ಆಲ್ಕೋಹಾಲ್ ಜಾಹೀರಾತಿನಲ್ಲಿ ಕಾಣಿಸಿಕೊಂಡ ನಟಿ ರೆಜಿನಾ ಕ್ಯಾಸ್ಯಾಂಡ್ರಾಗೆ ನೆಟ್ಟಿಗರಿಂದ ಹಿಗ್ಗಾಮುಗ್ಗಾ ಕ್ಲಾಸ್.
'ಸೂರ್ಯಕಾಂತಿ' (Suryakanthi) ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ (Sandalwood) ಪಾದಾರ್ಪಣೆ ಮಾಡಿದ ನಟಿ ರೆಜಿನಾ ಕ್ಯಾಸ್ಯಾಂಡ್ರಾ (Regina Cassandra) ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಲಕ್ಷಗಟ್ಟಲೆ ಫಾಲೋವರ್ಸ್ ಹೊಂದಿರುವ ಈ ಚೆಲುವೆ ಖಾಸಗಿ ಜಾಹೀರಾತಿನಲ್ಲಿ (Advertisment) ಕಾಣಿಸಿಕೊಂಡಿದ್ದಾರೆ. ಸೀರೆನೋ, ಒಡವೆನೋ ಮಾಡೋದು ಬಿಟ್ಟು ಇದೇ ಬೇಕಿತ್ತಾ ಎಂದು ನೆಟ್ಟಿಗರು ಕಾಮೆಂಟ್ ಮಾಡಲು ಕಾರಣವೇನು?
ರೆಜೆನಾ ಒಂದು ಫೋಟೋ ಹಂಚಿಕೊಂಡಿದ್ದಾರೆ ಅದರಲ್ಲಿ ಟೆಬಲ್ ಮುಂದೆ ಮದ್ಯದ ಬಾಟಲ್ (Alcohol) ಹಾಗೂ ಕೈಯಲ್ಲಿ ಒಂದು ಗ್ಲಾಸ್, ಅದರಲ್ಲೂ ಮದ್ಯ ತುಂಬಿಕೊಂಡು ಫೋಸ್ ನೀಡಿದ್ದಾರೆ. ತಾವು ಸಿಗ್ನೇಚರ್ ವಿಸ್ಕಿ ಬ್ರ್ಯಾಂಡ್ ಅಂಬಾಸಿಡರ್ ಆಗಿರುವುದಾಗಿಯೂ ಹೇಳಿಕೊಂಡಿದ್ದಾರೆ. 'ನನ್ನ ಒಂಬತ್ತನೇ ವಯಸ್ಸಿನಲ್ಲಿ ಆಂಕರಿಂಗ್ (Anchoring) ಮಾಡಲು ಆರಂಭಿಸಿದೆ. ಈಗ ಕಮರ್ಷಿಯಲ್ ಚಿತ್ರಗಳಲ್ಲಿ (Commercial Film) ನಟಿಸುವೆ, ಜಾಹೀರಾತುಗಳಲ್ಲಿ ಕಾಣಿಸಿಕಳ್ಳುವ ಹಂತಕ್ಕೆ ಬಂದು ತಲುಪಿದ್ದೇನೆ. ಇದು ನನ್ನ ಪಯಣ. ಈ ನೆನಪುಗಳು ಸದಾ ನನ್ನ ಜೊತೆಯಲ್ಲಿ ಇರುತ್ತವೆ. ಇದನ್ನು ಈಗ ನಾನು ಸಿಗ್ನೇಚರ್ (Signature) ಜೊತೆಗೆ ಸೆಲೆಬ್ರೇಟ್ ಮಾಡಿಕೊಳ್ಳುತ್ತಿದ್ದೇನೆ,' ಎಂದು ಹೇಳಿದ್ದಾರೆ.
ಇದು ಎಣ್ಣೆ ಉತ್ತೇಜಿಸುವ ಜಾಹೀರಾತು ಎಂದು ರೆಜಿನಾಗೆ ಗೊತ್ತಿದ್ದರೂ ಫೋಸ್ಟ್ ಮಾಡಿರುವುದಕ್ಕೆ ನೆಟ್ಟಿಗರು ಬೇಸರ ವ್ಯಕ್ತ ಪಡಿಸಿದ್ದಾರೆ. 'ನಿಮಗೆ ಸಾಮಾಜಿಕ ಜವಾಬ್ದಾರಿ (Social Responsibility) ಮತ್ತು ಕಳಕಳಿ ಇಲ್ಲವೇ?', 'ಆಲ್ಕೋಹಾಲ್ ಪ್ರಮೋಟ್ (Promotion of Alchohol) ಮಾಡುವ ನಿನ್ನ ಇಂದಿನ ಸ್ಥಿತಿ ನೋಡಿ ಅಯ್ಯೋ ಅನಿಸುತ್ತಿದೆ', ' ದುಡ್ಡಿಗಾಗಿ ಇಂತಹ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳಲು ನಾಚಿಕೆ ಆಗಬೇಕು...' ಎಂದು ನೆಟ್ಟಿಗರು ಮನಸೋ ಇಚ್ಛೆ ಕಮೆಂಟ್ ಮಾಡಿದ್ದಾರೆ.
ಬಾಯ್‌ಫ್ರೆಂಡ್ ಜೊತೆ ಸೀಕ್ರೆಟ್ ಎಂಗೇಜ್‌ಮೆಂಟ್ ಮಾಡಿಕೊಂಡ್ರಾ ನಟಿ?ವಿಶಾಲ್ (Vishal) ಜೊತೆ 'ಚಕ್ರ' ಸಿನಿಮಾದಲ್ಲಿ ನಟಿಸಿದ ನಂತರ ರೆಜಿನಾ ಯಾವ ಸಿನಿಮಾವನ್ನೂ ಬಗ್ಗೆ ಅನೌನ್ಸ್ ಮಾಡಿಲ್ಲ. ಬದಲಿಗೆ ಸೈಲೆಂಟ್ ಆಗಿ ಈ ಕೆಲಸ ಮಾಡುತ್ತಿದ್ದಾರೆ.
ಕೊರೋನಾ ಭಯ: ರೊಮ್ಯಾನ್ಸ್‌ಗೆ ನೋ ಎಂದ 'ಸೂರ್ಯಕಾಂತಿ' ನಟಿ!ಸೆಲೆಬ್ರಿಟಿಗಳು ಪ್ರಚಾರ ಮಾಡುವ ಅನೇಕ ಬ್ರ್ಯಾಂಡ್‌ಗಳು ಜನಪ್ರಿಯತೆ ಪಡೆಯವುದೇ ಈ ಟ್ರೋಲ್‌ಗಳ ಮೂಲಕ. ಈ ಹಿಂದೆ ಅಮಿತಾಭ್ ಬಚ್ಚನ್ ಅವರು ಪಾನ್ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಂಡು, ತಂಬಾಕು ಪ್ರಚಾರ ಮಾಡಿದ್ದಕ್ಕೆ ಅಭಿಮಾನಿಗಳು ಅಸಮಾಧಾನ ವ್ಯಕ್ತ ಪಡಿಸಿದ್ದರು.