ಕಾರು ಅಪಘಾತದ ನಂತರ ಇದೀಗ ಪ್ರತ್ಯಕ್ಷರಾದ ನಟಿ ಶರ್ಮಿಳಾ ಮಾಂಡ್ರೆ!

Suvarna News   | Asianet News
Published : May 23, 2020, 11:58 AM ISTUpdated : May 23, 2020, 12:18 PM IST
ಕಾರು ಅಪಘಾತದ ನಂತರ ಇದೀಗ ಪ್ರತ್ಯಕ್ಷರಾದ ನಟಿ ಶರ್ಮಿಳಾ ಮಾಂಡ್ರೆ!

ಸಾರಾಂಶ

ಕಠಿಣ ಲಾಕ್‌ಡೌನ್‌ ನಡುವೆಯೂ ಕಾರು ಚಲಾಯಿಸಿ, ಬೆಳಗಿನ ಜಾವ ರಸ್ತೆ ಆಪಘಾತಕ್ಕೀಡಾದ ನಟಿ ಶರ್ಮಿಳಾ ಮಾಂಡ್ರೆ ಸ್ಥಳದಿಂದ ಎಸ್ಕೇಪ್‌ ಆಗಿದ್ದರು ಎನ್ನಲಾಗಿತ್ತು ಆದರೀಗ ಘಟನೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.....

ಸ್ಯಾಂಡಲ್‌ವುಡ್‌ ಬ್ಯೂಟಿ ಶರ್ಮಿಳಾ ಮಾಂಡ್ರೆ  ಕಾರು ಅಪಘಾತವಾದ ನಂತರ ಈಗ ಮತ್ತೆ ಸೋಷಿಯಲ್‌ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದಾರೆ. ಅದುವೇ ಘಟನೆ ಬಗ್ಗೆ ಸ್ಪಷ್ಟನೆ ನೀಡುವ ಮೂಲಕ.

ಏಪ್ರಿಲ್‌ 4ರಂದು ಇಡೀ ಭಾರತವೇ ಕಠಿಣ ಲಾಕ್‌ಡೌನ್‌ ನಿಯಮವನ್ನು ಪಾಲಿಸುತ್ತಿತ್ತು. ಅಗತ್ಯ ವಸ್ತು ಖರೀದಿಸಲು ಹೊರತು ಪಡಿಸಿ, ಬೇರೆ ಯಾವ ಕಾರಣಕ್ಕೂ ಹೊರ ಬಾರದಂತೆ ನಿಯಮ ಜಾರಿಯಾಗಿತ್ತು. ಅಗತ್ಯ ವಸ್ತುಗಳಿಗೆ ಹಾಗೂ ಕೆಲವು ಸೇವೆಗಳಿಗೆ ಮಾತ್ರ ಸರ್ಕಾರ ಅನುಮತಿ ನೀಡಿತ್ತು. ಇಂಥ ಸಮಯದಲ್ಲಿ ನಟಿ ಶರ್ಮಾಳಾ ಮಾಂಡ್ರೆ ಸ್ನೇಹಿತನ ಜತೆ ಕಾರು ಚಲಾಯಿಸಿ, ರಸ್ತೆ ಅಪಘಾತಕ್ಕೆ ಈಡಾಗಿದ್ದರು. ಅಷ್ಟೇ ಆಗಿದ್ದರೆ ಓಕೆ, ಆಸ್ಪತ್ರೆಗೆ ಹಾಗೂ, ಹೀಗೂ ಯಾರೋ ಸೇರಿಸಿದ್ದರೆ ಅಲ್ಲಿಂದಲೇ ಎಸ್ಕೇಪ್ ಆಗಿದ್ದರು. ಪೊಲೀಸ್ ವಿಚಾರಣೆಗೂ ಸಿಗದೇ ತಪ್ಪಿಸಿಕೊಂಡಿದ್ದಾರೆಂಬ ಸುದ್ದಿಯಾಗಿತ್ತು.

ಶರ್ಮಿಳಾ ಮಾಂಡ್ರೆ ಕಾರ್‌ ಮೇಲಿತ್ತು ಈ ಪಾಸ್; ಹಾಗಾದ್ರೆ ಪರಾರಿ ಆಗಿದ್ಯಾಕೆ?

ಸೋಷಿಯಲ್‌ ಲೈಫ್‌ಗೆ ಹಾಯ್:
ಘಟನೆ ನಡೆದ ಸ್ಥಳದಿಂದ ಪರಾರಿಯಾಗಿದ್ದ ಶರ್ಮಿಳಾ ಮಾಂಡ್ರೆ ಯಾರ ಕೈಗೂ ಸಿಗದಂತೆ ಕಾಣೆಯಾಗಿದ್ದರು. ಕೆಲವು ಮಾಧ್ಯಮಗಳ ಜೊತೆ ಫೋನ್‌ ಮೂಲಕ ಮಾತನಾಡಿ ಸ್ಪಷ್ಟನೆ ನೀಡಿದ್ದರು. ಕೆಲವು ದಿನಗಳ ಹಿಂದೆ ಇನ್‌ಸ್ಟಾಗ್ರಾಂನಲ್ಲಿ ಒಂದು ಫೋಟೋ ಅಪ್ಲೋಡ್‌ ಮಾಡಿದ್ದಾರೆ. ಅಭಿಮಾನಿಗಳು ನಡೆದ ಘಟನೆ ಬಗ್ಗೆ ಕಾಮೆಂಟ್‌ ಮಾಡಲು ಆರಂಭಿಸಿದಾಗ, ಶರ್ಮಿಳಾ ಟ್ಟಿಟರ್‌ನಲ್ಲಿ ಸ್ಪಷ್ಟನೆ ನೀಡಿದ್ದಾರೆ.

 

'ಮೊದಲು ನನ್ನ ಕುಟುಂಬ, ಸ್ನೇಹಿತರು ಹಾಗೂ ವೆಲ್‌ ವಿಶರ್ಸ್‌ಗೆ ಧನ್ಯವಾದಗಳು. ಈ ಕಷ್ಟದ ಸಮಯದಲ್ಲಿ ನನಗೆ ಸಹಾಯ ಮಾಡಿದ ವೈದ್ಯರಿಗೆ ಮೊದಲ ಕೃತಜ್ಞತೆ.  ಈ ಘಟನೆ ಹಾಗೂ ಗಾಯದಿಂದ ಸುಧಾರಿಸಿಕೊಳ್ಳುತ್ತಿರುವೆ,',  ಎಂದು ಹೇಳುತ್ತಾ ಘಟನೆ ಬಗ್ಗೆಯೂ ಮಾತನಾಡಿದ್ದಾರೆ. 'ಅಪಘಾತವಾದಾಗ ನನಗೆ ಬಗ್ಗೆ ತುಂಬಾನೇ ಮಾತುಗಳು, ಗಾಳಿ ಸುದ್ದಿ ಹರಡಿತ್ತು. ದುರಾದೃಷ್ಟ ನನಗೆ ಮಲ್ಟಿಪಲ್‌ ಫ್ಯಾಕ್ಚರ್‌ ಅಗಿತ್ತು, ಆ ಸಮಯಲ್ಲಿ ಇದೆಲ್ಲಾದಕ್ಕಿಂತಲ್ಲೂ ಚಿಕಿತ್ಸೆ ಮುಖ್ಯವಾಗಿತ್ತು,' ಎಂದು ಟ್ಟೀಟ್‌ ಮಾಡಿದ್ದಾರೆ. 

 

ನಡೆದದ್ದೇನು?
ಏಪ್ರಿಲ್‌ 4ರಂದು ನಟಿ ಶರ್ಮಿಳಾ ಮಾಂಡ್ರೆ ತಡ ರಾತ್ರಿ ಸ್ನೇಹಿತ ಲೋಕೇಶ್‌ ಜೊತೆ ಜಾಲಿ ರೈಡ್‌ಗೆ ತೆರಳಿ ಅಪಘಾತ ಮಾಡಿಕೊಂಡಿದ್ದರು. ಬೆಂಗಳೂರಿನ ವಸಂತನಗರದ ಫ್ಲೈ ಓವರ್‌ನ ಪಿಲ್ಲರಿಗೆ ಡಿಕ್ಕಿ ಹೊಡೆದ ಕಾರಣ ಜಾಗ್ವಾರ್ ಕಾರಿನ ಮುಂಭಾಗ ಪುಡಿಯಾಗಿತ್ತು.  ತಕ್ಷಣವೇ ಚಿಕಿತ್ಸೆ ಪಡೆಯಲು ಕಾರನ್ನು ಅಲ್ಲಿಯೇ ಬಿಟ್ಟು, ವಿಕ್ರಂ ಆಸ್ಪತ್ರೆಗೆ ತೆರಳಿ ಆ ನಂತರ ಪೋರ್ಟೀಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಪರಾರಿ ಆಗಿದ್ದಾರೆ. ಈ ಘಟನೆಯಿಂದ ಲೋಕೇಶ್‌ ಬಲಗೈಗೆ ಪೆಟ್ಟಾಗಿದ್ದು, ಶರ್ಮಿಳಾಗೆ ಮುಖಕ್ಕೆ ಫ್ರ್ಯಾಕ್ಚರ್‌ ಆಗಿತ್ತು. 

ಐ‍ಷಾರಾಮಿ ಕಾರು ಆಪಘಾತದ ಬಗ್ಗೆ ಶರ್ಮಿಳಾ ಕೊಟ್ಟ ಶಾಕಿಂಗ್ ಟ್ವಿಸ್ಟ್‌!

ಘಟನೆ ನಡೆದು ಕೆಲವು ದಿನಗಳ ನಂತರ ಶರ್ಮಿಳಾ ಮಾಂಡ್ರೆ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ತನಗೆ ಔಷಧಿಗಳು ಬೇಕಿದ್ದ ಕಾರಣ ಸ್ನೇಹಿತನ ಸಹಾಯ ಪಡೆದುಕೊಂಡು, ಕಾರಿನಲ್ಲಿ ತೆರಳುವಾಗ ಈ ಘಟನೆ ನಡೆದಿದೆ. ಇದರಿಂದ ಯಾರಿಗೂ ತೊಂದರೆ ಆಗಿಲ್ಲ ಎಂದು ಹೇಳಿದ್ದರು.

ಗಾಳಿಪಟ -2:
ಕ್ರಿಯೇಟಿವ್‌ ಡೈರೆಕ್ಟರ್‌ ಯೋಗರಾಜ್‌ ಭಟ್‌ ನಿರ್ದೇಶಕ ಗಾಳಿಪಟ-2 ಚಿತ್ರದಲ್ಲಿ ನಟಿ ಶರ್ಮಿಳಾ ಮಾಂಡ್ರೆ ಅಭಿನಯಿಸುತ್ತಿದ್ದಾರೆ. ಚಿತ್ರದ ನಟರಾದ ಗೋಲ್ಡನ್‌ ಸ್ಟಾರ್ ಗಣೇಶ್‌ ಹಾಗೂ ದೂದ್ ಪೇಡ ದಿಗಂತ್‌ಗೆ ಜೊತೆ ಮಿಂಚಲಿದ್ದಾರೆ.

"

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ