Kiran Raj: ನಂದಿ ಬೆಟ್ಟದಲ್ಲಿ 'ಬಹದ್ದೂರು ಗಂಡು' ಸಾಹಸ ದೃಶ್ಯ ಚಿತ್ರೀಕರಣ

By Suvarna NewsFirst Published Jan 27, 2022, 4:06 PM IST
Highlights

'ಕನ್ನಡತಿ' ಸೀರಿಯಲ್ ಖ್ಯಾತಿಯ ಕಿರಣ್ ರಾಜ್ ನಾಯಕನಾಗಿ ನಟಿಸಿರುವ, ಪ್ರಸಿದ್ಧ್ ನಿರ್ದೇಶಿಸಿರುವ 'ಬಹದ್ದೂರ್ ಗಂಡು' ಚಿತ್ರದ ಸಾಹಸ ದೃಶ್ಯಗಳ ಚಿತ್ರೀಕರಣ ನಂದಿ ಬೆಟ್ಟದ ಬಳಿ ನಡೆಯುತ್ತಿದೆ.

ಕಿರುತೆರೆಯಿಂದ ಬಂದ ಸಾಕಷ್ಟು ನಟ, ನಟಿಯರು ಬೆಳ್ಳಿ ತೆರೆ ಮೇಲೆ ಸ್ಟಾರ್​ಗಳಾಗಿ ಮಿಂಚಿದ್ದಾರೆ. ಇದೀಗ 'ಕನ್ನಡತಿ' (Kannadathi) ಧಾರಾವಾಹಿ ಮೂಲಕ ಕನ್ನಡಿಗರ ಮನಗೆದ್ದಿರುವ ಕಿರಣ್ ರಾಜ್ (Kiran Raj) ಬಿಗ್ ಸ್ಕ್ರೀನ್ ಅದೃಷ್ಟ ಪರೀಕ್ಷೆಗೆ ಇಳಿದಿದ್ದು, 'ಬಹದ್ದೂರ್ ಗಂಡು' (Bahaddur Gandu) ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಭರ್ಜರಿ ಸಾಹಸ ಸನ್ನಿವೇಶವೊಂದರ ಚಿತ್ರೀಕರಣ ಇತ್ತೀಚೆಗೆ ನಂದಿ ಬೆಟ್ಟದ (Nandi Hills) ಬಳಿ ನಡೆದಿದೆ. ನಾಯಕ ಕಿರಣ್ ರಾಜ್ ಈ ಸಾಹಸ ಸನ್ನಿವೇಶಕ್ಕಾಗಿ ಸುಮಾರು ಮೂರು ತಿಂಗಳಿನಿಂದ ದೊಣ್ಣೆ ವರಸೆ ಕಲಿತಿದ್ದರಂತೆ. ಕಿರಣ್ ರಾಜ್ ಹಾಗೂ ಶಬರಿ ಮಂಜು (Shabari Manju) ಅವರ ನಡುವೆ ಈ ಸಾಹಸ ದೃಶ್ಯ ನಡೆಯುತ್ತದೆ. 

ವಿನೋದ್ (Vinod) ಅವರ ಸಾಹಸ ನಿರ್ದೇಶನದಲ್ಲಿ ಅದ್ದೂರಿಯಾಗಿ ಈ ಸನ್ನಿವೇಶ ಮೂಡಿಬಂದಿದೆ. ನಮ್ಮ ಚಿತ್ರದಲ್ಲಿ ನಾಲ್ಕು ಸಾಹಸ ಸನ್ನಿವೇಶಗಳಿದೆ. ಈ ಸಾಹಸ ಸನ್ನಿವೇಶದಲ್ಲಿ ದೊಣ್ಣೆ ವರಸೆ ಪ್ರಮುಖ ಆಕರ್ಷಣೆ. ಇದಕ್ಕಾಗಿ ನಾಯಕ ಕಿರಣ್ ರಾಜ್ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ ಎಂದು ನಿರ್ದೇಶಕ ಪ್ರಸಿದ್ದ್ (Prasiddh) ತಿಳಿಸಿದ್ದಾರೆ. ಹಾಗೂ ನಾನು ಡಾ.ರಾಜ್ ಕುಮಾರ್ (Dr.Rajkumar) ಅವರ ಬಹು ದೊಡ್ಡ ಅಭಿಮಾನಿ, ಅವರ ಸಿನಿಮಾ ನೋಡುವುದೆಂದರೇ ನನಗೆ ಅಪಾರ ಖುಷಿ, ಅವರ ವ್ಯಕ್ತಿತ್ವ ಹಾಗೂ ಅವರ ಸಿನಿಮಾಗಳು ನನ್ನ ಪಾಲಿಗೆ ಅತ್ಯಮೂಲ್ಯ. ನಾನೊಬ್ಬ ಸಂಗೀತಗಾರನಾಗಿರುವ ಕಾರಣ ರಾಜ್ ಕುಮಾರ್ ಸಿನಿಮಾ ಗೀತೆಗಳನ್ನು ಹೆಚ್ಚಾಗಿ ಹಾಡುತ್ತಿದೆ.

ಕನ್ನಡತಿ ರಂಜನಿ ರಾಘವನ್‌ಗೆ Get well soon champs ಅಂದ್ರು ಕಿರಣ್ ರಾಜ್

'ಬಹದ್ದೂರ್ ಗಂಡು' ಟೈಟಲ್ (Title) ತುಂಬಾ ಹಿಡಿಸಿದ್ದರಿಂದ ಅದೇ ಟೈಟಲ್‌ನ್ನು ಚಿತ್ರಕ್ಕಿಟ್ಟಿದ್ದೇವೆ ಎಂದು ನಿರ್ದೇಶಕ ಪ್ರಸಿದ್ಧ್ ತಿಳಿಸಿದ್ದಾರೆ. ಈ ಮೊದಲು 'ಭಗೀರಥ' ಎಂಬ ಟೈಟಲ್ ಇತ್ತು, ಆದರೆ ಆ ಹೆಸರು ಈಗಾಗಲೇ ಇದ್ದಿದ್ದರಿಂದ ನಾನು 'ಬಹದ್ದೂರ್ ಗಂಡು' ಟೈಟಲ್ ಪಡೆದುಕೊಂಡೆ, ಟೈಟಲ್‌ಗೆ ನ್ಯಾಯ ಒದಗಿಸುವ ಜವಾಬ್ದಾರಿ ನನ್ನದು, ಈ ಚಿತ್ರಕ್ಕಾಗಿ ಹಳ್ಳಿ ಕಥೆಯನ್ನು ತೆಗೆದುಕೊಂಡಿದ್ದೇನೆ ಎಂದು ಚಿತ್ರದ ನಿರ್ದೇಶಕರು ಈ ಹಿಂದೆ ತಿಳಿಸಿದ್ದಾರೆ. ಈ ಚಿತ್ರದಲ್ಲಿ ಪೋಲ್‌ ಫೈಟ್‌ ಇದೆ. ಇದರಲ್ಲಿ ಕಿರಣ್ ರಾಜ್ ಕೋಲನ್ನು ಬಳಸಿ ಫೈಟ್‌ ಮಾಡಿದ್ದಾರೆ. ವಿಶೇಷವಾಗಿ ಈ ಚಿತ್ರಕ್ಕಾಗಿ ದಿನವಿಡೀ ವರ್ಕೌಟ್‌ ಸೆಷನ್‌ನಲ್ಲಿ ಭಾಗಿಯಾಗಿದ್ದ ಕಿರಣ್ ರಾಜ್‌ ಮಾರ್ಷಲ್‌ ಆರ್ಟ್ಸ್ ಕೂಡ ಕಲಿತಿದ್ದಾರೆ. 



ಇನ್ನು ಈ ಚಿತ್ರದಲ್ಲಿ ಯಶಾ ಶಿವಕುಮಾರ್‌ (Yasha Shivakumar) ಮತ್ತು ನಿಸರ್ಗ ಲಕ್ಷ್ಮಣ್ (Nisarga Lakshman) ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಸ್ಪ್ಲಿಟ್‌ ಪರ್ಸನಾಲಿಟಿ ಸಿಂಡ್ರೋಮ್‌ ಇರುವಂತಹ ಹುಡುಗಿಯ ಪಾತ್ರ ಯಶಾ ಶಿವಕುಮಾರ್‌ಗೆ ಸಿಕ್ಕಿದೆ. ಚಾಮರಾಜನಗರದ ಶ್ರೀಚಾಮರಾಜೇಶ್ವರ ದೇವಸ್ಥಾನ, ಯಳಂದೂರು, ವಡ್ಡಗೆರೆ, ಸತ್ತಿಗಾಲ ಇತರೆ ಸ್ಥಳಗಳಲ್ಲಿ 30 ದಿನಗಳವರಗೆ ಚಿತ್ರದ ಚಿತ್ರೀಕರಣ ಮಾಡಲಾಗಿದೆ. ಚಿತ್ರದ ಛಾಯಾಗ್ರಾಹಣ ಕೆಲಸವನ್ನು ಚಾಮರಾಜನಗರದ ಕಿಟ್ಟಿ ಕೌಶಿಕ್ ಮಾಡಿದ್ದಾರೆ. ಮಳ್ಳವಳ್ಳಿ ಸಾಯಿಕೃಷ್ಣ ಅವರ ಸಂಭಾಷಣೆ ಈ ಸಿನಿಮಾಕ್ಕಿದೆ. ಮಾತ್ರವಲ್ಲದೇ ಗುಮ್ಮಿನೇನಿ ವಿಜಯ್ ಸಂಗೀತ ನಿರ್ದೇಶನ, ವೆಂಕಿ ಯು ಡಿ ವಿ ಸಂಕಲನ  ಹಾಗೂ ಮೋಹನ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. 

Puneeth Rajkumar: ಮಾ.17ಕ್ಕೆ ಐದು ಭಾಷೆಗಳಲ್ಲಿ 'ಜೇಮ್ಸ್' ಸಿನಿಮಾ ಬಿಡುಗಡೆ: ಚೇತನ್‌ಕುಮಾರ್

ರಮೇಶ್ ಭಟ್, ವೀಣಾ ಸುಂದರ್, ಜಯಶ್ರೀ ರಾಜ್, ರಾಕೇಶ್ ರಾಜ್, ಸುರೇಖ, ನಾಗೇಶ್ ರೋಹಿತ್, ಶಬರಿ ಮಂಜು, ಮಡೆನೂರ್ ಮನು, ಗೋವಿಂದೇ ಗೌಡ, ವಾಣಿ, ರಂಜಿತ್ ಖನ್ನಾ ಸೇರಿದಂತೆ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಪ್ರಸಿದ್ಧ್ ಸಿನಿಮಾಸ್ ಸಂಸ್ಥೆ (Prasiddh Cinemas) ಹಾಗೂ ರಮೇಶ್ ರೆಡ್ಡಿ (Ramesh Reddy) ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಬಹುಬೇಗನೆ ಚಿತ್ರದ ಚಿತ್ರೀಕರಣ ಮುಗಿಸಿ ಈ ವರ್ಷದಲ್ಲಿ 'ಬಹದ್ದೂರ್ ಗಂಡು' ಬಿಡುಗಡೆ ಆಗೋದಕ್ಕೆ ಸಜ್ಜಾಗಿದೆ.

click me!