ಚಿತ್ರದ ಶೂಟಿಂಗ್ ವೇಳೆ ಅನಾರೋಗ್ಯ, ಸ್ಯಾಂಡಲ್‌ವುಡ್ ನಟ ಶರಣ್ ಆಸ್ಪತ್ರೆಗೆ ದಾಖಲು.
ಕನ್ನಡ ಚಿತ್ರರಂಗದ ಹೆಸರಾಂತ ನಟ ಹಾಗೂ ಹಾಸ್ಯನಟ ಶರಣ್ ಅನಾರೋಗ್ಯದಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. 'ಅವತಾರ' ಪುರುಷ ಆ್ಯಕ್ಷನ್ ದೃಶ್ಯದ ಶೂಟಿಂಗ್ ವೇಳೆ ಅನಾರೋಗ್ಯಕ್ಕೀಡಾಗಿದ್ದು, ತಕ್ಷಣವೇ ಅವರನ್ನು ಚಿಕಿತ್ಸೆಗೆಂದು ನಗರದ ಮಲ್ಲಿಗೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಚುಟು ಚುಟು ಹಾಡಿನ ವಿಶ್ವ ದಾಖಲೆ ಸಂಭ್ರಮ; ಶರಣ್ ಸಿನಿಮಾದ ಹಾಡಿಗೆ 10 ಕೋಟಿ ಹಿಟ್ಸ್!
ಹೆಚ್‌ಎಂಟಿ ಗ್ರೌಂಡ್‌ನಲ್ಲಿ 'ಅವತಾರ ಪುರುಷ' ಸಿನಿಮಾ ಶೂಟಿಂಗ್ ನಡೆಯುತ್ತಿತ್ತು. ಶರಣ್ ಜೊತೆ ನಿರ್ದೇಶಕ ಸಿಂಪಲ್ ಸುನಿ ಹಾಗೂ ನಿರ್ಮಾಪಕರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಸಹೋದರಿ ಶೃತಿ ಹಾಗೂ ಪುತ್ರಿ ಗೌರಿಯೂ ಆಸ್ಪತ್ರೆಗೆ ಆಗಮಿಸಿದ್ದಾರೆ.
ಸುವರ್ಣ ನ್ಯೂಸ್ ಜೊತೆ ಮಾತನಾಡಿದ ತಂಡ 'ಮಸಲ್ ಕ್ಯಾಚ್ ಆದ ಕಾರಣ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ಗಾಬರಿಯಾಗುವ ಅಗತ್ಯವಿಲ್ಲ. ಗ್ಯಾಸ್ಟ್ರಿಕ್ ಎಂದು ಒಂದು ಇಂಜೆಕ್ಷನ್ ನೀಡಲಾಗಿದೆ. ಚಿಕಿತ್ಸೆ ಪಡೆದುಕೊಂಡು ಮಾಧ್ಯಮಗಳೊಂದಿಗೆ ಮಾತನಾಡಿಲಿದ್ದಾರೆ,' ಎಂದು ತಿಳಿಸಿದ್ದಾರೆ.