ವಿಜಯಲಕ್ಷ್ಮಿಗಾಗಿ ಪವಿತ್ರಾ ಗೌಡರಿಂದ ದೂರಾದ್ರ ದರ್ಶನ್?: ಗಂಡ ಹೆಂಡತಿಯನ್ನು ಒಂದಾಗಿಸಿದ್ದು ಆ ಮರ್ಡರ್!

By Govindaraj S  |  First Published Aug 24, 2024, 4:13 PM IST

ಗಂಡ ಹೆಂಡತಿ ಸಂಬಂಧ ಹಾಲು ಜೇನಿನಂತಿರಬೇಕು. ನಂಬಿಕೆ, ವಿಶ್ವಾಸ, ಗೌರವ ಮತ್ತು ಪ್ರೀತಿ ಇರಬೇಕು. ನಟ ದರ್ಶನ್​​​ ಜೊತೆಗಿನ ಸಂಬಂಧವನ್ನ ಗಟ್ಟಿ ಮಾಡಿಕೊಳ್ಳಲು ವಿಜಯಲಕ್ಷ್ಮಿ ಹೋರಾಡಿದ್ದು ಅಷ್ಟಿಷ್ಟಲ್ಲ. ಎಷ್ಟೇ ಗಲಾಟೆ ಹೊಡೆದಾಟ ಬಡಿದಾಟ ಆದ್ರು ವಿಜಯಲಕ್ಷ್ಮಿ ತನ್ನ ಗಂಡನಿಗಾಗಿ ಎಲ್ಲವನ್ನ ಸಹಿಸಿಕೊಂಡೇ ಬಂದ್ರು. 
 


ಗಂಡ ಹೆಂಡತಿ ಸಂಬಂಧ ಹಾಲು ಜೇನಿನಂತಿರಬೇಕು. ನಂಬಿಕೆ, ವಿಶ್ವಾಸ, ಗೌರವ ಮತ್ತು ಪ್ರೀತಿ ಇರಬೇಕು. ನಟ ದರ್ಶನ್​​​ ಜೊತೆಗಿನ ಸಂಬಂಧವನ್ನ ಗಟ್ಟಿ ಮಾಡಿಕೊಳ್ಳಲು ವಿಜಯಲಕ್ಷ್ಮಿ ಹೋರಾಡಿದ್ದು ಅಷ್ಟಿಷ್ಟಲ್ಲ. ಎಷ್ಟೇ ಗಲಾಟೆ ಹೊಡೆದಾಟ ಬಡಿದಾಟ ಆದ್ರು ವಿಜಯಲಕ್ಷ್ಮಿ ತನ್ನ ಗಂಡನಿಗಾಗಿ ಎಲ್ಲವನ್ನ ಸಹಿಸಿಕೊಂಡೇ ಬಂದ್ರು. ಈಗ ಈ ಗಂಡ ಹೆಂಡತಿ ಸಂಬಂಧವನ್ನ ಮತ್ತಷ್ಟು ಗಟ್ಟಿ ಮಾಡಿದೆ ರೇಣುಕಾ ಸ್ವಾಮಿ ಮರ್ಡರ್.. ಹಾಗಾದ್ರೆ ಅದು ಹೇಗೆ..? ಇಲ್ಲಿದೆ ನೋಡಿ ಫುಲ್ ಡಿಟೈಲ್ಸ್. ನಮ್ಮವರು ಯಾರು ಅನ್ನೋದು ನಮಗೆ ಕಷ್ಟ ಬಂದಾಗ್ಲೆ ಗೊತ್ತಾಗೋದಂತೆ. ಈಗ ದರ್ಶನ್ ವಿಚಾರದಲ್ಲೂ ಅದೆಲ್ಲಾ ಜಗತ್ ಜಾಹೀರಾಗುತ್ತಿದೆ. ಮೊದ್ಲೆಲ್ಲಾ ದರ್ಶನ್ ದಾಂಪತ್ಯ ಜೀವನ ಬಗ್ಗೆ, ವಿವಾದದ ಬಗ್ಗೆ ಕೇಳಿ ಕೇಳಿ ಸಾಕಾಗಿತ್ತು. 

ಆದ್ರೆ ಈ ಒಂದು ಕೊಲೆ ಕೇಸ್​​​​ ಅವರ ದಾಂಪತ್ಯವನ್ನ ಚಿನ್ನದಷ್ಟು ಗಟ್ಟಿ ಮಾಡಿದೆ. ಗಂಡನಿಗೋಸ್ಕರ ವಿಯಲಕ್ಷ್ಮಿ ಪಡಿಪಾಟಲು ಪಡ್ತಾ ಇದ್ರೆ, ಇತ್ತ ದರ್ಶನ್ ಹೆಂಡತಿ ಹೇಳಿದ ಮಾತನ್ನ ಚಾಚೂ ತಪ್ಪದ ಹಾಗೆ ಕೇಳುತ್ತಿದ್ದಾರೆ. ಗಂಡ ಹೆಂಡತಿ ಜಗಳ ಉಂಡು ಮಲಗೋ ತನ ಅಂತ ಹೇಳ್ತಾರೆ. ಆದ್ರೆ ದರ್ಶನ್ ಮತ್ತು ವಿಜಯಲಕ್ಷ್ಮಿ ಜಗಳ ಯಾಕೋ ಆ ರೀತಿ ಆಗ್ಲೇ ಇಲ್ಲ. ಹಾದಿ ರಂಪ ಬೀದಿ ಬಡಿದಾಟ ಆಗಿತ್ತು. ಸ್ಟೇಷನ್ ಮೆಟ್ಟಿಲು ಹತ್ತಾಯ್ತು ದರ್ಶನ್ ಜೈಲು ಸೇರಿದ್ದಾಗಿತ್ತು. 2011ರಲ್ಲಿ ಶುರುವಾದ ಈ ದಾಂಪತ್ಯದ ಕಲಹ ನಿನ್ನೆ ಮೊನ್ನೆ ವರೆಗೂ ಹಾಗೆ ಇತ್ತು. ಒಂದ್ ತರ ಎತ್ತು ಏರಿಗೆಳೆದ್ರೆ, ಕೋಣ ನೀರಿಗೆಳಿತೂ ಅನ್ನೋ ಹಾಗಿತ್ತು. 

Tap to resize

Latest Videos

ಇಬ್ಬರ ದಾಂಪತ್ಯದ ನಡುವೆ ಎಷ್ಟೋ ನಾಯಕಿಯರ ಹೆಸರು ತಳುಕು ಹಾಕಿಕೊಂಡ್ರು, ಪರ್ಮನೆಂಟ್ ಆಗಿ ಅಲ್ಲಿ ಸ್ಥಾನ ಪಡೆದಿದ್ದು ಮಾತ್ರ ಪವಿತ್ರಾ ಗೌಡ. ಹೌದು, ಪವಿತ್ರ ಆಗೌಡ ಹಾಗು ದರ್ಶನ್ ಸಂಬಂಧ ಗಟ್ಟಿ ಆದಷ್ಟು, ಇತ್ತ ದರ್ಶನ್ ಹಾಗು ವಿಜಯಲಕ್ಷ್ಮಿ ದಾಂಪತ್ಯ ತೂಗು ಉಯ್ಯಾಲೆಯಂತಾಗಿತ್ತು. ಒಮ್ಮೆ ಎಲ್ಲವು ಸೆಟಲ್​ ಅಂತ ಕಾಣಿಸಿದ್ರು, ಮತ್ತೊಮ್ಮೆ ಏನೂ ಸರಿ ಇಲ್ಲ ಅನ್ನೊದನ್ನ ಸಾರಿ ಸಾರಿ ಹೇಳ್ತಾ ಇತ್ತು. ಆದ್ರೆ ಈ ದಾಂಪತ್ಯ ಉಳಿಯೋದಕ್ಕೆ ಕಾರಣ ಆಗಿದ್ದು ಮಾತ್ರ ಮಗ ವಿನೀಶ್​.. ಆ ಗಮನಿಗೋಸ್ಕರ ದರ್ಶನ್ ವಿಜಯಲಕ್ಷ್ಮಿ ದಾಂಪತ್ಯ ಕೊನೆ ಗಂಟಿನಲ್ಲಿ ಸಿಕ್ಕಾಕಿಕೊಂಡಿತ್ತು. ಈ ದಾಂಪತ್ಯ ಅಂತ್ಯ ಆಗುತ್ತೆ ಅನ್ನೋ ಮಾತುಗಳು ಹುಟ್ಟಿರುವಾಗ್ಲೆ ಆಗಿದ್ದು ರೇಣುಕಾ ಸ್ವಾಮಿ ಕೊಲೆ. 

ಈ ಮರ್ಡನ್ ದರ್ಶನ್​​ನ ಸುತ್ತಿಕೊಳ್ತು ನೋಡಿ. ಅದಕ್ಕೂ ಕಾರಣ ಗೆಳತಿ ಪವಿತ್ರಾ ಗೌಡ ಅಂತ ಬಿಡಿಸಿ ಹೇಳಬೇಕಿಲ್ಲ. ಆದ್ರೆ ಅದಾದ ನಂತರ ದರ್ಶನ್ ಅನುಭವಿಸುತ್ತಿರೊ ಯಾತನೆ ಇದೆಯಲ್ಲ ನಿಜಕ್ಕೂ ಆತನ ಶತ್ರುಗಳಿಗೂ ನೋವು ತಂದಿದೆ. ಕೋಟಿ ಕೋಟಿ ದುಡ್ಡಿದೆ. ಕೇಳಿದ್ರೆ ಪ್ರಾಣವನ್ನೇ ಕೊಡೋ ಅಭಿಮಾನಿಗಳಿದ್ದಾರೆ. ಬಯಸಿದ್ದನ್ನ ತೆಗೆದುಕೊಳ್ಳೋ ತಾಕತ್ತಿದೆ. ಆದ್ರೆ ಅದೆಲ್ಲವೂ ಈಗ ಶೂನ್ಯದಂತೆ ಕಾಣುತ್ತಿದೆ. ಜೈಲು ವಾಸ ದರ್ಶನ್​​ರನ್ನ ಶೂನ್ಯವನ್ನಾಗಿ ಮಾಡಿದೆ. ದರ್ಶನ್ ಜೈಲು ಸೇರಿ 63 ದಿನ ಆಗಿದೆ. ಯಾವತ್ತು ಹೊರಗೆ ಬರುತ್ತಾರೋ ಗೊತ್ತಿಲ್ಲ. ಆದ್ರೆ, ಜೈಲು ಸೇರಿದಾಗಿನಿಂದ ಇವತ್ತಿನ ವರೆಗೂ ದರ್ಶನ್​ಗಾಗಿ ಒದ್ದಾಡ್ತಿರೋ ಜೀವ ಅಂದ್ರೆ ಹೆಂಡತಿ.. ದರ್ಶನ್​​ ಮೇಲೆ ಎಷ್ಟೇ ಕೋಪ ಇದ್ರೂ, ಅವನೇ ನನ್ನ ಬದುಕು ಅನ್ನೋ ನಂಬಿಕೆ ಇದೆ. 

ಡಿಂಪಲ್ ಕ್ವೀನ್​ ಜತೆ ದಾಸನ ರಹಸ್ಯ ಮಾತುಕತೆ: ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಅಭಿಮಾನಿಯ ಹುಚ್ಚಾಟ!

ಹೀಗಾಗಿ ಬಿಡಿಸಿಕೊಂಡು ಬರಲು ತನ್ನ ಬದುಕನ್ನೇ ಸವೆಸುತ್ತಿದ್ದಾರೆ ವಿಜಯಲಕ್ಷ್ಮಿ. ಪೂಜೆ ಯಾಗ ಮಾಡ್ತಾ ದೇವಸ್ಥಾನ ಸುತ್ತುತ್ತಿದ್ದಾರೆ. ಮತ್ತೊಂದ್ ಕಡೆ ಹೇಗಾದ್ರು ನನ್ನ ಗಂಡನ ಬಿಡಿಸಿ ಅಂತ ರಾಜಕೀಯ ನಾಯಕರ ಮನೆ ಮುಂದೆ ಹೋಗಿ ಸಾಮಾನ್ಯ ಮಹಿಳೆಯಂತೆ ನಿಂತುಕೊಳ್ಳುತ್ತಿದ್ದಾರೆ. ಇವೆಲ್ಲಾ ದರ್ಶನ್​​​ಗಾಗಿ ವಿಜಯಲಕ್ಷ್ಮಿ ಮಾಡುತ್ತಿರೋ ಪವಿತ್ರ ಹೋರಾಟ. ಆದ್ರೆ ಅತ್ತ ಕಡೆ ದರ್ಶನ್ ಕೂಡ ತನ್ನ ಪತ್ನಿ ಹೇಳಿದ ಮಾತನ್ನ ಚಾಚೂ ತಪ್ಪದೇ ಕೇಳ್ತಾ ಇದ್ದಾರೆ. ಈ 63 ದಿನಗಳಲ್ಲಿ ಒಂದು ದಿನವೂ ಸಹ ಜೈಲಿನಲ್ಲಿ ಪವಿತ್ರಾ ಗೌಡನ ಮುಖವನ್ನ ದರ್ಶನ್​ ನೋಡಿಲ್ವಂತೆ. ಇದೆಲ್ಲಾ ನೋಡುತ್ತಿದ್ರೆ, ದರ್ಶನ್ ಮತ್ತು ವಿಜಲಕ್ಷ್ಮಿ ಸಂಬಂಧ ಗಟ್ಟಿ ಆಗ್ತಾ ಇರೋದು ಗೊತ್ತಾಗ್ತಾ ಇದೆ. ಒಟ್ಟಿನಲ್ಲಿ ಈ ಕೊಲೆ ಕೇಸ್​ ದರ್ಶನ್​ನ ಜೈಲಿಗೆ ಹಾಕ್ತು ಅನ್ನೋ ಬೇಸರ ಒಂದಾದ್ರೆ, ಈ ದಾಂಪತ್ಯ ಸರಿ ಮಾಡ್ತು ಅನ್ನೋ ನೆಮ್ಮದಿ ಅವರ ಅಭಿಮಾನಿಗಳದ್ದು.

click me!