ಈ ಫೋಟೋ ಗುಟ್ಟೇನು? ಕನ್ನಡದ ಈ ಸ್ಟಾರ್‌ ನಟರು ಯಾಕೆ ಈಗ ವೈರಲ್ ಆಗ್ತಿದಾರೆ?

By Shriram Bhat  |  First Published Jan 5, 2025, 3:16 PM IST

ಕೇವಲ ಜೊತೆಯಾಗಿ ನಿಂತಿರೋದು ಮಾತ್ರವಲ್ಲ, ತುಂಬಾ ಆತ್ಮೀಯತೆಯಿಂದ ನಿಂತು ಫೊಟೋಗೆ ಫೋಸ್ ಕೊಟ್ಟಿದ್ದಾರೆ. ಇದೀಗ ಈ ಫೋಟೋ ಸೋಷಿಯಲ್ ಮೀಡಿಯಾ ತುಂಬೆಲ್ಲ ವೈರಲ್ ಆಗುತ್ತಿದೆ. ಹಾಗಿದ್ದರೆ ಈ ಫೋಟೋ ಯಾವ..


ಈ ಫೋಟೋದಲ್ಲಿ ರೆಬಲ್ ಸ್ಟಾರ್ ಅಂಬರೀಷ್, ದರ್ಶನ್, ಪುನೀತ್ ರಾಜ್‌ಕುಮಾರ್, ಉಪೇಂದ್ರ ಹಾಗೂ ಯಶ್ ಜೊತೆಯಾಗಿ ನಿಂತಿದ್ದಾರೆ. ಕೇವಲ ಜೊತೆಯಾಗಿ ನಿಂತಿರೋದು ಮಾತ್ರವಲ್ಲ, ತುಂಬಾ ಆತ್ಮೀಯತೆಯಿಂದ ನಿಂತು ಫೊಟೋಗೆ ಫೋಸ್ ಕೊಟ್ಟಿದ್ದಾರೆ. ಇದೀಗ ಈ ಫೋಟೋ ಸೋಷಿಯಲ್ ಮೀಡಿಯಾ ತುಂಬೆಲ್ಲ ವೈರಲ್ ಆಗುತ್ತಿದೆ. ಹಾಗಿದ್ದರೆ ಈ ಫೋಟೋ ಯಾವ ಸಂದರ್ಭದಲ್ಲಿ ತೆಗೆಸಿಕೊಂಡಿದ್ದು. ಕನ್ನಡದ ಅಷ್ಟು ಸ್ಟಾರ್‌ಗಳು ಮಾತ್ರ ಯಾಕೆ ಈ ಫೋಟೊದಲ್ಲಿ ಇದ್ದಾರೆ. ಉಳಿದ ಸ್ಟಾರ್‌ಗಳು ಅಲ್ಲಿಲ್ಲವಲ್ಲ! 

ಈ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಅಲ್ಲಿರುವ ಸ್ಟಾರ್‌ಗಳ ಫ್ಯಾನ್ಸ್‌ಗಳು ತಮ್ಮತಮ್ಮ ಬಾಸ್‌ಗಳನ್ನು ಹೆಸರಿಸಿ ಲವ್ ಇಮೋಜಿ, ಫೈರ್ ಇಮೋಜಿ ಹೀಗೆ ಮನಸ್ಸಿಗೆ ಬಂದ ಇಮೋಜಿಗಳನ್ನೆಲ್ಲಾ ಹಾಕಿ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ಇಬ್ಬರಿಗೆ, ಹಲವರು ಮೂರು-ನಾಲ್ಕು ಜನಕ್ಕೆ ಹೀಗೆ ಇಷ್ಟಪಟ್ಟು ಕಾಮೆಂಟ್ ಮಾಡುತ್ತಿದ್ದರೆ ಕೆಲವರು ಒಬ್ಬರಿಗೇ ಸ್ಟಿಕ್ ಆಗಿದ್ದಾರೆ. ಇಂಥ ಫೋಟೋ ವೈರಲ್ ಆದಾಗ ಕಾಮೆಂಟ್‌ಗಳನ್ನು ಓದುವುದೇ ಚೆಂದ. ಇಲ್ಲಿಯೂ ಅಷ್ಟೇ, ಫ್ಯಾನ್ಸ್‌ಗಳ ಪ್ರತಿಕ್ರಿಯೆ ನೋಡಿ, ಹೇಗಿದೆ ಅಂತ!

Tap to resize

Latest Videos

ಕನ್ನಡದ ಈ ಐದು ನಕ್ಷತ್ರಗಳು ಯಾರು? AI ಕೊಟ್ಟಿರುವ ಫೋಟೋ ನೋಡಿ ಹೇಳುವಿರಾ?

ರೆಬೆಲ್ ಸ್ಟಾರ್ ಅಂಬರೀಷ್ (Rebel Star Ambareesh) ಹಾಗೂ ಪುನೀತ್ ರಾಜ್‌ಕುಮಾರ್ (Puneeth Rajkumar) ಇಬ್ಬರು ಈಗ ನಮ್ಮೊಂದಿಗೆ ಇಲ್ಲ. ಅವರಿಬ್ಬರೂ ಅಪಾರ ಅಭಿಮಾನಿಗಳನ್ನು ಹೊಂದಿರುವ ನಟರೇ ಆಗಿದ್ದಾರೆ. ಅವರ ಬಗ್ಗೆ ಹಾಕಿರುವ ಕಾಮೆಂಟ್ ನೋಡಿದರೆ ಕಣ್ಣೀರು ಬರುತ್ತದೆ. ಇನ್ನು ನಟ ದರ್ಶನ್ (Darshan) ಅವರು ಕೊಲೆ ಕೇಸ್ ಆರೋಪದಲ್ಲಿ ಸಿಕ್ಕಿಹಾಕಿಕೊಂಡು ಇತ್ತೀಚೆಗೆ ಬಿಡುಗಡೆ ಆಗಿ ಮತ್ತೆ ನಾರ್ಮಲ್ ಜೀವನಕ್ಕೆ ಮರಳುತ್ತಿದ್ದಾರೆ. ನಟ ದರ್ಶನ್ ಸದ್ಯವೇ ಡೆವಿಲ್ ಸಿನಿಮಾದ ಶೂಟಿಂಗ್‌ ಹಾಗೂ ಡಬ್ಬಿಂಗ್‌ನಲ್ಲಿ ಮತ್ತೆ ಭಾಗಿಯಾಗುವ ಸಾದ್ಯತೆ ಇದೆ ಎನ್ನಲಾಗುತ್ತಿದೆ. 

ಇನ್ನು ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಅವರು ಸದ್ಯ ಭಾರೀ ಟ್ರೆಂಡಿಂಗ್‌ನಲ್ಲಿದ್ದಾರೆ. ಉಪ್ಪಿ ನಟನೆ-ನಿರ್ದೇಶನದ 'ಯುಐ' ಸಿನಿಮಾ ತನ್ನ ವಿಭಿನ್ನತೆಯಿಂದ ಜನಮನ ಸೂರೆಗೊಂಡಿದ್ದು ಈಗ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ತುಂಬಾ ವರ್ಷಗಳ ಬಳಿಕ ಉಪೇಂದ್ರ ನಟನೆ-ನಿರ್ದೇಶನದಲ್ಲಿ ಮೂಡಿ ಬಂದಿರುವ ಯುಐ ಸಿನಿಮಾ ಜಗತ್ತಿನಾದ್ಯಂತ 2200ಕ್ಕೂ ಥಿಯೇಟರ್‌ಗಳಲ್ಲಿ ಬಿಡುಗಡೆ ಕಂಡು ಬಹಳಷ್ಟು ಪ್ರಶಂಸೆ ಗಿಟ್ಟಿಸಿಕೊಂಡಿದೆ. ಸಾಮಾಜಿಕ ಕಳಕಳಿ ಮೆರೆದಿರುವ ಯುಐ ಸಿನಿಮಾ, ಸದ್ಯ ಟ್ರೆಂಡ್ ಸೆಟ್ಟರ್ ಸಿನಿಮಾ ಆಗಿ ಹೊರಹೊಮ್ಮಿದೆ. 

ಜೀನಿಯಸ್ ಡೈರೆಕ್ಟರ್ ಉಪೇಂದ್ರ ಹೇಳಿರೋ ಈ ಮಾತನ್ನು ಯಾರೂ ಮರೆಯಬೇಡಿ!

ಇನ್ನು, ಈ ಫೋಟೋದಲ್ಲಿರುವ ಇನ್ನೊಬ್ಬರು ಸ್ಟಾರ್ ನಟ ಯಶ್. ಸದ್ಯ ರಾಕಿಂಗ್ ಸ್ಟಾರ್ ಯಶ್ (Rocking Star Yash) ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು, ಟಾಕ್ಸಿಕ್ ಹೆಸರಿನ ಪ್ಯಾನ್ ವರ್ಲ್ಡ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ, ಭಾರೀ ಬಜೆಟ್‌ನ ಬಾಲಿವುಡ್ ಸಿನಿಮಾ 'ರಾಮಾಯಣ'ದಲ್ಲಿ ಸಹ ನಟಿಸುತ್ತಿದ್ದಾರೆ. ಯಶ್ ನಟಿಸುತ್ತಿರುವ ಕಾರಣಕ್ಕೆ ಈ ಎರಡೂ ಸಿನಿಮಾಗಳು ಭಾರೀ ನಿರೀಕ್ಷೆ ಹುಟ್ಟಿಸಿವೆ. ಒಟ್ಟಿನಲ್ಲಿ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ಹಳೆಯ ಫೋಟೋ ಈಗ ಬಹಳಷ್ಟು ಚರ್ಚೆಗೆ ವೇದಿಕೆ ಮಾಡಿಕೊಟ್ಟಿದೆ. 

click me!