ್ 2 ರಲ್ಲಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಪ್ರಮುಖ ಪಾತ್ರವಾಗಿದ್ದು ಸಿನಿ ರಸಿಕರ ಗಮನ ಸೆಳೆದಿದ್ದಾರೆ. ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುವ ಹಿಟ್ಲರ್ ಕಲ್ಯಾಣ (Hitler Kalyana) ಧಾರಾವಾಹಿಯಲ್ಲಿ ಇತ್ತೀಚಿಗೆ ಕಾಣಿಸಿಕೊಂಡಿದ್ದರು. ಹೆಣ್ಣು ಮಕ್ಕಳಿಗೆ ತಾಳಿ ಮಹತ್ವ ಸಾರಿದ್ದರು. 

ಚೆಲ್ಲಾಟ (Chellata) ಸಿನಿಮಾದಲ್ಲಿ ಮೋಹನ್ ಮಧುಮಗ ಪಾತ್ರದಲ್ಲಿ ಕಾಣಿಸಿಕೊಂಡು ಸಿನಿ ರಸಿಕರ ಗಮನ ಗಿಟ್ಟಿಸಿಕೊಂಡಿದ್ದಾರೆ. ಹೀಗಾಗಿ ಸಿನಿಮಾ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಮುಟ್ಟಿತ್ತು. ಪ್ರತಿಯೊಂದು ಸಿನಿಮಾದಲ್ಲಿ ಮೋಹನ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಪ್ರತಿಯೊಂದು ಪಾತ್ರವೂ ದೊಡ್ಡ ಮಟ್ಟದಲ್ಲಿ ಹೆಸರು ಮಾಡುತ್ತಿತ್ತು.

ಎಂಬತ್ತು ದಶಕಗಳ ಕಾಲ ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕರಾಗಿ (Assisent Director) ಕೆಲಸ ಮಾಡಿದ್ದಾರೆ. ಸಣ್ಣ ಪುಟ್ಟ ಪಾತ್ರಗಳ ಮೂಲಕ ಹಾಸ್ಯ ನಟನಾಗಿ ತೆರೆ ಮೇಲಿನ ಜರ್ನಿ ಆರಂಭಿಸಿದ್ದರು. ಮೋಹನ್ ಅವರ ಮೊದಲ ಸಿನಿಮಾ 'ವಾಲ್ ಪೋಸ್ಟರ್' (Wall Poster) ಮತ್ತು ಅವರ ಮೊದಲ ಧಾರಾವಾಹಿ 'ವಠಾರ' (Vatara). ಅವರ ಮೊದಲ ಸಿನಿಮಾ ಮೂರ್ನಾಲ್ಕು ಪ್ರಶಸ್ತಿ ಪಡೆದುಕೊಂಡಿದೆ.  ಸುಮಾರು 500 ಸಿನಿಮಾಗಳಲ್ಲಿ ನಟಿಸಿದ್ದಾರೆ. ಪವರ್ ಸ್ಟಾರ್ (Puneeth Rajkumar) ಪುನೀತ್ ರಾಜ್‌ಕುಮಾರ್ ಅವರ ಜೇಮ್ಸ್‌ (James) ಸಿನಿಮಾ ಮತ್ತು ರಿಯಲ್ ಸ್ಟಾರ್ ಉಪೇಂದ್ರ ಕಬ್ಜ (Upendra Kabza) ಸಿನಿಮಾದಲ್ಲೂ ಸಿನಿಮಾ. 

ಮೋಹನ್ ಅವರು ಪತ್ನಿ ಕುಸುಮಾ (Kusuma Mohan) ಮತ್ತು ಇಬ್ಬರು ಮಕ್ಕಳಾದ ಅಕ್ಷಯ್ (22 ವರ್ಷ) ಮತ್ತು ಅಶ್ವಿನ್ (26 ವರ್ಷ) ಅವರನ್ನು ಅಗಲಿದ್ದಾರೆ. ಮೋಹನ್ ಕಿರಿಯ ಪುತ್ರ ಅಕ್ಷಯ್ ಅವರಿಗೆ ಛಾಯಾಗ್ರಹಣದಲ್ಲಿ ಆಸಕ್ತಿ ಹೆಚ್ಚಿದೆ. ಹಿರಿಯ ಪುತ್ರ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ, ವಿಫಲರಾದ ಕಾರಣ ಖಾಸಗಿ ವೃತ್ತಿಯಲ್ಲಿ ತೊಗಿಸಿಕೊಂಡಿದ್ದಾರೆ.

ಮೋಹನ್‌ ಜುನೇಜಾ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?