ಅದೇ ಚಿತ್ರದಲ್ಲಿ ಭಾರತದ ಮತ್ತೊಬ್ಬ ಸೂಪರ್ ಸ್ಟಾರ್ ನಟ ರಜನಿಕಾಂತ್ ನಟಿಸುತ್ತಿದ್ದಾರೆ. ಜತೆಗೆ, ಕನ್ನಡದ ರಿಯಲ್ ಸ್ಟಾರ್ ಖ್ಯಾತಿಯ ನಟ ಉಪೇಂದ್ರ ಕೂಡ ಜೊತೆಯಾಗಿದ್ದಾರೆ. ಈ ಮೂಲಕ ಮುಂಬರಲಿರುವ ಕೂಲಿ ಚಿತ್ರವು ಭಾರೀ ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿದೆ ಎನ್ನಬಹುದು. ..
ಕನ್ನಡದ ಸ್ಟಾರ್ ನಟ ಉಪೇಂದ್ರ ಅವರು ಕೂಲಿ ಚಿತ್ರದಲ್ಲಿ ನಟಿಸಲಿದ್ದಾರೆ. ಹೀಗೊಂದು ಸುದ್ದಿ ನ್ಯಾಷನಲ್ ಲೆವಲ್‌ನಲ್ಲಿ ಹರಿದಾಡುತ್ತಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಈ ಸುದ್ದಿ ಈಗ ಈ ಸುದ್ದಿ ಭಾರೀ ವೈರಲ್ ಆಗುತ್ತಿದೆ. ಕಾರಣ, ನಟ ಉಪೇಂದ್ರ ಅವರು ಕೌಲ ನಟರಲ್ಲ, ಮಹಾನ್ ನಿರ್ದೇಶಕರು ಕೂಡ. ಸದ್ಯದಲ್ಲೇ ಅವರ ನಟನೆ-ನಿರ್ದೇಶನದ 'ಯು/ಐ' ಚಿತ್ರ ತೆರೆಗೆ ಬರಲಿದೆ. ಈ ಚಿತ್ರವನ್ನು ಭಾರತ ಮಾತ್ರವಲ್ಲ, ಜಗತ್ತಿನ ಅನೇಕ ದೇಶಗಳು ಕುತೂಹಲದಿಂದ ಕಾಯುತ್ತಿವೆ.
ಇಂತಹ ಹೊತ್ತಿನಲ್ಲಿ, ಭಾರತದ ಸೂಪರ್ ಸ್ಟಾರ್ ನಟ ರಜನಿಕಾಂತ್ ನಾಯಕತ್ವದ 'ಕೂಲಿ' ಚಿತ್ರದಲ್ಲಿ ನಟ ಉಪೇಂದ್ರ ಬಹುಮುಖ್ಯ ಪಾತ್ರ ಮಾಡುತ್ತಿದ್ದಾರೆ ಎಂಬ ಸುದ್ದು ಹರಿದಾಡುತ್ತಿದೆ. ಇದು ಬರೀ ಸುದ್ದಿಯಲ್ಲ, ಪಕ್ಕಾ ಎನ್ನಲಾಗಿದೆ. ಲೋಕೇಶ್ ಕಂಗರಾಜ್ ನಿರ್ದೇಶನದ ಕೂಲಿ ಚಿತ್ರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ನಟಿಸುತ್ತಿದ್ದು ಇದು ಭಾರೀ ಬಿಗ್ ಬಜೆಟ್ ಚಿತ್ರವಾಗಿದೆ. ಈ ಮೊದಲು 1983ರಲ್ಲಿ 'ಕೂಲಿ' ಹೆಸರಿನ ಚಿತ್ರ ತೆರೆಗೆ ಬಂದಿತ್ತು. ಅದರಲ್ಲಿ ಬಾಲಿವುಡ್ ಬಿಗ್ ಬಿ ಖ್ಯಾತಿಯ ನಟ ಅಮಿತಾಭ್ ಬಚ್ಚನ್ ನಟಿಸಿದ್ದರು.
ಇದೀಗ ಅದೇ ಚಿತ್ರದಲ್ಲಿ ಭಾರತದ ಮತ್ತೊಬ್ಬ ಸೂಪರ್ ಸ್ಟಾರ್ ನಟ ರಜನಿಕಾಂತ್ ನಟಿಸುತ್ತಿದ್ದಾರೆ. ಜತೆಗೆ, ಕನ್ನಡದ ರಿಯಲ್ ಸ್ಟಾರ್ ಖ್ಯಾತಿಯ ನಟ ಉಪೇಂದ್ರ ಕೂಡ ಜೊತೆಯಾಗಿದ್ದಾರೆ. ಈ ಮೂಲಕ ಮುಂಬರಲಿರುವ ಕೂಲಿ ಚಿತ್ರವು ಭಾರೀ ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿದೆ ಎನ್ನಬಹುದು. ಉಪೇಂದ್ರ ಅವರು ಕೂಲಿ ಚಿತ್ರದಲ್ಲಿ ಯಾವತ್ತಿನಿಂದ ನಟಿಸಲಿದ್ದಾರೆ ಎಂಬ ಮಾಹಿತಿ ಇನ್ನಷ್ಟೇ ಬರಬೇಕಿದೆ. ಸದ್ಯ ನಟ ಉಪೇಂದ್ರ ಅವರು ತಮ್ಮ ಯುಐ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ.
ನಟ ರಜನಿಕಾಂತ್ ಅವರು ಇತ್ತೀಚೆಗಷ್ಟೇ ಹಿಮಾಲಯಕ್ಕೆ ಹೋಗಿ ಬಂದಿದ್ದಾರೆ. ಅವರು ಆಧ್ಯಾತ್ಮದ ಪಥದಲ್ಲಿ ಸಾಗುತ್ತಿದ್ದು, ಅದಕ್ಕಾಗಿ ಅವರು ಪ್ರತಿವರ್ಷ ತಮ್ಮ ಗುರುಗಳ ಬಳಿಗೆ ಹೋಗುತ್ತಾರೆ. ಅವರ ಸಾನಿಧ್ಯದಲ್ಲಿ ಆಧ್ಯಾತ್ಮ ಸಾಧನೆ ಮಾಡಿ ಆಶೀರ್ವಾದ ಪಡೆದುಕೊಂಡು ಬರುತ್ತಾರೆ ಎನ್ನಲಾಗಿದೆ. ನಟ ರಜನಿಕಾಂತ್ ಅವರು ಅಗತ್ಯವಿರುವವರಿಗೆ ಸಹಾಯಹಸ್ತ ನೀಡಲು ಯಾವತ್ತೂ ಹಿಂದೆಮುಂದೆ ಯೋಚಿಸುವವರಲ್ಲ ಎಂಬುದು ಜಗತ್ತಿಗೇ ಗೊತ್ತು. ಅವರು ಮಾಡಿರುವ ಸಹಾಯ ಹೊರ ಪ್ರಪಂಚಕ್ಕೆ ತಿಳಿದಿರುವುದು ಅತ್ಯಲ್ಪವಷ್ಟೇ ಎನ್ನಲಾಗಿದೆ.