ಒಂದು ಸತಿ ದುರ್ಗಾಪರಮೇಶ್ವರಿಯಂತೆ ಮತ್ತೊಂದು ಶೂರ್ಪನಖಿಯಂತೆ...ನೋಡಿ ನಟಿ ಸೋನು ಗೌಡ ಹೊಸ ಸಿನಿಮಾ ಕಥೆ ಇದು....
ಕನ್ನಡ ಚಿತ್ರರಂಗದಲ್ಲಿ (Sandalwood) ಮನೆ ಮಗಳಾಗಿ ಗುರುತಿಸಿಕೊಂಡಿರುವ ಸೋನು ಗೌಡ (Sonu Gowda) ಮಹಿಳಾ ಪ್ರಧಾನ ಚಿತ್ರಕ್ಕೆ ಸಹಿ ಮಾಡಿದ್ದಾರೆ. ಚಿತ್ರಕ್ಕೆ ವೆಡ್ಡಿಂಗ್ ಗಿಫ್ಟ್ (Wedding Gift) ಎಂದು ಶೀರ್ಷಿಕೆ ಇಡಲಾಗಿದೆ. ಟೈಟಲ್ ಕೇಳಿ ಇದೇನಪ್ಪಾ ಸೋನು ಮದುವೆ (Marriage) ನಾ ಅಥವಾ ಲವ್ ಸ್ಟೋರಿ (Love story) ಸಿನಿಮಾ ನಾ ಎಂದು ಅಭಿಮಾನಿಗಳು ಕಲ್ಪನೆ ಮಾಡಿಕೊಳ್ಳುತ್ತಿರುತ್ತಾರೆ. ಆದರೆ ಇದಕ್ಕೆ ಬೇರೆ ಆಯಾಮವೇ ನೀಡಿದ್ದಾರೆ ಈ ಚೆಲುವೆ....
ಮುರಿದು ಬಿದ್ದ ಮದುವೆ ನೆನಪಿಸಿಕೊಂಡು ಕಣ್ಣೀರಿಟ್ಟ ಸೋನು ಗೌಡ?ವಿಕ್ರಮ್ (Vikram) ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರಕ್ಕೆ ನಂದೀಶ್ ನಾಣಯ್ಯ ನಾಯಕನಾಗಿ (Nandish Nannaya) ಕಾಣಿಸಿಕೊಳ್ಳಲಿದ್ದಾರೆ. ' ಹಾಲಿವುಡ್‌ನ 50 ಶೇಡ್ಸ್ ಆಫ್ ಗ್ರೇ (50 shades of grey) ಚಿತ್ರದಂತೆ ನೀವು ಈ ಚಿತ್ರದಲ್ಲಿ 50 ಶೇಡ್ಸ್ ಆಫ್ ಸೋನುವನ್ನು ನೋಡುಬಹುದು. ಹೆಣ್ಣು ಎಲ್ಲಾ ರೀತಿ ಭಾವನೆಗಳನ್ನು ಮತ್ತು ಗುಣಗಳನ್ನು ಹೊಂದಿರುತ್ತಾಳೆ. ಲಕ್ಷ್ಮಿ, ಸರಸ್ವತಿ, ದುರ್ಗಾಪರಮೇಶ್ವರಿ, ಕಾಳಿಕಾಂಬೆ, ಅನ್ನಪೂರ್ಣೇಶ್ವರಿ ಹೀಗೆ.... ಆಯಾ ಸಂದರ್ಭಕ್ಕೆ ತಕ್ಕಂತೆ ಅವಳಲ್ಲಿ ಈ ಗುಣ ಹೊರ ಬರುತ್ತದೆ. ನನಗೆ ಚಾಲೆಂಜಿಂಗ್ ರೋಲ್ ಎನ್ನಿಸಿತು,' ಎಂದು ಸೋನು ಗೌಡ್ ಖಾಸಗಿ ವೆಬ್‌ಸೈಟ್ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಹೆಚ್ಚಾಗಿ ನಟನೆಯ ಪ್ರಾಮುಖ್ಯತೆ ಇರುವ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುವ ಸೋನು ನವೆಂಬರ್ (November) ತಿಂಗಳಲ್ಲಿ ಚಿತ್ರೀಕರಣ ಪ್ರಾರಂಭಿಸಲಿದ್ದಾರೆ. ಈ ಚಿತ್ರಕ್ಕಾಗಿ ಫೋಟೋಶೂಟ್ ಮಾಡಿಸಲಾಗಿದೆ, ನಾಯಕ ನಂದೀಶ್ ನಾಣಯ್ಯ ಈಗಾಗಲೇ ಮಲಯಾಳಂ (Malayalum), ಹಿಂದಿ (Hindi) ಮತ್ತು ಬೆಂಗಾಳಿ (Bengali) ಸಿನಿಮಾದಲ್ಲಿಯೂ ನಟಿಸಿದ್ದಾರೆ.
ಎಲ್ಲೆಂದ್ರಲ್ಲಿ ಮಲಗುವ ಕಾಯಿಲೆ; ನಟಿ ಸೋನುಗೌಡ ಬ್ಯೂಟಿ ಸೀಕ್ರೆಟ್ ಇದೇನಾ?'ಹೆಣ್ಣು ಗಂಡು ಮಧ್ಯೆ ಸದಾ ನಾನೇ ಹೆಚ್ಚು ಎನ್ನುವ ಭಾವನೆ ಇರುತ್ತದೆ. ನಾನು ನನ್ನದು ಎನ್ನುವುದು ಇರುತ್ತದೆ ಇದು ಬದಲಾದರೆ ಚೆನ್ನಾಗಿರುತ್ತದೆ. ನಾವು ಬದಲಾದರೆ, ಜೀವನ ಹೇಗಿರುತ್ತದೆ ಎನ್ನುವ ಚಿತ್ರದ ಸಂದೇಶ. ಈ ಚಿತ್ರ ನೋಡುವಾಗ ಎಲ್ಲರಿಗೂ ನಮ್ಮ ಹೆಂಡತಿಯೂ (Wife) ಹೀಗೆ ಮಾಡುತ್ತಿದ್ದಳು ಎನಿಸಬಹುದು. ಸಂಬಂಧಗಳಲ್ಲಿ 'ನಮ್ಮದು' ಎಂದು ಬಂದಾಗಲೇ ಜೀವನ ಸುಂದರವಾಗಿರುತ್ತದೆ. ಈ ಭಾವನೆ ಇಬ್ಬರಲ್ಲೂ ಬರಬೇಕು,' ಎಂದಿದ್ದಾರೆ ಸೋನು.
ಇದೇ ತಿಂಗಳು ಸೋನು ಮತ್ತೊಂದು ಸಿನಿಮಾ ಅನೌನ್ಸ್ ಮಾಡಿದ್ದರು. 'ಮಾಸ್ಟರ್ಸ್ ಚಾಯಿಸ್ ಕ್ರಿಯೇಷನ್ಸ್ ಅಡಿಯಲ್ಲಿ ಟೆನೆಂಟ್ (Tenant) ನನ್ನ ಮುಂದಿನ ಚಿತ್ರ. ನಿಮ್ಮೊಂದಿಗೆ ಹಂಚಿಕೊಳ್ಳಲು ಖುಷಿಪಡುತ್ತೇನೆ,' ಎಂದು ಚಿತ್ರದ ಫಸ್ಟ್ ಫೋಸ್ಟರ್ ಹಂಚಿಕೊಂಡು, ಬರೆದುಕೊಂಡಿದ್ದಾರೆ.