
'ಶಂಭೋ ಶವ ಶಂಕರ' ಚಿತ್ರದ ಹೆಸರು ಕೇಳಿದ ತಕ್ಷಣ ಇದು ಭಕ್ತಿ ಪ್ರಧಾನ ಸಿನಿಮಾ ಎಂದೆನಿಸ ಬಹುದು ಆದರೆ ಇದೊಂದು ಸಸ್ಪೆನ್ಸ್ ಥ್ರಿಲರ್ ಸಿನಿಮಾ ಆಗಿದ್ದು ಇಂದು ಮಂಜುನಾಥನ ಸನ್ನಿಧಿಯಲ್ಲಿ ಚಿತ್ರಕ್ಕೆ ಚಾಲನೆ ನೀಡಲಾಗಿದೆ.
ಕಿರುತೆರೆ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಜೋಡಿ ಹಕ್ಕಿ' ಚಿತ್ರದ ನಟ ಶಂಕರ್ ಕೋನಮಾನಹಳ್ಳಿ ಅವರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಬರೆದಿದ್ದಾರೆ. ಚಿತ್ರ ಮುಹೂರ್ತದಲ್ಲಿ ಆರ್ ವಿ ಮಮತ ಆರಂಭ ಫಲಕ ತೋರಿಸಿದ್ದರು ಹಾಗೂ ನಿರ್ಮಾಪಕ ವರ್ತೂರು ಕ್ಯಾಮೆರಾ ಜಾಲನೆ ಮಾಡಿದ್ದರು.
'ತ್ರಿಬಲ್ ರೈಡಿಂಗ್' ಮಾಡುತ್ತಿದ್ದ 'ಜೊತೆ ಜೊತೆಯಲಿ' ನಟಿ ಜೊತೆ ಮಾತುಕಥೆ
ಅಘನ್ಯ ಪಿಕ್ಚರ್ಸ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಮೂವರ ನಟರು ಇರಲಿದ್ದಾರೆ. ಶಂಭು ಪಾತ್ರದಲ್ಲಿ ಅಭಯ್ ಪುನೀತ್, ಶಿವನ ಪಾತ್ರದಲ್ಲಿ ರಕ್ಷಕ್ ಹಾಗೂ ಶಂಕರನ ಪಾತ್ರ ರೋಹಿತ್ ಮಿಂಚಲಿದ್ದಾರೆ. ಪಂಚರಂಗಿ ಚಿತ್ರದ ಸೋನಾಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಗೌಸ್ ಫೀರ್ ಹಾಗೂ ಹಿತನ್ ಚಿತ್ರಕ್ಕೆ ಮೂರು ಹಾಡುಗಳನ್ನು ರಚಿಸಲಿದ್ದಾರೆ. ನಟರಾಜ್ ಮುದ್ದಾಲ ಛಾಯಾಗ್ರಹಣ, ಕಲೈ ನೃತ್ಯ ನಿರ್ದೇಶನ, ವೆಂಕಟೇಶ್ ಯುಡಿವಿ ಸಂಕಲನ ಹಾಗೂ ಅಲ್ಟಿಮೆಟ್ ಶಿವು ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
ಕೆಲ ದಿನಗಳ ಹಿಂದೆ ನಟ ಧನಂಜಯ್ ಹಾಗೂ ವಸಿಷ್ಠ ಸಿಂಹ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಿದ್ದರು. ಮೊದಲ ಬಾರಿಗೆ ಬೆಳ್ಳಿ ತೆರೆಗೆ ಎಂಟ್ರಿ ಕೊಡುತ್ತಿರುವ ಶಂಕರ್ ಕೋನಮಾನಹಳ್ಳಿ ತಂಡಕ್ಕೆ ಶುಭವಾಗಲಿ ಎಂದು ಆಷಿಸೋಣ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.