ಕನ್ನಡದ ಈ ಐದು ನಕ್ಷತ್ರಗಳು ಯಾರು? AI ಕೊಟ್ಟಿರುವ ಫೋಟೋ ನೋಡಿ ಹೇಳುವಿರಾ?

By Shriram Bhat  |  First Published Jan 5, 2025, 12:27 PM IST

ಇಂದಿನ ಅದೆಷ್ಟೋ ಸಿನಿಮಾ ಸ್ಟಾರ್‌ಗಳಿಗೆ ಹಿಂದೆ ತಾವು ಸಿನಿಮಾ ನಟನಟಿಯರಾಗಿ ಬೆಳೆಯುತ್ತೇವೆ ಎಂಬ ಯಾವುದೇ ಕಲ್ಪನೆ ಇರಲಿಲ್ಲ. ಕೆಲವರ ಅಂದಿನ ಫೋಟೋಗಳು ಸುಲಭವಾಗಿ ಲಭ್ಯವೂ ಇರಲಿಕ್ಕಿಲ್ಲ. ಆದರೆ, ಈಗ ಆ ಚಿಂತೆಯನ್ನೇ ಮಾಡಬೇಕಿಲ್ಲ. ಒಂದು ವ್ಯಕ್ತಿಯ ಯಾವುದೇ ಒಂದು ಫೋಟೋ ಸಿಕ್ಕರೆ ಸಾಕು, ಎಐ..


ಕನ್ನಡ ಚಿತ್ರರಂಗದಲ್ಲಿ ಹಲವಾರು ನಕ್ಷತ್ರಗಳು ಆಗಿಹೋಗಿವೆ. ಸದ್ಯಕ್ಕೆ ಈಗ ಕೆಲವು ನಕ್ಷತ್ರಗಳು ಹೊಳೆಯುತ್ತಿವೆ. ಅವುಗಳಲ್ಲಿ ಕೆಲವೇ ಕೆಲವು ಅಂದರೆ ಐದು ನಕತ್ರಗಳು ತಮ್ಮ ಬಾಲ್ಯದಲ್ಲಿ ಹೇಗೆ ಕಾಣಿಸುತ್ತಿದ್ದರು ಎಂಬುದನ್ನು ಎಐ (AI) ಫೊಟೋ ಬಿಡುಗಡೆ ಮಾಡಿದೆ. ಇಲ್ಲಿ ಪೋಟೋದಲ್ಲಿ ಇರುವವರು ಕನ್ನಡದ ಈ ಸ್ಟಾರ್ ನಟ-ನಿರ್ದೇಶಕರು. ಈ ಐವರು ಯಾರು? ಬಾಲ್ಯದಲ್ಲಿ ಹೀಗೆ ಕಾಣಿಸುತ್ತಿದ್ದರು ಎಂಬುದನ್ನು ನೀವು ಕಣ್ತುಂಬಿಕೊಳ್ಳಬಹುದು. ತಮ್ಮ ಮೆಚ್ಚಿನ ನಟನಟಿಯರು ಬಾಲ್ಯದಲ್ಲಿ ನೋಡೋದಕ್ಕೆ ಹೇಗಿದ್ದರು ಎಂಬ ಕುತೂಹಲ ಕೆಲವರಲ್ಲಿ ಇದ್ದೇ ಇರುತ್ತದೆ. ಇಲ್ಲಿ ಐದು ಸ್ಟಾರ್‌ಗಳನ್ನಷ್ಟೇ ನೀವು ನೋಡಬಹುದು. 

ಹೌದು, ಈಗ ಎಐ ಜಗತ್ತಿಗೆ ಕಾಲಿಟ್ಟಿದೆ. ಮಾನವನಿಂದ ಸಾಧ್ಯವಾಗದ ಹಲವು ಸಂಗತಿಗಳನ್ನು ಮಾನವನೇ ನಿರ್ಮಿಸಿದ ಆರ್ಟಿಫೀಶಿಯಲ್ ಇಂಟಲಿಜನ್ಸ್ ತನ್ನ ಕೈವಶ ಮಾಡಿಕೊಂಡಿದೆ. ತಂತ್ರಜ್ಞಾನವನ್ನು ಸರಿಯಾಗಿ ಉಪಯೋಗಿಸಿಕೊಂಡರೆ ಒಳಿತು ಇಲ್ಲದಿದ್ದರೆ ಕೆಡುಕು ಕಟ್ಟಿಟ್ಟ ಬುತ್ತಿ. ಆದರೆ, ಕೆಲವು ಕೆಲಸಗಳನ್ನು ಮನುಷ್ಯರಿಗಿಂತ ವೇಗಾವಾಗಿ ಹಾಗೂ ನಿಖರವಾಗಿ ಯಂತ್ರಮಾನವ ಮಾಡುತ್ತದೆ. ಜೊತೆಗೆ, ಕಲ್ಪನೆಯನ್ನು ಕಾರ್ಯರೂಪಕ್ಕೆ ಅದು ಕ್ಷಣಾರ್ಧದಲ್ಲಿ ತರುತ್ತದೆ. ಅದರಂತೆ, ಎಐಗೆ ಒಂದು ಫೋಟೋ ಸಿಕ್ಕರೆ ಅವರ ಬಾಲ್ಯ ಅಥವಾ ವೃದ್ಧಾಪ್ಯವನ್ನು ಅದು ಸೆಕೆಂಡ್‌ ಕಾಲದಲ್ಲಿ ಸೃಷ್ಟಿಸಿಕೊಡಬಲ್ಲದು. 

Tap to resize

Latest Videos

ಜೀನಿಯಸ್ ಡೈರೆಕ್ಟರ್ ಉಪೇಂದ್ರ ಹೇಳಿರೋ ಈ ಮಾತನ್ನು ಯಾರೂ ಮರೆಯಬೇಡಿ!

ಇಲ್ಲಿ ಅದೇ ಕೆಲಸ ಆಗಿರುವುದು. ಇಂದಿನ ಅದೆಷ್ಟೋ ಸಿನಿಮಾ ಸ್ಟಾರ್‌ಗಳಿಗೆ ಹಿಂದೆ ತಾವು ಸಿನಿಮಾ ನಟನಟಿಯರಾಗಿ ಬೆಳೆಯುತ್ತೇವೆ ಎಂಬ ಯಾವುದೇ ಕಲ್ಪನೆ ಇರಲಿಲ್ಲ. ಕೆಲವರ ಅಂದಿನ ಫೋಟೋಗಳು ಸುಲಭವಾಗಿ ಲಭ್ಯವೂ ಇರಲಿಕ್ಕಿಲ್ಲ. ಆದರೆ, ಈಗ ಆ ಚಿಂತೆಯನ್ನೇ ಮಾಡಬೇಕಿಲ್ಲ. ಒಂದು ವ್ಯಕ್ತಿಯ ಯಾವುದೇ ಒಂದು ಫೋಟೋ ಸಿಕ್ಕರೆ ಸಾಕು, ಎಐ ಅವರ ಹಿಂದಿನ ಹಾಗು ಮುಂದಿನ ಫೋಟೋವನ್ನು ಕೇಳಿದರೆ ಕೊಟ್ಟುಬಿಡುತ್ತದೆ. ಬೇಕಾದವರು ಅದನ್ನು ತಮಗೆ ಬೇಕಾದಂತೆ ಬಳಸಿಕೊಳ್ಳಬಹುದು. ಇಂದು ಜೀವನ ಸುಲಭ ಆಗಿರುವುದರ ಜೊತೆಗೆ ಸಂಕೀರ್ಣ ಕೂಡ ಆಗಿದೆ. ಕೆಲವು ವಿಷಯದಲ್ಲಿ ಸುಲಭ, ಇನ್ನೂ ಕೆಲವು ವಿಷಯದಲ್ಲಿ ಸಂಕೀರ್ಣ. 

ಸಿನಿಪ್ರೇಕ್ಷಕರಿಗೆ, ನಟನಟಿಯರ ಅಭಿಮಾನಿಗಳಿಗೆ ಅವರ ಮೆಚ್ಚಿನ ಸ್ಟಾರ್‌ಗಳ ಬಗ್ಗೆ ಇನ್ನಿಲ್ಲದ ಕುತೂಹಲ ಇರುತ್ತದೆ, ಆದ್ದರಿಂದಲೇ ಇಂಥ ಎಐ ಕೈಚಳಕಗಳು ಕೆಲಸ ಮಾಡುತ್ತವೆ ಹಾಗೂ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತವೆ. ಇಲ್ಲಿ ಎಐ ಕೊಟ್ಟಿರುವ ಆ 5 ಕನ್ನಡದ ಸ್ಟಾರ್ ನಟರು ಯಾರು ಎಂದು ಲಿಂಕ್‌ನಲ್ಲಿ ನೋಡಿ ಪತ್ತೆ ಹಚ್ಚಿ ನೀವು ಖುಷಿಪಡಬಹುದು. ಅಥವಾ, ಬಳಿಕ ನೀವು ಕಾಮೆಂಟ್ ಹಾಕಿ ಉತ್ತರ ಕೊಡಬಹುದು. ಅದು ನಿಮ್ಮಿಷ್ಟಕ್ಕೆ ಬಿಟ್ಟಿದ್ದು. ನೀವು ಉತ್ತರ ಕೊಟ್ಟರೆ ನಿಮ್ಮ ಉತ್ತರವನ್ನು ಜಗತ್ತು ನೋಡುತ್ತದೆ, ಇಲ್ಲದಿದ್ದರೆ ನಿಮ್ಮ ಉತ್ತರ ನಿಮ್ಮ ಬಳಿಯೇ ಇರುತ್ತದೆ. 

ವಿಭಿನ್ನ ಪ್ರೆಸೆಂಟೇಶನ್ ಕೊಟ್ಟು 'UI'ನಲ್ಲಿ ಗೆದ್ದ ಗ್ರೇಟ್ ಡೈರೆಕ್ಟರ್ ಉಪೇಂದ್ರ!

 

 

click me!