
ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿರುವ 'ಹ್ಯಾಪಿ ನ್ಯೂ ಇಯರ್' ನಟಿ ರಾಜಶ್ರೀ ಶೀಘ್ರವೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ರಿಂಗ್ ತೊಡಿಸಿಕೊಂಡು ಎಂಗೇಜ್ ಆಗಿರುವುದರ ಬಗ್ಗೆ ಬರೆದುಕೊಂಡಿದ್ದಾರೆ.
ರಾಜಶ್ರೀ ಪೋಸ್ಟ್:
ಅಪ್ಲೋಡ್ ಮಾಡಿರುವ ಫೋಟೋದಲ್ಲಿ ಇಬ್ಬರು ರೋಮ್ಯಾಂಟಿಕ್ ಆಗಿ ಪೋಸ್ ನೀಡಿದ್ದಾರೆ. 'ಮನೆ ಎಂಬುವುದು ವ್ಯಕ್ತಿ ಇದ್ದಂತೆ. ಆ ವ್ಯಕ್ತಿ ನನ್ನನ್ನು ಕೇಳಿದಾಗ ನಾನು 'Yes' ಎಂದು ಹೇಳಿದೆ. ಪ್ರೀತಿ ಎಂಬ ಪದಕ್ಕಿಂತ ಹೆಚ್ಚಾಗಿ ನಾವಿಬ್ಬರು ಪ್ರೀತಿಸುತ್ತಿದ್ದೀನಿ. ನಾವೀಬ್ಬರೂ ಈಗ ಹೋಮ್' ಎಂದಿದ್ದಾರೆ.
'ನನ್ನ ಬೆರಳಿಗೆ ಉಂಗುರ ತೊಡೆಸಿದರು' ಎಂದು ಬರೆದುಕೊಂಡಿದ್ದಾರೆ. ರಾಜಶ್ರೀ ಮದುವೆಯಾಗುತ್ತಿರುವ ಹುಡುಗನ ಹೆಸರು ಅಧೀರ್ ಭಟ್. ಲಂಡನ್ ಯುನಿವರ್ಸಿಟಿಯಲ್ಲಿ ಅರ್ಥಶಾಸ್ತ್ರ ಪದವೀಧರನಾಗಿರುವ ಅಧೀರ್ ವೃತ್ತಿಯಲ್ಲಿ ಬಾಲಿವುಡ್ ಬರಹಗಾರ. ಎಲ್ಲವೂ ಅಂದುಕೊಂಡತೆ ನಡೆದರೆ, 2021ರ ಜೂನ್‌ನಲ್ಲಿ ಈ ಜೋಡಿ ದಾಂಪತ್ಯಕ್ಕೆ ಕಾಲಿಡಲಿದೆ.
ಶರಣ್ 'ಅವತಾರ ಪುರುಷ';ಭಾಗ 1-ಅಷ್ಟದಿಗ್ಬಂಧನ ಮಂಡಲಕ, ಭಾಗ 2- ತ್ರಿಶಂಕು!
ಎರಡೂ ಕುಟುಂಬಗಳ ಇತ್ತೀಚೆಗೆ ಕಾಶ್ಮೀರದಲ್ಲಿ ಭೇಟಿಯಾಗಿ ಮದುವೆ ಮಾತುಕತೆಯನ್ನು ಮುಗಿಸಿದೆಯಂತೆ. ಎರಡೂ ಕುಟುಂಬಗಳು ಹಾಗೂ ಸ್ನೇಹಿತರ ಪರಸ್ಪರ ಬಲ್ಲವರಾಗಿದ್ದು, ಇದು ಒಂದು ರೀತಿ ಲವ್ ಕಮ್ ಅರೆಂಜ್ಡ್ ಮ್ಯಾರೇಜ್ ಎಂದಿದ್ದಾರೆ ರಾಜಶ್ರೀ. ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡ ರಾಜಶ್ರೀ ಹಾಗೂ ಕಂಟೆಂಟ್ ಕಂಪನಿ ಇರುವ ಅಧೀರ್ ಭಟ್ ಔದ್ಯೋಗಿಕವಾಗಿಯೂ ಒಂದಾಗುತ್ತಾರಂತೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.