ಅಮ್ಮನಿಗಾಗಿ ಜಗ್ಗೇಶ್ ಆಣೆ ಇಟ್ಟ ಲಿಂಗವಿದು; 'ನಾನು ಯಾವ ತಪ್ಪು ಮಾಡುವುದಿಲ್ಲ'!

By Suvarna News  |  First Published Nov 3, 2020, 4:35 PM IST

ಅಧ್ಯಾತ್ಮದ ಕಡೆ ಹೆಚ್ಚಿನ ಗಮನ ಕೊಡುತ್ತಿರುವ ಜಗ್ಗೇಶ್. ತಾಯಿಗಾಗಿ ಶಿವಲಿಂಗದ ಮೇಲೆ ಆಣೆ ಇಟ್ಟ ಕ್ಷಣದ ಬಗ್ಗೆ ಬರೆದಿದ್ದಾರೆ.
 


ಕಾಮಿಡಿ ಕಿಂಗ್, ಚಿಗರುತ್ತಿರುವ ಕಲಾವಿದರಿಗೆ ಸಾಥ್‌ ಕೊಡುವ ಅಣ್ಣ, ಪ್ರೀತಿಸಿದರೆ ಹೀಗೇ ಪ್ರೀತಿಸಬೇಕು ಎನ್ನುವ ಪತಿ, ಜೀನದಲ್ಲಿ ಬಾಳಿದರೆ ಇಂಥ ಜೀವನ ಬಾಳಬೇಕೆಂದು ಮಾರ್ಗದರ್ಶನ ಮಾಡುವ ತಂದೆ....ಎಲ್ಲವನ್ನೂ ಸರಿಸಮಾನವಾಗಿ ನಿಭಾಯಿಸಿ ಭೇಷ್ ಎಂನಿಸಿಕೊಂಡ ಜಗ್ಗೇಶ್‌ಗೆ ತಾಯಿಯೇ ದೇವರು.

Tap to resize

Latest Videos

ಆಣೆ ಮಾಡಿದ ಲಿಂಗ:
ಬಾಲ್ಯದಿಂದಲೂ ತುಂಟರಾಗಿದ್ದ ಜಗ್ಗೇಶ್ ಇದೇ ಶಿವಲಿಂಗದ ಮೇಲೆ ಒಮ್ಮೆ ಆಣೆ ಮಾಡಿದ್ದರಂತೆ. 'ಬಾಲ್ಯದಲ್ಲಿ ಅಮ್ಮ ನನಗೆ ಶಿವಪೂಜೆ ಮಾಡಿಸುತ್ತಿದ್ದ ಶಿವಲಿಂಗ. ಬದುಕಿನಲ್ಲಿ ನಾನು ಯಾವ ತಪ್ಪೂ ಮಾಡುವುದಿಲ್ಲವೆಂದು ಅಮ್ಮನಿಗಾಗಿ ಆಣೆ ಇಟ್ಟ ಲಿಂಗ. ಅಮ್ಮ ಕಾಲವಾಗುವವರೆಗೂ ಇಲ್ಲಿಯೇ ಶೋಡಷ ಸೋಮವಾರ ವ್ರತ  ಮಾಡುತ್ತಿದ್ದಳು. ನನ್ನ ಇಷ್ಟಲಿಂಗಕ್ಕೆ ಶರಣು ಶರಣಾರ್ಥಿ,' ಎಂದು ಬರೆದುಕೊಂಡಿದ್ದಾರೆ. 

 

ಬಾಲ್ಯದಲ್ಲಿ ಅಮ್ಮ ನನಗೆ ಶಿವಪೂಜೆ ಮಾಡಿಸುತ್ತಿದ್ದ ಶಿವಲಿಂಗ...ಬದುಕಿನಲ್ಲಿ ನಾನು ಯಾವ ತಪ್ಪು ಮಾಡುವುದಿಲ್ಲಾ ಎಂದು ಅಮ್ಮನಿಗಾಗಿ ಆಣೆ ಇಟ್ಟ ಲಿಂಗ..ಅಮ್ಮ ಕಾಲವಾಗುವರೆಗೆ ಇಲ್ಲೆ ಶೋಡಶ ಸೋಮವಾರ ವ್ರತ ಮಾಡುತ್ತಿದ್ದಳು..
ನನ್ನ ಇಷ್ಟಲಿಂಗಕ್ಕೆ ಶರಣುಶರಣಾರ್ಥಿ..
ಶುಭದಿನ.... pic.twitter.com/I0htte4KjB

— ನವರಸನಾಯಕ ಜಗ್ಗೇಶ್ (@Jaggesh2)

ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಜಗ್ಗೇಶ್, ಪ್ರತಿ ದಿನವೂ ರಾಯರ ಬೃಂದಾವನ ಫೋಟೋ ಶೇರ್ ಮಾಡುತ್ತಾ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಆಶಿಸುತ್ತಾರೆ. ಯಾವ ಜಾತಿ-ಧರ್ಮ- ಭೇದ ಭಾವವೂ ಮಾಡದೆ ಎಲ್ಲಾ ಧರ್ಮೀಯ ಹಬ್ಬಗಳಿಗೂ ಶುಭ ಕೋರುತ್ತಾರೆ.  ಅಲ್ಲದೇ ಅಧ್ಯಾತ್ಮದ ಬಗ್ಗೆ ಅಭಿಮಾನಿಗಳು ಕೇಳುವ ಪ್ರಶ್ನೆಗಳಿಗೂ ಉತ್ತರಿಸುತ್ತಾರೆ. 

ಚಿತ್ರರಂಗದಲ್ಲಿ ಕಪ್ಪಗಿರುವುದು ತಪ್ಪಾ? ನಟ ವಿಜಯ್- ಜಗ್ಗೇಶ್‌ ವರ್ಣಭೇದ ಬಗ್ಗೆ ಮಾತು!

'ಹಸುವ ಹಿಂಬಾಲಿಸೋ ಕರುವಂತೆ ನಾನು ಅಧ್ಯಾತ್ಮ ದಾರಿ ತೋರುವ ಮಹನೀಯರನ್ನು ಅನುಸರಿಸುತ್ತೇನೆ. ಬಹುತೇಕರು ಸಾಂಸಾರಿಕ, ಲೌಕಿಕ ಸಾಮಾಜಿಕ, ಅರ್ಥಿಕ ಎಂದು ಇದ್ದಲ್ಲೇ ಇದ್ದು ಬಿಡುತ್ತಾರೆ. ನಾನು ಆ ಕೆಸರಲ್ಲಿ ಇದ್ದರೂ ನಿಧಾನವಾಗಿ ಅದಕ್ಕೆ ಅಂಟದೇ, ಕಮಲವಾಗಲು ಯತ್ನಿಸುತ್ತಿರುವೆ. ಮದವೇರಿದ ಆನೆಗೆ ಅಂಕುಶದಂತೆ, ಮದವೇರಿದ ಮನುಜನಿಗೆ ಭಕ್ತಿ ಎಂಬುವುದು ಅಂಕುಶವಿದ್ದಂತೆ,' ಎಂದು ಬರೆದುಕೊಂಡಿದ್ದಾರೆ.

click me!