ಲಾಕ್‌ಡೌನ್‌ ನಂತರ ಹೌಸ್‌ಫುಲ್‌ ಆದ ಮೊದಲ ಸಿನಿಮಾ 'ಟಗರು'

Kannadaprabha News   | Asianet News
Published : Oct 28, 2020, 08:43 AM IST
ಲಾಕ್‌ಡೌನ್‌ ನಂತರ ಹೌಸ್‌ಫುಲ್‌ ಆದ ಮೊದಲ ಸಿನಿಮಾ 'ಟಗರು'

ಸಾರಾಂಶ

ಮರು ಬಿಡುಗಡೆಯ ಸಿನಿಮಾಗಳು ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯುವುದಿಲ್ಲ ಎಂಬ ಮಾತನ್ನು ಸುಳ್ಳು ಮಾಡಿದೆ ಶಿವರಾಜ್‌ಕುಮಾರ್‌ ನಟನೆಯ ‘ಟಗರು’ ಸಿನಿಮಾ. ಸೂರಿ ನಿರ್ದೇಶನದ, ಕೆಪಿ ಶ್ರೀಕಾಂತ್‌ ನಿರ್ಮಾಣದ ಈ ಸಿನಿಮಾ 7ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ತೆರೆಕಂಡಿದ್ದು, ಹಬ್ಬದ ಎರಡು ದಿನ ಎರಡು ಸ್ಕ್ರೀನ್‌ಗಳ ಮುಂದೆ ಹೌಸ್‌ಫುಲ್‌ ಬೋರ್ಡು ಬಿದ್ದಿದೆ. ‘ಟಗರು’ ಚಿತ್ರದ ಪೋಸ್ಟರ್‌ ಜತೆಗೆ ಸೆಲ್ಫಿ ತೆಗೆಸಿಕೊಂಡು ಅಭಿಮಾನಿಗಳು ಸೋಷಿಯಲ್‌ ಮೀಡಿಯಾಗಳಲ್ಲಿ ಹಾಕುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳಿಂದಾಗಿ ಚಿತ್ರರಂಗಕ್ಕೆ ಹೊಸ ಭರವಸೆ ಮೂಡಿದಂತಾಗಿದೆ.

ಸಲಗ ಸೆಲೆಬ್ರಿಟಿಗಳ ಸಾಥ್‌

ಟಗರು ಹೌಸ್‌ಫುಲ್‌ ಆಗಿದ್ದು ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಗೋಪಾಲನ್‌ ಮಾಲ್‌ ಹಾಗೂ ಗೋಪಾಲನ್‌ ಲೆಗಸ್ಸಿ ಮಾಲ್‌ನಲ್ಲಿ. ಒಂದು ದಿನ ಈ ಚಿತ್ರದ ಫ್ಯಾನ್‌ ಶೋ ಆಯೋಜಿಸಲಾಗಿತ್ತು. ಅವತ್ತು ಸಲಗ ಚಿತ್ರತಂಡದ ದುನಿಯಾ ವಿಜಯ್‌, ಧನಂಜಯ್‌ ಮುಂತಾದ ಸೆಲೆಬ್ರಿಟಿಗಳು ಸಿನಿಮಾ ವೀಕ್ಷಿಸಿದ್ದರು. ಲಾಕ್‌ಡೌನ್‌ ನಂತರ ಒಂದು ಚಿತ್ರವನ್ನು ಸಂಭ್ರಮಿಸಲು ಬೇರೆ ಸೆಲೆಬ್ರಿಟಿಗಳು ಸಾಥ್‌ ನೀಡುವುದು ಕೂಡ ಮುಖ್ಯ. ಎಲ್ಲರೂ ಸೇರಿಕೊಂಡು ಚಿತ್ರರಂಗವನ್ನು ಮತ್ತೆ ಕಟ್ಟಬೇಕಿದೆ, ಬೆಳೆಸಬೇಕಾಗಿದೆ ಅನ್ನುವುದನ್ನು ಈ ಮೂಲಕ ಸಲಗ ಚಿತ್ರತಂಡ ತೋರಿಸಿಕೊಟ್ಟಿದೆ. ಒಗ್ಗಟ್ಟಿನಲ್ಲಿ ಬಲವಿದೆ ಅನ್ನುವುದು ಈಗ ಚಿತ್ರರಂಗ ಅರಿತುಕೊಳ್ಳಬೇಕಾಗಿದೆ.

ಮುಂದಿನ ವಾರ 50 ಸ್ಕ್ರೀನ್‌ಗಳಲ್ಲಿ

ಸಿನಿಮಾ ಹೌಸ್‌ಫುಲ್‌ ಆದ ಉತ್ಸಾಹದಲ್ಲಿ ಮುಂದಿನ ವಾರದಿಂದ 50 ಹೆಚ್ಚುವರಿ ಸ್ಕ್ರೀನ್‌ಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಚಿತ್ರದ ವಿತರಕ ಜಯಣ್ಣ ಹಾಗೂ ನಿರ್ಮಾಪಕ ಕೆ ಪಿ ಶ್ರೀಕಾಂತ್‌ ಮುಂದಾಗಿದ್ದಾರೆ.

‘ಸದ್ಯ ಈಗ ಬೆಂಗಳೂರು, ಮೈಸೂರು, ಶಿವಮೊಗ್ಗ ಸೇರಿದಂತೆ 7 ಕಡೆ ಸಿನಿಮಾ ಬಿಡುಗಡೆ ಆಗಿದೆ. ಹಬ್ಬದ ದಿನ ಹೆಚ್ಚು ಜನ ಬಂದಿದ್ದಾರೆ. ಹೀಗಾಗಿ ಮತ್ತಷ್ಟುಮಲ್ಟಿಪ್ಲೆಕ್ಸ್‌ಗಳಲ್ಲಿ ಚಿತ್ರವನ್ನು ಮರು ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದ್ದೇವೆ. ಈಗ ಬಿಡುಗಡೆ ಆಗಿರುವ ಕಡೆ ಎಷ್ಟುಪ್ರೇಕ್ಷಕರು ಬಂದಿದ್ದಾರೆ, ಎಷ್ಟುಕಲೆಕ್ಷನ್‌ ಆಗಿದೆ ಎಂಬುದು ನಾಲ್ಕೈದು ದಿನಗಳಲ್ಲಿ ಗೊತ್ತಾಗಲಿದೆ’ ಎನ್ನುತ್ತಾರೆ ವಿತರಕ ಜಯಣ್ಣ.

ಸೆಂಚುರಿ ಸ್ಟಾರ್ ಟ್ಯಾಲೆಂಟ್‌ಗೆ ಯುವಕರು ಫುಲ್ ಫಿದಾ! 

‘ಕಳೆದ ಮೂರು ದಿನಗಳಿಂದ ಒಳ್ಳೆಯ ರಿಪೋರ್ಟ್‌ ಬರುತ್ತಿದೆ. ಮುಂದಿನವ ವಾರ 50 ಸ್ಕ್ರೀನ್‌ಗಳಲ್ಲಿ ‘ಟಗರು’ ಸಿನಿಮಾ ಪ್ರದರ್ಶನ ಆಗಲಿದೆ. ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬರಲ್ಲ ಎಂಬುದನ್ನು ಶಿವಣ್ಣ ಅವರ ಟಗರು ಸಿನಿಮಾ ಸುಳ್ಳಾಗಿಸುತ್ತಿದೆ’ ಎನ್ನುತ್ತಾರೆ ಚಿತ್ರ ನಿರ್ಮಾಪಕ ಕೆಪಿ ಶ್ರೀಕಾಂತ್‌.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?