ಸೀಮಂತದಲ್ಲಿ ನಾನು ಹೆಚ್ಚಿಗೆ ಚಾಕೊಲೇಟ್ ತಿಂದಿರುವೆ: ತಾಯಿತನದ ಬಗ್ಗೆ ಪ್ರಣೀತಾ ಮಾತು

Published : May 20, 2022, 04:21 PM IST
ಸೀಮಂತದಲ್ಲಿ ನಾನು ಹೆಚ್ಚಿಗೆ ಚಾಕೊಲೇಟ್ ತಿಂದಿರುವೆ: ತಾಯಿತನದ ಬಗ್ಗೆ ಪ್ರಣೀತಾ ಮಾತು

ಸಾರಾಂಶ

Mom to be ಪ್ರಣೀತಾ ಸುಭಾಷ್‌ ಸೋಷಿಯಲ್ ಮೀಡಿಯಾದಲ್ಲಿ ಸೀಮಂತ ಕಾರ್ಯಕ್ರಮದ ಫೋಟೋ ಹಂಚಿಕೊಂಡಿದ್ದಾರೆ.

ಕನ್ನಡ ಚಿತ್ರರಂಗದ ಸುಂದರಿ, ಸಮಾಜ ಸೇವಕಿ ಪ್ರಣೀತಾ ಸುಭಾಷ್ (Pranitha Subhash) ತಾಯಿಯಾಗುತ್ತಿರುವ ವಿಚಾರವನ್ನು ಸೋಷಿಯಲ್ ಮೀಡಿಯಾದ ಮೂಲಕ ಅಭಿಮಾನಿಗಳ ಜೊತೆ ಹಂಚಿಕೊಂಡರು. ಕೆಲವು ದಿನಗಳ ಹಿಂದೆ ತಮ್ಮ ನಿವಾಸದಲ್ಲಿ ಆಪ್ತರ ಸಮ್ಮುಖದಲ್ಲಿ ಸೀಮಂತ ಕಾರ್ಯಕ್ರಮ ಮಾಡಿಕೊಂಡರು. ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿರುವ ಪ್ರಣೀತಾ ಮೊದಲು ಬಾರಿ ಪ್ರೆಗ್ನೆನ್ಸಿ ದಿನಗಳ ಬಗ್ಗೆ ಮಾತನಾಡಿದ್ದಾರೆ.

ಪ್ರಣೀತಾ ಮಾತು:

'ನನ್ನ ಮನೆಯಲ್ಲಿ ಸೀಮಂತ ಮಾಡಲಾಗಿತ್ತು. ಪ್ರೈವೇಟ್ ಕಾರ್ಯಕ್ರಮದಲ್ಲಿ ನಮ್ಮ ಆಪ್ತರು, ಪ್ರೀತಿಪಾತ್ರರು ಮಾತ್ರ ಭಾಗಿಯಾಗಿದ್ದರು. ಕಾರ್ಯಕ್ರಮದ ಹೈಲೈಟ್ ಏನೆಂದರೆ ನಾನು ಎಷ್ಟು ಬೇಕಿದ್ದರೂ ಚಾಕೊಲೇಟ್ ತಿನ್ನಬಹುದಿತ್ತು. ಈ ಸಮಾರಂಭದಲ್ಲಿ ನನ್ನ ಕುಟುಂಬದಸ್ಥರು ಒಂದು ಪ್ಲ್ಯಾಟರ್ ಮಾಡಿದ್ದರು, ಅದರಲ್ಲಿ ಗರ್ಭಿಣಿಯರು ಏನೆಲ್ಲಾ ತಿನ್ನಬೇಕು ಅದನ್ನು ಇಡಲಾಗಿತ್ತು. ಎಲ್ಲರೂ ತಿನಿಸುಗಳನ್ನು ತಂದು ಗರ್ಭಿಣಿಗೆ ತಿನ್ನಿಸುತ್ತಿದ್ದರು. ನಾನು ಮೊದಲೇ ಎಲ್ಲರಿಗೂ ಚಾಕೊಲೇಟ್ ಬೇಕು ಎಂದು ಹೇಳಿದ್ದೆ' ಎಂದು ಪ್ರಣೀತಾ ಟೈಮ್ಸ್ ಆಫ್‌ ಇಂಡಿಯಾ ಸಂದರ್ಶನದಲ್ಲಿ ಮಾತಮಾಡದ್ದಾರೆ. 

'ನನ್ನ ಪ್ರೆಗ್ನಿನ್ಸಿ ಜರ್ನಿಯನ್ನು ನಿಮ್ಮ ಜೊತೆ ಹಂಚಿಕೊಳ್ಳಲು ಕಾಯುತ್ತಿರುವೆ ಆದರೆ ನಾನು ಮಗುವಿಗೆ ಜನ್ಮ ಕೊಟ್ಟ ನಂತರ ಹಂಚಿಕೊಳ್ಳುವೆ. ನನ್ನ ಜರ್ನಿ ತುಂಬಾನೇ ಡಿಫರೆಂಟ್ ಆಗಿದೆ ಹಾಗೇ ಕೆಲವೊಂದು ವಿಚಾರಗಳಲ್ಲಿ enlightening  ಆಗಿದೆ ಹೀಗಾಗಿ ಹಂಚಿಕೊಳ್ಳಬೇಕು ಅನಿಸುತ್ತಿದೆ' ಎಂದಿದ್ದಾರೆ ಪ್ರಣೀತಾ.

ಪತಿಯ 34ನೇ ಹುಟ್ಟುಹಬ್ಬಕ್ಕೆ ನಾವು ಮೂವರಾಗುತ್ತಿದ್ದೇವೆ ಎಂದ ಪ್ರಣೀತಾ!

'ನಿಷ್ಪಕ್ಷಪಾತವಾಗಿ ನಾನು ಹೇಳುವೆ ನಾನು ದಪ್ಪ ಆಗುತ್ತಿರುವೆ ಹಾಗೂ ಜೀವನದ ಈ ಹಂತವನ್ನು ಎಂಜಾಯ್ ಮಾಡುತ್ತಿರುವೆ. ಅನೇಕರು ಮಾರ್ನಿಂಗ್ ಸಿಕ್‌ನೆಸ್‌ ಮತ್ತು ಬೇರೆ  ಬೇರೆ ಸಮಸ್ಯೆಗಳ ಬಗ್ಗೆ ಹೇಳಿದ್ದಾರೆ ಆದರೆ ಈ ವಿಚಾರದಲ್ಲಿ ನಾನು ತುಂಬಾನೇ ಲಕ್ಕಿ ಈ ರೀತಿ ಅನುಭವ ನನಗೆ ಆಗಿಲ್ಲ. ಈ ಸಮಯದಲ್ಲಿ ನಾನು ಡ್ಯಾನ್ಸ್, ಚಿತ್ರೀಕರಣ ಮಾಡಿಕೊಂಡು  adventurous holidays ಮಾಡುತ್ತಿರುವೆ' ಎಂದು ಪ್ರಣೀತಾ ಹೇಳಿದ್ದಾರೆ.

'ಈ ಹಂತದಲ್ಲಿ ನನ್ನನ್ನು ನಾನು ತುಂಬಾನೇ ಆಕ್ಟೀವ್ ಆಗಿ ಇಟ್ಟುಕೊಂಡಿರುವೆ. ಹಿಂದಿನ ಕಾಲದಲ್ಲೂ ಹೆಣ್ಣು ಮಕ್ಕಳು ಗರ್ಭಿಣಿ ಆದಾಗ ಆಕ್ಟೀವ್ ಆಗಿರುತ್ತಿದ್ದರು. ನನಗೆ ಒಂದು ಲಾಭ ಏನೆಂದರೆ ನನ್ನ ತಾಯಿ ಸ್ತ್ರೀರೋಗತಜ್ಞ ಹೀಗಾಗಿ ಅವರೇ ನನಗೆ ಮಾರ್ಗದರ್ಶನಕ್ಕಾಗಿ ಸದಾ ಇರುತ್ತಾರೆ. ದಿನ ಸ್ವಲ್ಪ ವರ್ಕೌಟ್, ವಾಕಿಂಗ್ ಮತ್ತು ವ್ಯಾಯಾಮ ನಾರ್ಮಲ್ ಡೆಲಿವರು ಆಗುವುದಕ್ಕೆ ಸಹಾಯ ಮಾಡುತ್ತದೆ. ಪ್ರೆಗ್ನೆನ್ಸಿ ಆರಂಭದಿಂದಲ್ಲೂ ನಾನು A-line ಉಡುಪುಗಳನ್ನು ಧರಿಸುತ್ತಿರುವೆ, ಇದರಿಂದ ನನ್ನ ಬೇಬಿ ಬಂಪ್ ಹೆಚ್ಚಿಗೆ ಕಾಣಿಸಿಕೊಳ್ಳುವುದಿಲ್ಲ. ಆದಷ್ಟು ಲೂಸ್ ಆಗಿರುವ ಉಡುಪುಗಳನ್ನು ಧರಿಸಬೇಕು ಅಂದುಕೊಂಡಿರುವೆ. ಅದಿಕ್ಕೆ ಎಲ್ಲರ ಟೀ-ಶರ್ಟ್‌ಗಳನ್ನು ಕದಿಯುತ್ತಿರುವೆ. ನನ್ನ ಬೇಬಿ ಬಂಪ್ ಎದ್ದು ಕಾಣುವ ಮೊದಲೇ ನಾನು ಸಿನಿಮಾ ಕೆಲಸಗಳನ್ನು ಮುಗಿಸಿರುವೆ' ಎಂದು ಪ್ರಣೀತಾ ಮಾತನಾಡಿದ್ದಾರೆ. 

ಹಳದಿ ಸೀರೆಯಲ್ಲಿ ಮಿಂಚಿದ ನಟಿ ಪ್ರಣೀತಾ ಸುಭಾಷ್‌; ಸೀಮಂತ ಫೋಟೋ ವೈರಲ್!

ಬೆಂಗಳೂರು ಮೂಲದ ಉದ್ಯಮಿ ನಿತಿನ್ ರಾಜು ಜೊತೆ ಕಳೆದ ವರ್ಷ ಪ್ರಣೀತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.  ಸೋಷಿಯಲ್ ಮೀಡಿಯಾದಲ್ಲಿ ಮದುವೆ ಫೋಟೋಗಳು ವೈರಲ್ ಆಗುತ್ತಿದ್ದಂತೆ ಮದುವೆ ವಿಚಾರ ರಿವೀಲ್ ಮಾಡಿದ್ದರು.ಪ್ರಣೀತಾ ಅವರ ಪತಿ ನಿತಿನ್ ಅವರು 34ರ ವಸಂತಕ್ಕೆ ಕಾಲಿಡುತ್ತಿರುವ ಪ್ರಯುಕ್ತ ಸ್ಪೆಷಲ್ ಫೋಟೋ ಹಂಚಿಕೊಂಡು ನಾವು ಮೂವರಾಗುತ್ತಿದ್ದೇವೆ ಎಂದು ರಿವೀಲ್ ಮಾಡಿದ್ದಾರೆ.'ನನ್ನ ಪತಿಗೆ ಇಂದು 34ನೇ ವರ್ಷದ ಹುಟ್ಟುಹಬ್ಬ. ಮೇಲಿರುವ ದೇವತೆಗಳು ನಮಗೆಂದು ವಿಶೇಷವಾದ ಉಡುಗೊರೆ ಕೊಟ್ಟಿದ್ದಾರೆ' ಎಂದು ಪ್ರಣೀತಾ ಬರೆದುಕೊಂಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಿಗ್ ಬಜೆಟ್ '45' ಅದ್ದೂರಿ ಇವೆಂಟ್, ಕರ್ನಾಟಕದ ಏಳು ಜಿಲ್ಲೆಗಳ ಚಿತ್ರಮಂದಿರದಲ್ಲಿ ಇವೆಂಟ್ ನೇರ ಪ್ರಸಾರ!
ಸೂರ್ಯನಿಗೆ ಬಹಳ ಹೊತ್ತು ಗ್ರಹಣ ಹಿಡಿಯಲ್ಲ.. ನಾನ್ ಬರ್ತಿದ್ದೀನಿ ಚಿನ್ನ: ದರ್ಶನ್‌ ಟ್ರೈಲರ್ ಡೈಲಾಗ್‌ಗೆ ಅಪಾರ್ಥ?