ರೈತರ ಪರ ಧ್ವನಿ ಎತ್ತಿದ ನಟ ಚೇತನ್; ಅದ್ಭುತ ಮಾತುಗಳಿಗೆ ನೆಟ್ಟಿಗರು ಫಿದಾ!

By Suvarna News  |  First Published Sep 28, 2020, 2:16 PM IST

ರಾಜ್ಯ ಹಾಗೂ ಕೇಂದ್ರ ಸರಕಾರಗಳು ಮಂಡಿಸಿದ ರೈತ ಮಸೂದೆಗಳು ರೈತರ ಮೇಲೆ ಯಾವ ರೀತಿ ದುಷ್ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಮಾತನಾಡಿ, ಆ ದಿನಗಳು ನಟ ಚೇತನ್‌ ನೆಟ್ಟಿಗರ ಗಮನ ಸೆಳೆದಿದ್ದಾರೆ. ಸರ್ಕಾರ ಮಾಡುತ್ತಿರುವುದೇನು? ಮುಂದೆ ಏನು ಮಾಡುತ್ತದೆ ಎಂಬುದನ್ನು ವಿಡಿಯೋ ಮೂಲಕ ವಿವರಿಸಿದ್ದಾರೆ.


ಕಳೆದೊಂದು ವಾರದಿಂದ ಕರ್ನಾಟಕ ಸರಕಾರ ಅಂಗೀಕರಿಸಿದ ರೈತ ಮಸೂದೆಗಳ ಕುರಿತು ಚರ್ಚೆ ನಡೆಯುತ್ತಿವೆ. ರೈತ ಸಂಘಟನೆಗಳು ಹಾಗೂ ರೈತ ಪರ ಸಂಘನಟೆಗಳು ಈ ಮಸೂದೆಗಳನ್ನು ವಿರೋಧಿಸಿ ಇಂದು (ಸೆ.28) ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಅನೇಕ ಕಡೆ ಪ್ರತಿಭಟನೆಗಳು ನಡೆಯುತ್ತಿವೆ. ಕರ್ನಾಟಕ ರಾಜ್ಯದ ಅಭಿವೃದ್ಧಿ ಪರ ಚಂತಿಸುವ ನಟ ಚೇತನ್,  ಈ ವಿಚಾರದ ಬಗ್ಗೆಯೂ ಧ್ವನಿ ಎ,ತ್ತಿ ರೈತರ ಪರ ಮಾತನಾಡಿದ್ದಾರೆ.

Latest Videos

undefined

ಟ್ಟೀಟ್ ವೈರಲ್:
'ರೈತರ ವಸೂದೆ ಎಪಿಎಂಸಿ ಮಂಡಿಗಳನ್ನು ಕಡಿಮೆ ಮಾಡುತ್ತದೆ ಹಾಗೂ ರೈತರ ಮೇಲೆ ಎಲ್ಲಿಲ್ಲದ ಒತ್ತಡ ಹೇರಿ, ತಾವು ಬೆಳೆದ ಬೆಳೆಯನ್ನು ಇತರೆ ಮಾರ್ಗಗಳಿಂದ ಮಾರಟ ಮಾಡಿಸುತ್ತಾರೆ. ಇದನ್ನು ಇಂದು ನಾವು ಒಪ್ಪಿಕೊಂಡರೆ, ಈ ಕಾಯ್ದೆ ಜಾರಿಯಾಗುತ್ತದೆ. ರೈತರ ಮೇಲಿನ ದಬ್ಬಾಳಿಕೆ ಮುಂದುವರಿಯುತ್ತದೆ. 2006ರಲ್ಲಿ ಬಿಹಾರ ರಾಜ್ಯಕ್ಕೂ ಹೀಗೆ ಮಾಡಿದ್ದರು. ಸರಿಯಾದ ಬೆಲೆಯಲ್ಲಿ ಬೆಳೆ ಮಾರಾಟವಾಗುವುದಿಲ್ಲ, ಕೃಷಿ ಕೆಲಸ ಕಡಿಮೆಯಾಗುತ್ತದೆ. ಸರ್ಕಾರಕ್ಕೆ ಆದಾಯ ಇರುವುದಿಲ್ಲ. ಇದರಿಂದ ರೈತರಿಗೆ ಅತಿ ಕಡಿಮೆ ಹಣ ಸಿಗುತ್ತದೆ,' ಎಂದು ಟ್ಟೀಟ್ ಮಾಡಿದ್ದಾರೆ.

'ಸರ್ಕಾರ ಕಾರ್ಪೋರೇಟ್ ಜಗತ್ತಿಗೆ, ಇಂಗ್ಲೀಷ್ ಮಾತಾಡೊರಿಗೆ ಮಾರಾಟ ಆಗೋದನ್ನ ಖಂಡಿಸ್ತೇವೆ' 

ವಿಡಿಯೋದಲ್ಲಿ ಏನು ಹೇಳಿದ್ದಾರೆ?
'ನಮ್ಮ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೂಲ ಕರ್ತವ್ಯ ಏನೆಂದರೆ ಒಂದು ಸಹ ಬಾಳ್ವೆಯ, ಸೌಹಾರ್ದತೆಯ ಸ್ವತಂತ್ರ್ಯ ಸಮಾಜ ಕಟ್ಟಿಕೊಡಬೇಕು. ಇದಕ್ಕೆ ಸರಕಾರ ಜಾರಿಗೊಳಿಸುವ ಕಾಯ್ದೆಗಳು ನಮ್ಮ ಶ್ರಮ ಜೀವಿಗಳಾದ ನಮ್ಮ ಅನ್ನದಾತರ ಪರವಾಗಿ ಕಾಳಜಿ ವಹಿಸುವಂತಿರಬೇಕು. ಆದರೆ ಇತ್ತಿಚಿಗೆ ರೈತ ವಿರೋಧಿ ಮಸೂದೆಗಳನ್ನು ಜಾರಿಗೊಳಿಸಿ, ರೈತರ ಸ್ವಾಭಿಮಾನದ ಬದುಕು ಕಟ್ಟಿಕೊಡಬೇಕು ಎಂಬ ಉದ್ದೇಶವಿಲ್ಲದಂತೆ ಈ ಸರ್ಕಾರಗಳು ಕೆಲಸ ಮಾಡುತ್ತಿವೆ. ಎಪಿಎಂಸಿ ಮಂಡಿಗಳನ್ನು ದುರ್ಬಲಗೊಳಿಸಿ, ಸರ್ಕಾರ ಸ್ನೇಹಿ  ಬಂಡವಾಳ ಶಾಹಿಗಳು, ಕಾರ್ಪೋರೇಟ್‌ ಜಗತ್ತಿಗೆ ಸೀದಾ ರೈತರ ಜೊತೆ ವ್ಯವಹಾರ ಮಾಡುವ ಅವಕಾಶ ಕೊಟ್ಟಿದ್ದಾರೆ. ರೈತ ಬೆಳೆದ ಬೆಲೆಗೆ ಬೆಂಬಲ ಬೆಲೆಯೂ ಇರುವುದಿಲ್ಲ. ಅದಕ್ಕೆ ನಾವು ರೈತರ ಪರ ನಿಲ್ಲಬೇಕು,' ಎಂದು ಹೇಳುತ್ತಾ ವಿಡಿಯೋದಲ್ಲಿ ಅನೇಕ ರೈತರಿಗೆ ಸಂಬಂಧಿಸಿದ ವಿಚಾರಗಳನ್ನು ಚರ್ಚಿಸಿದ್ದಾರೆ.

"

ರೈತ ಪರ ನಿಂತ ಚೇತನ್‌ ಅವರನ್ನು ಸೋಷಿಯಲ್ ಮೀಡಿಯಾದ ಅನೇಕ ಟ್ರೋಲ್ ಪೇಜ್‌ಗಳು ಸಪೋರ್ಟ್‌ ಮಾಡುತ್ತಿವೆ. ರೈತ ಪರ ಮಾತನಾಡಿ ಧ್ವನಿ ಎತ್ತುತ್ತಿರುವ ಈ ನಟನನ್ನು ಮೆಚ್ಚಿಕೊಂಡಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಹೊರಟಿರುವ ಕಾರ್ಮಿಕ ಕಾನೂನು, ಭೂ ಸುಧಾರಣ ಕಾಯ್ದೆ ಮತ್ತು ಎಪಿಎಂಸಿ ಕಾಯ್ದೆಗಳನ್ನು ವಾಪಸು ಪಡೆಯುವಂತೆ ಆಗ್ರಹಿಸಿ ರೈತಪರ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿವೆ.

click me!