Guru Deshpande Apologizes: ನಟನಿಗೆ ಸಾರಿ ಕೇಳಿದ ನಿರ್ಮಾಪಕ, ಫಿಲ್ಮ್ ಮುಗಿದ್ಮೇಲೆ ನಿಮ್ಮನ್ನ ಕರೆಯೋಲ್ಲ!

Suvarna News   | Asianet News
Published : Dec 28, 2021, 01:07 PM ISTUpdated : Dec 28, 2021, 01:40 PM IST
Guru Deshpande Apologizes: ನಟನಿಗೆ ಸಾರಿ ಕೇಳಿದ ನಿರ್ಮಾಪಕ, ಫಿಲ್ಮ್ ಮುಗಿದ್ಮೇಲೆ ನಿಮ್ಮನ್ನ ಕರೆಯೋಲ್ಲ!

ಸಾರಾಂಶ

ಲವ್ ಯು ರಚ್ಚು ತಂಡದಿಂದ ಸುದ್ದಿಗೋಷ್ಠಿ.  ನಟ ಅಜಯ್ ರಾವ್‌ಗೆ ಕ್ಷಮೆ ಕೇಳಿ, ಹೊಸ ನಿರ್ದೇಶಕರನ್ನು ಹೊಗಳಿದ ಗುರು.... 

ನಟ ಅಜಯ್ ರಾವ್ (Ajai Rao) ಮತ್ತು ರಚಿತಾ ರಾಮ್ (Rachita Ram) ಜೋಡಿಯಾಗಿ ಅಭಿನಯಿಸಿರುವ ಸಿನಿಮಾ ಲವ್ ಯು ರಚ್ಚು (Love You Racchu) ಇದೇ ಡಿಸೆಂಬರ್ 31ರಂದು ಬಿಡುಗಡೆಯಾಗುತ್ತಿದೆ. ರಚಿತಾ ರಾಮ್ ಬೋಲ್ಡ್ ಆಗಿ ಕಾಣಿಸಿಕೊಂಡಿರುವ ಕಾರಣ ಸಿನಿಮಾಗೆ ಹೆಚ್ಚಿನ ಪಬ್ಲಿಸಿಟಿ (Publicity) ಸಿಗುತ್ತಿದೆ., ಆದರೆ ಈ ನಡುವೆ ನಿರ್ಮಾಪಕ ಮತ್ತು ನಟನ ನಡುವೆ ಕೋಲ್ಡ್‌ ವಾರ್ ಶುರುವಾಗಿದೆ. ಇಬ್ಬರೂ ಮಾಧ್ಯಮಗಳ (Media) ಜೊತೆ ಸಮಸ್ಯೆ ಹೇಳಿಕೊಳ್ಳುತ್ತಿದ್ದಾರೆಯೇ ಹೊರತು ಒಟ್ಟಿಗೆ ಮಾತನಾಡಿಲ್ಲ. 

ಇತ್ತೀಚಿಗೆ ಲವ್ ಯು ರಚ್ಚು ಸಿನಿಮಾ ತಂಡ ಸುದ್ದಿಗೋಷ್ಠಿ ನಡೆಸಿತ್ತು. ನಿರ್ಮಾಪಕ ಗುರು ದೇಶಪಾಂಡೆ (Guru Deshpande), ನಟಿ ರಚಿತಾ ರಾಮ್ ಮತ್ತು ನಿರ್ದೇಶಕ ಶಂಕರ್ (Shankar) ಮಾತನಾಡಿದ್ದಾರೆ. ಈ ವೇಳೆ ನಟನೊಂದಿಗಿರುವ ಮನಸ್ತಾಪದ ಬಗ್ಗೆ ಗುರು ದೇಶಪಾಂಡೆ ಮಾತನಾಡಿ, ಬಹಿರಂಗವಾಗಿ ಕ್ಷಮೆ (Sorry) ಕೇಳಿದ್ದಾರೆ. ಸಿನಿಮಾಗಾಗಿ ಮಂಗಳೂರಿನಿಂದ (Mangalore) ಬಂದಿರುವ ರಚಿತಾ ರಾಮ್‌ರನ್ನು ಹೊಗಳಿದ್ದಾರೆ. 

ಗುರು ದೇಶಪಾಂಡೆ ಮಾತು:
'ಈ ಮೂಲಕ ನಾನು ನಟ ಅಜಯ್ ಅವರಿಗೆ ಒಂದು ವಿಚಾರ ಕ್ಲಾರಿಫೈ ಮಾಡಲು ಇಷ್ಟ ಪಡ್ತೀನಿ. ನೋಡಿ ಈ ಸಿನಿಮಾ ಮುಗಿಯುವವರೆಗೂ ನೀವು ನನ್ನ ಮೇಲೆ ಏನೋ ಒಂದು ಹೇಳಬಹುದು, ಪ್ರೊಡ್ಯೂಸರ್ (Producer) ಜೊತೆ ಕುಳಿತುಕೊಳ್ಳುವುದಿಲ್ಲ ಅಥವಾ ಮಾತನಾಡುವುದಿಲ್ಲ ಅಂತ ಹೇಳಬಹುದು. ಆದರೆ ಈ ಪಿಚ್ಚರ್ ಮುಗಿದ ಮೇಲೆ ನಾನು ನಿಮ್ಮ ಪಕ್ಕ ಬಂದು ಕುಳಿತುಕೊಳ್ಳಲು ಆಗುವುದಿಲ್ಲ. ನೀವು ಬಂದು ಕೂರುವುದಕ್ಕೂ ಆಗೋಲ್ಲ. ನಾವು ನಿಮ್ಮನ್ನ ಕರೆಯೋಲ್ಲ. ನೀವು ಕೂಡ ನಮ್ಮನ್ನ ಕರೆಯೋಲ್ಲ,' ಎಂದು ಮಾತನಾಡಿದ್ದಾರೆ. 

'ಬಡವ ರಾಸ್ಕಲ್ (Badava Rascal) ಸಿನಿಮಾ ನೋಡಿದ್ರೆ ಎಷ್ಟು ಖುಷಿ ಆಗುತ್ತೆ ಅಂದ್ರೆ ಯಾವುದೋ ಆಟೋದಲ್ಲಿ (Auto) ಹೋಗ್ತಿದ್ದಾರೆ ಅವ್ರು ಇನ್ನೆಲ್ಲೂ ಬಸ್‌ನಲ್ಲಿ (Bus) ಹೋಗುತ್ತಾರೆ. ಪ್ರಚಾರ ಮಾಡಬೇಕು ಅಂದ್ರೆ ಒಂದು ಟೀಂ ಸ್ಪಿರಿಟ್ (team spirit) ಎಷ್ಟು ಇರುತ್ತೆ ನೋಡಿ. ನಮಗೆ ರಚಿತಾ ಮೇಡಂ ಸಪೋರ್ಟ್ ಮಾಡ್ತಿದ್ದಾರೆ ನೋಡಿ, ಅವರು ಮಂಗಳೂರಿನಿಂದ ಬಂದಿದ್ದಾರೆ. ಸಿನಿಮಾ ಮುಗಿಯುವವರೆಗೂ ಅಷ್ಟೇ ನಾವು ಸಪೋರ್ಟ್ ಕೇಳುವುದು. ಅದು ಮಾಡಿದ್ರೆ ಮುಗೀತು. ಅವರಿಗೆ ಸಾರಿ ಹೇಳಬೇಕು ಅಂದ್ರೆ ನಾನು ಸಾರಿ  ಹೇಳ್ತೀನಿ. ಇದರಿಂದ ನನಗೆ ಏನೂ ತೊಂದರೆ ಇಲ್ಲ. ನಮಗೆ ಯಾವುದೇ ರೀತಿ  Egoನೂ ಇಲ್ಲ,' ಎಂದು ಹೇಳಿದ್ದಾರೆ. 

ಫೈಟರ್ ವಿವೇಕ್ ಮನೆಗೆ 'ಲವ್ ಯೂ ರಚ್ಚು' ನಿರ್ಮಾಪಕ ಗುರು ದೇಶಪಾಂಡೆ ಭೇಟಿ!

'ಎಲ್ಲರಿಗೂ ನಾನು ಒಂದೇ ವಿಚಾರ ಕೇಳಿಕೊಳ್ಳುವುದು ಸಿನಿಮಾ ಬಗ್ಗೆ ಇಲ್ಲಿಗೆ ನೆಗೆಟಿವ್ ವಿಚಾರಗಳನ್ನು (Negative comments) ಮಾತನಾಡುವುದು ಬಿಟ್ಟು, ಈಗಿನಿಂದ ಪಾಸಿಟಿವ್ ವಿಚಾರಗಳನ್ನು ಮಾತಾಡೋಣ. ಸಿನಿಮಾ ಗೆಲ್ಲಿಸೋಣ. ಸಿನಿಮಾ ಗೆದ್ದ ಆದ್ಮೇಲೆ ಎಲ್ಲೂ ಒಂದು ಆಗ್ತಾರೆ. ಹಿಸ್ಟರಿಯಲ್ಲಿ (history) ತುಂಬಾ ಜನರು ಕಿತ್ತಾಡಿರುವುದು, ಒಂದಾಗಿರುವುದು ಇದೆ. ಸಿನಿಮಾ ಗೆದ್ದ ಮೇಲೆ ಎಲ್ಲರೂ....ಅದಕ್ಕೆ ಸಿನಿಮಾ ಹಿಟ್ ಆಗಲಿ ಅಷ್ಟೇ,' ಎಂದಿದ್ದಾರೆ.

'ನಿಮ್ಮ ಮೂಲಕ ನಾನು ಅವರಿಗೆ ಕೇಳ್ತಾ ಇದ್ದೀನಿ ಬನ್ನಿ ಸಿನಿಮಾ 31ಕ್ಕೆ ರಿಲೀಸ್ ಆಗ್ತಿದೆ. ಒಟ್ಟಿಗೆ ಸಿನಿಮಾ ನೋಡೋಣ, ಪ್ರಚಾರ ಮಾಡೋಣವೆಂದ್ರು ಆಗ್ರಹಿಸುತ್ತೇನೆ. ಏನಾದರೂ ಹೇಳಿದ್ರೆ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಡಿ. ಬನ್ನಿ ಅಜಯ್,' ಎಂದು ನಿರ್ಮಾಪಕರು ಮಾತು ಮುಗಿಸಿದ್ದಾರೆ. 

ಚಿತ್ರೀಕರಣದ ವೇಳೆ ಸೆಟ್‌ನಲ್ಲಿ ಸ್ಟಂಟ್ ಬಾಯ್‌ ವಿದ್ಯುತ್ ತಗುಲಿ ಸಾವಿಗೀಡಾದ ಸಮಯದಿಂದಲೂ ಸಿನಿಮಾ ತಂಡದಲ್ಲಿ ಏನೋ ಒಂದು ರೀತಿ ಮನಸ್ತಾಪವಿದೆ. ಈ ನಡುವೆಯೂ ಹಾಡುಗಳನ್ನು ಬಿಡುಗಡೆ ಮಾಡುತ್ತಾ ಪ್ರಚಾರ ಮಾಡುತ್ತಾ ಸಿನಿಮಾ ಗೆಲ್ಲಿಸಬೇಕು ಎನ್ನುವ ಉದ್ದೇಶವಿದೆ, ಎಂದು ತಂಡ ಹೇಳಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಟಾಕ್ಸಿಕ್ ಸಿನಿಮಾ ರಿಲೀಸ್ ಸಮೀಪಿಸುತ್ತಿದ್ದಂತೆ ಐಟಿ ಪ್ರಕರಣದಲ್ಲಿ ನಟ ಯಶ್‌ಗೆ ಹೈಕೋರ್ಟ್ ರಿಲೀಫ್
ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!