ನಮ್ ಹುಡುಗರು ಟೀಸರ್ ಬಿಡುಗಡೆ ಮಾಡಿದ ಉಪೇಂದ್ರ!

Kannadaprabha News   | Asianet News
Published : Aug 16, 2021, 12:43 PM IST
ನಮ್ ಹುಡುಗರು ಟೀಸರ್ ಬಿಡುಗಡೆ ಮಾಡಿದ ಉಪೇಂದ್ರ!

ಸಾರಾಂಶ

ತನ್ನ ಅಣ್ಣನ ಮಗ ನಿರಂಜನ್ ನಾಯಕನಾಗಿರುವ ‘ನಮ್ ಹುಡುಗ್ರು’ ಚಿತ್ರದ ಟೀಸರ್‌ಅನ್ನು ನಟ ಉಪೇಂದ್ರ ಹಾಗೂ ಪ್ರಿಯಾಂಕಾ ಉಪೇಂದ್ರ ಬಿಡುಗಡೆ ಮಾಡಿದ್ದಾರೆ.   

ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ರಿಯಲ್ ಸ್ಟಾರ್ ಉಪೇಂದ್ರ ಉಪೇಂದ್ರ,‘ಟೀಸರ್ ಅದ್ಭುತವಾಗಿ ಮೂಡಿಬಂದಿದೆ. ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿಸುವಂತಿದೆ. ‘ಬಳ್ಳಾರಿ ನಾಗ’ ಚಿತ್ರದಲ್ಲಿ ನಿರಂಜನ್ ವಿಷ್ಣುವರ್ಧನ್ ಅವರ ಜೊತೆಗೆ ಅವರ ಬಾಲ್ಯದ ಪಾತ್ರ ಮಾಡಿದ್ದ. ಇದೀಗ ಈ ಸಿನಿಮಾದ ಓಪನಿಂಗ್‌ನಲ್ಲೇ ವಿಷ್ಣು ಅವರಿಂದ ವಿಭಿನ್ನವಾಗಿ ಆಶೀರ್ವಾದ ಪಡೆಯುವ ಸೀನ್ ಇದೆ. ಅಂಥಾ ಕಲಾವಿದರ ಆಶೀರ್ವಾದ ಸದಾ ಈತನ ಮೇಲಿರಲಿ’ ಎಂದು ಹಾರೈಸಿದರು.

ಪ್ರಿಯಾಂಕಾ ಉಪೇಂದ್ರ ಮಾತನಾಡಿ, ‘ನಿರಂಜನ್ ಅವರ ಕೆಲಸ, ಪರಿಶ್ರಮ ನೋಡಿದ್ದೀನಿ. ಈ ಸಿನಿಮಾದಲ್ಲೊಂದು ಫ್ರೆಶ್‌ನೆಸ್ ಇದೆ. ಇಡೀ ತಂಡಕ್ಕೆ ಶುಭವಾಗಲಿ’ ಎಂದರು.

ಇಡೀ ಚಿತ್ರರಂಗವನ್ನೇ ಬೆಚ್ಚಿ ಬೀಳಿಸಿದೆ ನಿರಂಜನ್ ಫೋಟೋಶೂಟ್!

ನಾಯಕ ನಿರಂಜನ್, ‘ಈ ಸಿನಿಮಾದಲ್ಲಿ ನನ್ನದು ಬರ್ಮಾ ಎಂಬ ಹುಡುಗನ ಪಾತ್ರ. ಪಾತ್ರದ ಪೋಷಣೆ ಚೆನ್ನಾಗಿದೆ. ಇದೊಂದು ಇನೋಸೆಂಟ್ ಲವ್ ಸ್ಟೋರಿ, ಫ್ಯಾಮಿಲಿ ಡ್ರಾಮ’ ಎಂದರು. ನಾಯಕಿ ರಾಧ್ಯಾ ರಂಗಾಯಣ, ನಾಗತಿಹಳ್ಳಿ ಚಂದ್ರಶೇಖರ್ ಅವರ ‘ಟೆಂಟ್’ ಸಿನಿಮಾದಲ್ಲಿ ನಟನೆಯ ಪಾಠ ಕಲಿತವರು. ಮೊದಲ ಚಿತ್ರದಲ್ಲೇ ಉತ್ತಮ ಪಾತ್ರ ಸಿಕ್ಕಿದ್ದಕ್ಕೆ ಖುಷಿಯಾಗಿದ್ದರು. ನಿರ್ದೇಶಕ ಹೆಚ್ ಬಿ ಸಿದ್ದು, ‘ಆ 20 ರಂದು ಸಿನಿಮಾದ ಲಿರಿಕಲ್ ಆಡಿಯೋ ಬಿಡುಗಡೆ ಆಗಲಿದೆ. ಒಂದು ಸುಳ್ಳಿನಿಂದ ಆಗುವ ಅನಾಹುತದ ಬಗ್ಗೆ ಸಿನಿಮಾವಿದೆ’ ಎಂದು ವಿವರಿಸಿದರು.

ನಿರ್ಮಾಪಕ ಅಶ್ರಫ್, ಸಂಗೀತ ನೀಡಿರುವ ಅಭಿಮಾನ್ ರಾಯ್ ಹಾಗೂ ಚಿತ್ರತಂಡದವರು ಉಪಸ್ಥಿತರಿದ್ದರು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಶಿರಸಿ ಸಾಯಿಬಾಬಾಗೆ ಬಲು ದುಬಾರಿಯ ಚಿನ್ನದ ಕಿರೀಟ ಅರ್ಪಿಸಿದ ನಟಿ ಮಾಲಾಶ್ರೀ: ಕಾರಣವೂ ರಿವೀಲ್​!
34th Wedding Anniversary : ಅಂಬಿ ನೆನಪಲ್ಲಿ ಸುಮಲತಾ ಭಾವನಾತ್ಮಕ ಪೋಸ್ಟ್