Arjun Gowda: ಜಯಣ್ಣ ಕೇಳು ಭೋಗಣ್ಣ ಹಾಡನ್ನು ರಿಲೀಸ್ ಮಾಡಿ ಚಿತ್ರಕ್ಕೆ ಶುಭ ಹಾರೈಸಿದ ಕಿಚ್ಚ ಸುದೀಪ್

By Suvarna NewsFirst Published Dec 28, 2021, 12:18 PM IST
Highlights

ಕನ್ನಡ ಚಿತ್ರರಂಗದ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹಾಗೂ ಪ್ರಿಯಾಂಕಾ ತಿಮ್ಮೇಶ್ ಜೊತೆಯಾಗಿ ನಟಿಸಿರುವ 'ಅರ್ಜುನ್ ಗೌಡ' ಚಿತ್ರ ಇದೇ ತಿಂಗಳ ವರ್ಷಾಂತ್ಯದಲ್ಲಿ ತೆರೆಗೆ ಬರಲು ಸಜ್ಜಾಗಿದ್ದು, ಚಿತ್ರತಂಡ ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ನಡುವೆ ಚಿತ್ರತಂಡ ಚಿತ್ರದ ಮತ್ತೊಂದು ಹಾಡನ್ನು ಬಿಡುಗಡೆ ಮಾಡಿದೆ.

ಕನ್ನಡ ಚಿತ್ರರಂಗದ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ (Prajwal Devaraj) ಹಾಗೂ ಪ್ರಿಯಾಂಕಾ ತಿಮ್ಮೇಶ್ (Priyanka Thimmesh) ಜೊತೆಯಾಗಿ ನಟಿಸಿರುವ 'ಅರ್ಜುನ್ ಗೌಡ' ಚಿತ್ರ ಇದೇ ತಿಂಗಳ ವರ್ಷಾಂತ್ಯದಲ್ಲಿ ತೆರೆಗೆ ಬರಲು ಸಜ್ಜಾಗಿದ್ದು, ಚಿತ್ರತಂಡ ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ನಡುವೆ ಚಿತ್ರತಂಡ ಚಿತ್ರದ ಮತ್ತೊಂದು ಹಾಡನ್ನು ಬಿಡುಗಡೆ ಮಾಡಿದೆ. ಹೌದು! 'ಅರ್ಜುನ್ ಗೌಡ' ಚಿತ್ರದ 'ಜಯಣ್ಣ ಕೇಳು ಭೋಗಣ್ಣ' (Jayanna Kelu Bhoganna) ಎಂಬ ಸಾಂಗ್ ರಿಲೀಸ್ ಆಗಿದ್ದು, ವಿಶೇಷವಾಗಿ ಈ ಹಾಡನ್ನು ಸ್ಯಾಂಡಲ್‌ವುಡ್‌ನ ಬಾದ್‌ಷಾ ಕಿಚ್ಚ ಸುದೀಪ್ (Kichcha Sudeep) ಬಿಡುಗಡೆ ಮಾಡಿದ್ದಾರೆ.

ಈ ಹಾಡಿನ ಬಗ್ಗೆ ಮಾಲಾಶ್ರೀ ರಾಮು (Malashree Ramu) ಅವರು ತಮ್ಮ ಇನ್‌ಸ್ಟಾಗ್ರಾಮ್ (Instagram) ಖಾತೆಯಲ್ಲಿ, ಕಿಚ್ಚ ಸುದೀಪ್ ಅವರಿಂದ 'ಜಯಣ್ಣ ಕೇಳು ಭೋಗಣ್ಣ' ವಿಡಿಯೋ ಸಾಂಗ್ ಬಿಡುಗಡೆಯಾಗಲಿದೆ ಎಂದು ಪೋಸ್ಟ್‌ ಮಾಡಿದ್ದು, ಜೊತೆಗೆ ತಮ್ಮ ಸ್ಟೋರಿಯಲ್ಲಿ ಸುದೀಪ್ ಅವರು ಚಿತ್ರದ ಬಗ್ಗೆ ಹೇಳಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಸುದೀಪ್ ಅವರು, ತುಂಬಾ ವರ್ಷಗಳ  ನಂತರ ರಾಮು ಸರ್ ಬ್ಯಾನರ್‌ನಲ್ಲಿ 'ಅರ್ಜುನ್ ಗೌಡ' ಚಿತ್ರವು ತೆರೆಗೆ ಬರುತ್ತಿದ್ದು ನನಗೆ ಖುಷಿಯಾಗುತ್ತಿದೆ. ಶಂಕರ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದ 'ಜಯಣ್ಣ ಕೇಳು ಭೋಗಣ್ಣ' ಹಾಡನ್ನು ನನಗೆ ತೋರಿಸಿದರು. 

Arjun Gowda: ಬೆಳ್ಳಿಪರದೆ ಮೇಲೆ ಎಂಟ್ರಿ ಕೊಡಲು ಸಜ್ಜಾದ ಪ್ರಜ್ವಲ್ ದೇವರಾಜ್

ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದ್ದು, ಪ್ರಜ್ವಲ್  ದೇವರಾಜ್ ಕೂಡಾ ಹಾಡಿನಲ್ಲಿ ಚೆನ್ನಾಗಿ ಕಾಣಿಕೊಂಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಕನ್ನಡ ಚಿತ್ರರಂಗಕ್ಕೆ ದೊಡ್ಡ ದೊಡ್ಡ ಚಿತ್ರಗಳನ್ನು ಕೊಟ್ಟಂತಹ ರಾಮು ಸಂಸ್ಥೆಯ ಎರಡು ಚಿತ್ರದಲ್ಲಿ ನಾನು ನಟಿಸಿದ್ದೇನೆ. ಹೀಗಾಗಿ ರಾಮು ಅವರಿಗೆ ಹಾಗೂ ಮಾಲಾಶ್ರೀ ರಾಮು ಅವರಿಗೂ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸುತ್ತೇನೆ. ಹಾಗೇ 'ಅರ್ಜುನ್ ಗೌಡ' ಚಿತ್ರಕ್ಕೆ ಮತ್ತು ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಕಿಚ್ಚ ಸುದೀಪ್ ಶುಭ ಹಾರೈಸಿದ್ದು, ಈ ಚಿತ್ರವನ್ನು ಮೊದಲಿಗೆ ನಾನು ರಿಮೇಕ್ ಅಂತ ಅಂದುಕೊಂಡಿದ್ದೆ. ಆದರೆ ಇದು ರಿಮೇಕ್ ಸಿನಿಮಾ ಅಲ್ಲ ಎಂದು ತಿಳಿಸಿದ್ದಾರೆ.
 


'ಅರ್ಜುನ್ ಗೌಡ' ಚಿತ್ರದ 'ಜಯಣ್ಣ ಕೇಳು ಭೋಗಣ್ಣ' ಹಾಡಿಗೆ ಧರ್ಮ ವಿಶ್ (Dharma Vish) ಸಂಗೀತ ಸಂಯೋಜಿಸಿದ್ದು, ಲಕ್ಕಿ ಶಂಕರ್ ಸಾಹಿತ್ಯ ರಚಿಸಿದ್ದಾರೆ. ರಾಜಗುರು ಹೊಸಕೋಟೆ, ಚೇತನ್ ನಾಯಕ್ ಹಾಗೂ ಮುನಿರಾಜ್ ದನಿಯಲ್ಲಿ ಈ  ಸಾಂಗ್ ಮೂಡಿಬಂದಿದ್ದು, ಸಿನಿರಸಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಈ ಹಾಡಿನಲ್ಲಿ ಹಾಸ್ಯನಟ ಸಾಧುಕೋಕಿಲ (Sadhu Kokila) ಅವರು ಪ್ರಜ್ವಲ್ ಜೊತೆ ಟಪ್ಪಾಂಗುಚ್ಚಿ ಸ್ಟೆಪ್ಸ್ ಹಾಕಿದ್ದಾರೆ. ಈ ಹಿಂದೆ ಚಿತ್ರದ 'ಮಾರ್ ಮಾರ್ ಮಾರ್' ಹಾಡನ್ನು ದುನಿಯಾ ವಿಜಯ್ (Duniya Vijay) ಬಿಡುಗಡೆ ಮಾಡಿದ್ದರು. ಹಾಗೂ ಸಾಂಗ್ ಕೇಳುತ್ತಿದ್ದರೆ ತುಂಬಾ ಜೋಶ್ ಬರುತ್ತೆ. ಯಂಗ್ ಬಾಯ್ಸ್ ಈ ಸಾಂಗನ್ನು ಎಂಜಾಯ್ ಮಾಡಬಹುದು ಎಂದು ಹೇಳಿದ್ದರು.

Arjun Gowda: ಡೈನಾಮಿಕ್ ಪ್ರಿನ್ಸ್ ಚಿತ್ರದ ಮಾಸ್ ಹಾಡನ್ನು ರಿಲೀಸ್ ಮಾಡಿದ ದುನಿಯಾ ವಿಜಯ್

ಇನ್ನು ಆ್ಯಕ್ಷನ್ ಕಥಾಹಂದರವನ್ನು ಹೊಂದಿರುವ ಈ ಚಿತ್ರಕ್ಕೆ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಅದ್ಧೂರಿ ಚಿತ್ರಗಳನ್ನು ನಿರ್ಮಿಸಿ ಹೆಸರಾದ ರಾಮು ಫಿಲಂಸ್ ಸಂಸ್ಥೆಯ ಕೋಟಿ ನಿರ್ಮಾಪಕ ಎಂದೇ ಹೆಸರು ವಾಸಿಯಾದ ರಾಮು (Ramu) ಅವರು ಬಂಡವಾಳ ಹೂಡಿದ್ದಾರೆ. ನಿರ್ದೇಶಕ ಶಂಕರ್ (Shankar) ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಬಾಲಿವುಡ್​​ನ ರಾಹುಲ್ ದೇವ್, ಸ್ಪರ್ಶ ರೇಖಾ, ಸಾಧುಕೋಕಿಲ, ಕಡ್ಡಿಪುಡಿ ಚಂದ್ರು, ದೀಪಕ್ ಶೆಟ್ಟಿ, ದಿನೇಶ್ ಮಂಗಳೂರು, ಶೋಭಿತ್, ಜೀವನ್, ಹನುಮಂತೇ ಗೌಡ, ಮೋಹನ್ ಜುನೇಜ ಸೇರಿದಂತೆ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
 

click me!