
ಸ್ಯಾಂಡಲ್‌ವುಡ್ ಲಿಲ್ಲಿ ರಶ್ಮಿಕಾ ಮಂದಣ್ಣ ಇತ್ತೀಚಿನ ದಿನಗಳಲ್ಲಿ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ. ಎಷ್ಟೇ ಬ್ಯುಸಿ ಇದ್ದರೂ ಕೆಲವು ಸಮಯ ವರ್ಕೌಟ್‌ಗೆಂದು ಮೀಸಲಿಡುತ್ತಾರೆ. ತಮ್ಮ ಫಿಟ್ನೆಸ್ ಮಾನಿಟರ್ ಮಾಡುವ ಟ್ರೇನರ್ ಸ್ನೇಹ ಅವರ ಸಲಹೆಯಿಂದ ಈ ವಿಡಿಯೋವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.
ರಶ್ಮಿಕಾ ವಿಡಿಯೋ:
ಕೆಲವು ದಿನಗಳ ಹಿಂದೆ ಬಟ್ಟಲು ತುಂಬಾ ವಿಧವಿಧವಾದ ಹಣ್ಣುಗಳಿರುವ ಫೋಟೋ ಶೇರ್ ಮಾಡಿಕೊಂಡಿದ್ದರು. ಎಲ್ಲರೂ ಇದೇ ರಶ್ಮಿಕಾ ಬ್ರೇಕ್‌ಫಾಸ್ಟ್ ಎಂದು ತಿಳಿದುಕೊಂಡಿದ್ದರು ಈ ಕಾರಣಕ್ಕೆ ರಶ್ಮಿಕಾ ವಿಡಿಯೋದಲ್ಲಿ ತಾವು ಬ್ರೇಕ್‌ಫಾಸ್ಟ್‌ಗೆ ಬಳಸುವ ಸಾಮಾಗ್ರಿಗಳನ್ನು ತೋರಿಸಿ, ತಾವೇನು ತಿನ್ನುವುದು ಎಂಬುದನ್ನು ಖುದ್ದು ತಯಾರಿಸಿ, ವೀಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ.
ಅರ್ಥ ಬಾಳೆ ಹಣ್ಣು, ಒಂದು ಫುಲ್ ಮೊಟ್ಟೆ, ಮತ್ತೊಂದು ಮೊಟ್ಟೆಯಲ್ಲಿ ಬಿಳಿ ಭಾಗ ಮಾತ್ರ ಬಳಸಬೇಕು, ಮೂರು ಡ್ರೈ ಡೇಟ್ಸ್, ಎರಡು ಸ್ಫೂನ್ ಬಾದಾಮಿ ಹಾಲು, ಒಂದು ಚಿಟ್ಕಿ ಬೇಕಿಂಗ್ ಪೌಡರ್, ಒಂದು ಚಿಟ್ಕಿ ಚಕ್ಕೆ ಪುಡಿ, ಮೂರು ಸ್ಫೂನ್ ಓಟ್ಸ್ ಮತ್ತು ಒಂದು ಸ್ಫೂನ್ ಚಾಕೊಲೇಟ್ ಪ್ರೋಟಿನ್ ಪೌಡರ್. ಎಲ್ಲವನ್ನೂ ಮಿಕ್ಸ್ ಮಾಡಿ ಪ್ಯಾನ್ ಕೇಕ್ ರೀತಿಯಲ್ಲಿ ತಯಾರಿಸಿಕೊಳ್ಳುತ್ತಾರೆ. ಇದೇ ರಶ್ಮಿಕಾ ದಿನ ನಿತ್ಯದ ಬ್ರೇಕ್‌ಫಾಸ್ಟ್ ಅಂತೆ.
ಫಿಟ್ನೆಸ್ ಮಂತ್ರ:
ಬ್ರೇಕ್‌ಫಾಸ್ಟ್ ರೆಸಿಪಿ ಜೊತೆಗೆ ರಶ್ಮಿಕಾ ಫಿಟ್ನೆಸ್ ಮಂತ್ರವನ್ನೂ ಶೇರ್ ಮಾಡಿಕೊಂಡಿದ್ದಾರೆ. ಅದುವೇ ದಿನವೂ ತಪ್ಪದೇ ಒಂದು ಸ್ಫೂನ್ ತುಪ್ಪ ಸೇವಿಸುತ್ತಾರಂತೆ. ರಶ್ಮಿಕಾ ಅವರ ಕೂರ್ಗ್ ಮನೆಯಲ್ಲಿ ಹಸು ಮತ್ತು ಕರು ಇರುವ ಕಾರಣ ಅವರ ತಾಯಿ ಮನೆಯಲ್ಲಿಯೇ ಆರೋಗ್ಯವಾದ ತುಪ್ಪವನ್ನು ತಯಾರಿಸುತ್ತಾರಂತೆ. ಹೀಗಾಗಿ ಎಲ್ಲರೂ ಒಂದು ಸ್ಫೂನ್ ತುಪ್ಪ ಸೇವಿಸುವುದು ಒಳ್ಳೆಯದು ಎಂದಿದ್ದಾರೆ.
"
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.