Ba Ma Harish Son Ullas Gowda Death: ವಿಜಯನಗರ ನಿವಾಸದಲ್ಲಿ ಅಂತಿಮ ದರ್ಶನ; ಮಧ್ಯಾಹ್ನ 3 ಗಂಟೆಗೆ ಸುಮನಹಳ್ಳಿ ಚಿತಾಗಾರದಲ್ಲಿ ಅಂತ್ಯಕ್ರಿಯೆ

Published : Jun 28, 2026, 02:02 PM IST
producer ba ma harish son ullas gowda

ಸಾರಾಂಶ

'ಈ ನೋವು ಕಳೆದುಕೊಂಡವ್ರಿಗೆ ಗೊತ್ತು. ಉಲ್ಲಾಸ್ ಒಬ್ಬ ಕನ್ನಡ ಚಿತ್ರರಂಗಕ್ಕೆ ಬೆಳಕು ಕೊಡುವ ನಿರ್ದೇಶಕನಾಗಿ ಬರಬೇಕಿತ್ತು. ಗೋವಾಗೆ ಫಿಲ್ಮ್ ಫೆಸ್ಟ್‌ಗೆ ಹೋದಾಗ ಬಾಡಿಗೆಗೆ ಬೈಕ್ ತೊಗೊಂಡು ಓಡಾಡಿಸಿದ್ದ. ಆ ನೆನಪುಗಳು ಹಚ್ಚ ಹಸಿರಾಗಿವೆ. ಉಲ್ಲಾಸ್ ನಿಂದ ಸ್ನೇಹಜೀವಿ, ಸಮಯ ಪ್ರಜ್ಞೆ, ದೊಡ್ಡವ್ರಿಗೆ ಕೊಡಬೇಕಾದ ಗೌರವ ಎಲ್ಲವೂ ಇತ್ತು.

ಬಾಮಾ ಹರೀಶ್ ಪುತ್ರ ಉಲ್ಲಾಸ್ ಗೌಡ ಅಂತಿಮ ದರ್ಶನ, ಅಂತ್ಯಕ್ರಿಯೆ

ನಿನ್ನೆ ಹೃದಯಾಘಾತದಿಂದ ನಿಧನರಾಗಿರುವ ಸ್ಯಾಂಡಲ್‌ವುಡ್ ನಿರ್ಮಾಪಕ ಬಾಮಾ ಹರೀಶ್ ಪುತ್ರ ಉಲ್ಲಾಸ್ ಗೌಡ (Ullas Gowda) ಅವರ ಮೃತದೇಹ ವಿಜಯನಗರ ನಿವಾಸಕ್ಕೆ ಬಂದಿದ್ದು, ಅವರ ನಿವಾಸದಲ್ಲೇ (ವಿಜಯನಗರ ನಿವಾಸ) ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ವಿಜಯನಗರದಲ್ಲಿರುಬ ಭಾಮಾ ಹರೀಶ್ ನಿವಾಸದಲ್ಲಿ ಈಗ ನೀರವ ಮೌನ ಆವರಿಸಿದೆ. ಮಧ್ಯಾಹ್ನ 3 ಗಂಟೆ ವೇಳೆಗೆ ಸುಮನಹಳ್ಳಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಉಲ್ಲಾಸ್ ಮೃತದೇಹ ಕಂಡು ಅವರ ತಾಯಿ ಆಕ್ರಂದನ ಮುಗಿಲುಮುಟ್ಟಿದೆ. ಆಂಬ್ಯುಲೆನ್ಸ್‌ನಲ್ಲಿ ಉಲ್ಲಾಸ್ ಮೃತದೇಹ ಕಂಡು ಅವರ ತಾಯಿ ಸೇರಿದಂತೆ ಮನೆಯವರೆಲ್ಲರೂ ಕಣ್ಣೀರು ಸುರಿಸುತ್ತಿದ್ದಾರೆ. ಉಲ್ಲಾಸ್ ಅವರನ್ನು ನೆನೆದು ಅವರ ತಾತ ವಿಜಯ್ ಭಾವುಕರಾಗಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ವಿಜಯ್ 'ಉಲ್ಲಾಸ್ ತುಂಬಾ ಆ್ಯಕ್ಟಿವ್ ಆಗಿದ್ದ. ಒಂದು ಅಸೋಸಿಯೇಷನ್ ಮಾಡಿಕೊಂಡಿದ್ರು. ಈ ಮೂಲಕ ಟ್ರೆಕ್ಕಿಂಗ್ ಗೆ ಹೋಗಿದ್ರು. ಹೀಗೆ ಹೋಗಿದ್ದ ವೇಳೆ ಈ ತರ ದುರ್ಘಟನೆಯಾಗಿದೆ. ಮದ್ವೆಯ ಮಾತುಕತೆಯಾಗಿತ್ತು. ಇನ್ನೂ ನಿಶ್ಚಿತಾರ್ಥ ಆಗಿರಲಿಲ್ಲ. ಅದಕ್ಕಿಂತ ಮುಂಚೆ ಶಾಸ್ತ್ರೋಕ್ತವಾಗಿ ಕೆಲ ಕಾರ್ಯಗಳನ್ನು ಮಾಡಿದ್ರು. ಆದರೆ,

ವಿಧಿಯ ಆಟವೇ ಬೇರೆಯಾಗಿತ್ತು' ಎಂದಿದ್ದಾರೆ.

ಇಂದು ಮಧ್ಯಾಹ್ನ 3 ಘಂಟಗೆ ಸುಮ್ಮನಹಳ್ಳಿ ಚಿತಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎನ್ನಲಾಗಿದ್ದು, ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ.

ಉಲ್ಲಾಸ್ ಗೌಡ ನಿಧನಕ್ಕೆ ಸುಂದರ್ ರಾಜ್- ಪ್ರವೀಳಾ ಜೋಷಾಯ್ ಕಂಬನಿ

ಉಲ್ಲಾಸ್ ಗೌಡ ನಿಧನಕ್ಕೆ ಹಿರಿಯ ನಿರ್ಮಾಪಕ ಸುಂದರ್ ರಾಜ್ ಪತ್ನಿ ಪ್ರವೀಳಾ ಜೋಷಾಯ್ ಸೇರಿದಂತೆ ಹಲವರು ಸ್ಥಳಕ್ಕೆ ಬಂದು ಸಂತಾಪ ಸೂಚಿಸುತ್ತಿದ್ದಾರೆ. ಪ್ರಮೀಳಾ ಜೋಷಾಯ್ 'ಸಣ್ಣ ವಯಸ್ಸಿನಿಂದ ನೋಡ್ತಾ ಬಂದಿದ್ದೇನೆ. ದೊಡ್ಡವ್ರು, ಚಿಕ್ಕವ್ರಿಗೆ ಪ್ರೀತಿಯಿಂದ ಗೌರವ ಕೊಟ್ಟು ಮಾತಾಡ್ತಿದ್ದ. ಸಣ್ಣ ವಯಸ್ಸಿಗೆ ಹೀಗೆ ಆಗೋದು ಅಂದ್ರೆ... ದೇವ್ರು ಇತರ ಮಾಡಬಾರದು.. ಸಣ್ಣ ವಯಸ್ಸು, ಒಬ್ಬನೇ ಮಗ.. ನಟನೆ ಕಲಿತಾ ಇದ್ದ, ಕಾರ್ಯಕ್ರಮಗಳಿಗೆ ಆಹ್ವಾನ ಮಾಡ್ತಿದ್ದ. ಜೊತೆಗೆ ಮುಂದೆ ದೊಡ್ಡ ನಿರ್ಮಾಪಕ ಆಗುವ ಸಾಧ್ಯತೆಗಳಿದ್ದವು. ಈ ಸಂಕಟ ಯಾರಿಗೂ ಬರಬಾರದು' ಎಂದಿದ್ದಾರೆ.

ಈ ನೋವು ಕಳೆದುಕೊಂಡವ್ರಿಗೆ ಮಾತ್ರ ಗೊತ್ತು

ಹಾಗೇ, ಹಿರಿಯ ನಿರ್ಮಾಪಕ ಸುಂದರ್ ರಾಜ್ ಹೇಳಿಕೆ : 'ಈ ನೋವು ಕಳೆದುಕೊಂಡವ್ರಿಗೆ ಮಾತ್ರ ಗೊತ್ತು. ಉಲ್ಲಾಸ್ ಒಬ್ಬ ಕನ್ನಡ ಚಿತ್ರರಂಗಕ್ಕೆ ಬೆಳಕು ಕೊಡುವ ನಿರ್ದೇಶಕನಾಗಿ ಬರಬೇಕಿತ್ತು. ಗೋವಾಗೆ ಫಿಲ್ಮ್ ಫೆಸ್ಟ್‌ಗೆ ಹೋದಾಗ ಬಾಡಿಗೆಗೆ ಬೈಕ್ ತೊಗೊಂಡು ಓಡಾಡಿಸಿದ್ದ. ಆ ನೆನಪುಗಳು ಹಚ್ಚ ಹಸಿರಾಗಿವೆ. ಉಲ್ಲಾಸ್ ನಿಂದ ಸ್ನೇಹಜೀವಿ, ಸಮಯ ಪ್ರಜ್ಞೆ, ದೊಡ್ಡವ್ರಿಗೆ ಕೊಡಬೇಕಾದ ಗೌರವ ಎಲ್ಲವೂ ಇತ್ತು.

ಇವತ್ತು ಮನೆಯಲ್ಲಿ ಕತ್ತಲು ಆವರಿಸಿದೆ. ಯಾರಿಗೂ ನೋವು ಕೊಡದೇ ಉಲ್ಲಾಸ್ ಜೀವ ಕಳೆದುಕೊಂಡ. ಕುಟುಂಬದ ಆಕ್ರಂದನದ ನೋವು ತಡೆಯಲು ಆಗೋದಿಲ್ಲ. ನೋವು ಆರದ ಗಾಯ.. ಮಾಸದ ಗಾಯ' ಎಂದಿದ್ದಾರೆ ಸುಂದರ್‌ ರಾಜ್.

ಕನ್ನಡದ ನಿರ್ದೇಶಕ ಜೋಗಿ ಪ್ರೇಮ್-ರಕ್ಷಿತಾ ಪ್ರೇಮ್, ಜಯಮಾಲಾ, ಸಾರಾ ಗೋವಿಂದು ಸೇರಿದಂತೆ ಸಿನಿಮಾ ರಂಗದ ಹಲವು ಗಣ್ಯರು ಉಲ್ಲಾಸ್ ಗೌಡ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

SN Shankar Death: ನಿನ್ನೆ ಸಿನಿಮಾ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದ 'ಉಲ್ಟಾ ಪಲ್ಟಾ' ಸಿನಿಮಾದ ನಿರ್ದೇಶಕ ಇನ್ನಿಲ್ಲ
ಶಿವರಾಜ್​ ಕುಮಾರ್​ ಜೊತೆ ಮದುವೆ ಆಸೆ: ಫೇಕ್​ ನ್ಯೂಸ್​ ಹಾಕಿದವನ ಚಳಿ ಬಿಡಿಸಿದ ನಟಿ ಸುಧಾರಾಣಿ