
ಹೀಗೆ ಕಿಚ್ಚನ ಮುಂದೆ ಬಂದಿರುವುದು ಪವನ್ ಕಲ್ಯಾಣ್ ನಟನೆಯ ಸಿನಿಮಾ. ತೆಲುಗಿನ ಕ್ರಿಷ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ‘ವಿರೂಪಾಕ್ಷ’ ಎಂಬುದು ಚಿತ್ರದ ಹೆಸರು. ಮಲಯಾಳಂನ ಜನಪ್ರಿಯ ಸಿನಿಮಾ ‘ಅಯ್ಯಪ್ಪನುಮ್ ಕೋಶಿಯುಮ್’ ಚಿತ್ರದ ರೀಮೇಕ್ ಇದು. ಪವನ್ ಕಲ್ಯಾಣ್ ಪೊಲೀಸ್ ಅಧಿಕಾರಿ ಅಯ್ಯಪ್ಪನ್ ಪಾತ್ರದಲ್ಲಿ ನಟಿಸಲಿದ್ದು, ಸುದೀಪ್ ಕೋಶಿ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. ಮಲಯಾಳಂನಲ್ಲಿ ಈ ಪಾತ್ರವನ್ನು ಪೃಥ್ವಿರಾಜ್ ನಿರ್ವಹಿಸಿದ್ದರು.
ಸ್ಯಾಂಡಲ್‌ವುಡ್‌ನಲ್ಲಿ ಅಶ್ವತ್ಥಾಮನ ಜಪ: ಹೊಸ ಸಿನಿಮಾದಲ್ಲಿ ಬಿಗ್ ಸ್ಟಾರ್ಸ್
"
ಇಗೋಗಾಗಿ ಹೋರಾಡುವ ಇಬ್ಬರ ಕತೆಯಲ್ಲಿ ನಟನೆಗೆ ಸಿಕ್ಕಾಪಟ್ಟೆಪ್ರಾಮುಖ್ಯವಿದ್ದು, ಪವನ್ ಕಲ್ಯಾಣ್ ಹಾಗೂ ಸುದೀಪ್ ಪರಸ್ಪರ ಎದುರಾಗಿ ನಿಂತರೆ ಚಿತ್ರದ ತೂಕ ಹೆಚ್ಚುತ್ತದೆ ಎಂಬುದು ನಿರ್ದೇಶಕರ ಲೆಕ್ಕಾಚಾರ. ಆದರೆ, ಸುದೀಪ್ ಈ ಚಿತ್ರದಲ್ಲಿ ನಟಿಸುವ ಬಗ್ಗೆ ಇನ್ನೂ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ.
ವಿದ್ಯಾರ್ಥಿಗಳಿಗೆ ನಟ ಕಿಚ್ಚ ಸುದೀಪ್ ಆರ್ಥಿಕ ನೆರವು
ಮತ್ತೊಂದು ಕಡೆ ಇದೇ ಚಿತ್ರದಲ್ಲಿ ಕನ್ನಡ ನಟಿ ಪ್ರಣೀತಾ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿಯೂ ಇದೆ. ಈ ಕುರಿತು ಅವರನ್ನು ವಿಚಾರಿಸಿದರೆ, ‘ಈ ಸಿನಿಮಾದಲ್ಲಿ ನಟಿಸುವ ಬಗ್ಗೆ ಇನ್ನೂ ಯಾವುದೇ ಅಂತಿಮ ಮಾತುಕತೆ ಆಗಿಲ್ಲ. ಸದ್ಯದಲ್ಲೇ ಈ ಬಗ್ಗೆ ಮಾಹಿತಿ ನೀಡುತ್ತೇನೆ’ ಎನ್ನುತ್ತಾರೆ ಪ್ರಣೀತಾ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.