
ಆದರೆ, ಸಬ್‌ಟೈಟಲ್ ಮಾತ್ರ ಬೇರೆ ಬೇರೆ ಇಡಲಾಗುತ್ತಿದೆ. ಮೊದಲ ಭಾಗಗಕ್ಕೆ ‘ಅಷ್ಟದಿಗ್ಬಂಧನ ಮಂಡಲಕ’ ಹಾಗೂ ಎರಡನೇ ಪಾರ್ಟ್‌ಗೆ ‘ತ್ರಿಶಂಕು’ ಎನ್ನುವ ಸಬ್ ಟೈಟಲ್ ಇಡಲಾಗಿದೆ.
ಶೂಟಿಂಗ್ ಮಧ್ಯೆಯೇ ತಡೆಯಲಾದಗ ಹೊಟ್ಟೆ ನೋವು: ಶರಣ್ ಹೇಳಿದ್ದಿಷ್ಟು
‘ಇನ್ನೂ ಒಂದೊಂದು ಪಾರ್ಟ್‌ನಲ್ಲಿ ಒಂದೊಂದು ಕತೆ ಇರಲ್ಲ. ‘ಬಾಹುಬಲಿ’ ಹಾಗೂ ‘ಕೆಜಿಎಫ್’ ಚಿತ್ರಗಳಂತೆ ಒಂದೇ ಕತೆ ಮುಂದುವರಿಯುತ್ತದೆ. ಇಲ್ಲಿ ಚಿತ್ರಕ್ಕೆ ನೀಡಿರುವ ಸಬ್‌ಟೈಟಲ್‌ಗಳೇ ಆಯಾ ಪಾರ್ಟ್‌ನ ಕತೆಯನ್ನು ಸೂಚಿಸುತ್ತದೆ. 2.10 ಗಂಟೆಯ ಕತೆ ಇದಾಗಿದ್ದು, ಒಟ್ಟು ಎರಡೂ ಪಾರ್ಟ್ 4.20 ಗಂಟೆ ಸಮಯವನ್ನು ಒಳಗೊಂಡಿದೆ. ಹೀಗಾಗಿಯೇ ಎರಡು ಪಾರ್ಟ್‌ಗಳಲ್ಲಿ ಬಂದರೆ ಒಳ್ಳೆಯದು ಎಂಬುದು ಮತ್ತೊಂದು ಕಾರಣ. ಸದ್ಯ ಸತತವಾಗಿ ಚಿತ್ರೀಕರಣ ಮಾಡುತ್ತಿದ್ದೇವೆ’ ಎನ್ನುತ್ತಾರೆ ನಿರ್ದೇಶಕ ಸಿಂಪಲ್ ಸುನಿ.
"
ಶರಣ್ ನಾಯಕನಾಗಿ, ಆಶಿಕಾ ರಂಗನಾಥ್ ನಾಯಕಿಯಾಗಿ ನಟಿಸುತ್ತಿರುವ ಈ ಚಿತ್ರಕ್ಕೆ ಸದ್ಯ ಬೆಂಗಳೂರಿನ ಕೆಂಗೇರಿ ಪ್ರದೇಶದಲ್ಲಿ ಚಿತ್ರೀಕರಣ ನಡೆಯುತ್ತಿದೆ. 11 ದಿನಗಳ ಕಾಲ ಚಿತ್ರೀಕರಣ ಮಾಡಿಕೊಂಡರೆ ‘ಅವತಾರ ಪುರುಷ’ ಶೂಟಿಂಗ್ ಮುಗಿಯಲಿದೆ.
ಇದೊಂದು ಬ್ಲಾಕ್ ಮ್ಯಾಜಿಕ್ ಕತೆ. ಕಾಮಿಡಿ, ಬ್ಲಾಕ್ ಮ್ಯಾಜಿಕ್ ಅಂಶಗಳ ಸುತ್ತ ಈ ಸಿನಿಮಾ ಸಾಗುತ್ತದೆ.
‘ಇದು ವೆಬ್ ಸರಣಿಗೆ ಮಾಡಿಕೊಂಡಿದ್ದ ಕತೆ. ಅದನ್ನು ಸಿನಿಮಾ ಮಾಡಲು ಹೊರಟಾಗ ಒಂದೇ ಕಂತಿನಲ್ಲಿ ಕತೆ ಹೇಳುವುದು ಕಷ್ಟಎನಿಸಿತು. ಹೀಗಾಗಿ ಆರಂಭದಲ್ಲೇ ಎರಡು ಪಾರ್ಟ್‌ಗಳಲ್ಲಿ ಸಿನಿಮಾ ಮಾಡುವ ಪ್ಲಾನ್ ಮಾಡಿಕೊಂಡು ಚಿತ್ರ ಆರಂಭಿಸಲಾಯಿತು. ನಾವು ಜನವರಿ ತಿಂಗಳಲ್ಲಿ ತೆರೆಗೆ ಬರಲು ಸಜ್ಜಾಗಿದ್ದೇವೆ. ಎಲ್ಲವೂ ಅಂದುಕೊಂಡಂತೆ ಆದರೆ, ಜ.14ರಂದು ಬಿಡುಗಡೆ ಮಾಡಲೂಬಹುದು. ಒಂದು ಅಥವಾ ಎರಡು ವಾರದ ಅಂತರದಲ್ಲಿ ಎರಡೂ ಪಾರ್ಟ್ ತೆರೆ ಮೇಲೆ ಮೂಡಲಿದೆ’ ಎಂಬುದು ನಿರ್ಮಾಪಕ ಪುಷ್ಕರ ಮಲ್ಲಿಕಾರ್ಜುನಯ್ಯ ಕೊಡುವ ವಿವರಣೆಗಳು.
ಶ್ರೀನಗರ ಕಿಟ್ಟಿ, ಸುಧಾರಾಣಿ, ಬಿ ಸುರೇಶ್, ಸಾಯಿ ಕುಮಾರ್ ಸೇರಿದಂತೆ ದೊಡ್ಡ ತಾರಾಗಣವೇ ಈ ಚಿತ್ರದಲ್ಲಿ ನಟಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.