ಆ.20ಕ್ಕೆ ಶಾರ್ದೂಲಾ ಚಿತ್ರ ಬಿಡುಗಡೆ

Published : Aug 18, 2021, 02:13 PM IST
ಆ.20ಕ್ಕೆ ಶಾರ್ದೂಲಾ ಚಿತ್ರ ಬಿಡುಗಡೆ

ಸಾರಾಂಶ

ಶಾರ್ದೂಲಾ ಸಿನಿಮಾ ಆ.20ಕ್ಕೆ ಬಿಡುಗಡೆ ಕೊರೋನಾ ಮಧ್ಯೆ ಥಿಯೇಟರ್‌ಗೆ ಬರ್ತಿದೆ ಹೊಸ ಸಿನಿಮಾ  

ಅರವಿಂದ್ ಕೌಶಿಕ್ ನಿರ್ದೇಶನದ ಶಾರ್ದೂಲಾ ಸಿನಿಮಾ ಆ.20ಕ್ಕೆ ಬಿಡುಗಡೆ ಆಗುತ್ತಿದೆ. ಹಾರರ್ ಸಸ್ಪೆನ್‌ಸ್ ಕಥೆ ಆಧರಿತ ಚಿತ್ರ ಇದಾಗಿದೆ. ಚೇತನ್ ಚಂದ್ರ, ರವಿ ತೇಜ, ಕೃತಿಕ  ರವೀಂದ್ರ, ಐಶ್ವರ್ಯ ಪ್ರಸಾದ್, ಕಲ್ಯಾಣ್, ಹೃಷಿಕೇಶ್, ಮಹೇಶ್, ನವೀನ್ ಕುಮಾರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಇದೊಂದು ಉತ್ತಮ ಕಥಾಹಂದರ ಹೊಂದಿರುವ ಚಿತ್ರ. ಎಲ್ಲ ಕಲಾವಿದರ ಅಭಿನಯವೂ ಚೆನ್ನಾಗಿದೆ. ಕೊರೋನಾ ಸಂಕಷ್ಟದ ನಡುವೆಯೂ ಮನೋರಂಜನೆ ನೀಡಲು ನಮ್ಮ ಚಿತ್ರ ಥಿಯೇಟರ್‌ಗೆ ಬರುತ್ತಿದೆ ಎಂದರು ಚೇತನ್ ಚಂದ್ರ. ಎಂದಿನಂತೆ ಈ ಚಿತ್ರದ ಮೂಲಕವೂ ಹೊಸದೊಂದು ಕತೆಯನ್ನು ಹೇಳುವುದಕ್ಕೆ ಹೊರಟಿದ್ದೇನೆ ಎಂದಿದ್ದಾರೆ.

ಮತ್ತೆ ಜನುಮದ ಜೋಡಿ ಕಾಲಕ್ಕೆ ಮರಳಿದಂತಿದೆ : ಶಿವರಾಜ್‌ ಕುಮಾರ್‌

ನೋಡುಗರಿಗೆ ಈ ಸಿನಿಮಾ ಇಷ್ಟವಾಗುತ್ತದೆ ಎನ್ನುವ ಭರವಸೆ ಇದೆ ಎಂದಿದ್ದು ಅರವಿಂದ್ ಕೌಶಿಕ್.ಸುಮಾರು ಐವತ್ತಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ನಮ್ಮ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ. ಇಂತಹ ಸಮಯದಲ್ಲಿ ಪ್ರೇಕ್ಷಕರೆ ನಮ್ಮ ಕೈಹಿಡಿಯಬೇಕು. ಕೊರೋನ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಬಿಡುಗಡೆ ಮಾಡುತ್ತಿದ್ದೇವೆ.

ಯಾವುದೇ ಭಯವಿಲ್ಲದೇ ಚಿತ್ರಮಂದಿರಕ್ಕೆ ಬಂದು ನಮ್ಮ ಚಿತ್ರವನ್ನು ನೋಡಿ ಗೆಲ್ಲಿಸಿ ಎಂಬುದು ನಿರ್ಮಾಪಕರಾದ ರೋಹಿತ್ ಹಾಗೂ ಕಲ್ಯಾಣ್ ಅವರ ಮನವಿ. ಸತೀಶ್ ಬಾಬು ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಪ್ರಮುಖರಾದ ಭಾ ಮಾ ಹರೀಶ್, ಭಾ ಮಾ ಗಿರೀಶ್, ನಟ ತೇಜ್ ಮೊದಲಾದವರು ಪತ್ರಿಕಾಗೋಷ್ಠಿಗೆ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!
'ಧಂ' ಬೇಕಲೇ ಎಂದಿದ್ದ ದರ್ಶನ್‌ಗೆ ಟಾಂಗ್ ಕೊಟ್ರಾ ಸುದೀಪ್? ಏನಿದು ಮಾರ್ಕ್ ಡೈಲಾಗ್ ಮರ್ಮ?