
ಪವನ್ ಭಟ್ ನಿರ್ದೇಶನ ‘ಕಟ್ಟಿಂಗ್ ಶಾಪ್’ ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ಕೆ ಬಿ ಪ್ರವೀಣ್ ಹಾಗೂ ಅರ್ಚನಾ ಕೊಟ್ಟಿಗೆ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಚಿತ್ರದ ಕೆಲವು ಫನ್ನಿ ಟೀಸರ್‌ಗಳು ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಸಿನಿಮಾ ಬಗ್ಗೆ ವಿವರ ನೀಡುವ ನಿರ್ದೇಶಕ ಪವನ್ ಭಟ್, ‘ಕಟ್ಟಿಂಗ್ ಶಾಪ್ ಅಂದಾಕ್ಷಣ ಇದು ಹೇರ್ ಕಟ್ಟಿಂಗ್ ಶಾಪ್ ಬಗ್ಗೆ ಇರೋ ಸಿನಿಮಾ ಅಲ್ಲ. ಒಬ್ಬ ವೀಡಿಯೋ ಎಡಿಟರ್‌ನ ಲೈಫ್ ಜರ್ನಿ ಇದರಲ್ಲಿದೆ. ಎಲ್ಲೂ ಅಳಿಸದೇ ನಗೆ ಉಕ್ಕಿಸುತ್ತಲೇ ಕತೆ ಹೇಳಿದ್ದೇವೆ. ಕೊನೆಯಲ್ಲೊಂದು ಸಂದೇಶವಿದೆ, ಅದನ್ನು ಉಪದೇಶದಂತೆ ಹೇಳಿಲ್ಲ’ ಅಂತಾರೆ. ಯಂಗ್ ಥಿಂಕರ್ಸ್ ಬ್ಯಾನರ್‌ನಲ್ಲಿ ಕೆ ಉಮೇಶ್ ಹಾಗೂ ಗಣೇಶ್ ಕೆ ಐತಾಳ್ ಜಂಟಿಯಾಗಿ ಚಿತ್ರ ನಿರ್ಮಿಸಿದ್ದಾರೆ.
ಪ್ರಕೃತಿಯ ಒಳಿತಿಗೆ ಒಂದು ದಿರಿಸು ಮತ್ತೆ ಧರಿಸಿ: ರಿಕ್ಕಿ ಕೇಜ್.
ಪವನ್ ಭಟ್ ನಿರ್ದೇಶನದ ಜೊತೆಗೆ ಸಾಹಿತ್ಯ, ಸಂಭಾಷಣೆ ರಚಿಸಿದ್ದಾರೆ. ಪ್ರವೀಣ್ ನಟನೆ ಜೊತೆಗೆ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಹಿರಿಯ ನಿರ್ದೇಶಕ ದೊರೈ ಭಗವಾನ್, ನವೀನ್ ಕೃಷ್ಣ, ಓ ಪ್ರಕಾಶ್ ರಾವ್, ಕಾರ್ತಿಕ್ ಕೊರ್ಡೇಲ್, ದೀಪಕ್ ಭಟ್ ಮೊದಲಾದವರು ನಟಿಸಿದ್ದಾರೆ. ರಾಜ್ಯಾದ್ಯಂತ ಮಲ್ಟಿಪ್ಲೆಕ್ಸ್‌ಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ.
ಎಲ್ಲರಿಗೂ ಕನೆಕ್ಟ್ ಆಗುವ ಚಿತ್ರ. ಎಡಿಟರ್ ಬದುಕಿನ ಮೇಲಷ್ಟೇ ಫೋಕಸ್ ಮಾಡಿದ್ದೇವೆ. ಟೆಕ್ನಿಕಲ್ ಅಂಶಗಳನ್ನು ಸೇರಿಸಿಲ್ಲ. ಸಬ್ಜೆಕ್ಟ್, ನಿರೂಪಣೆಯಲ್ಲಿ ಹೊಸತನ ಇದೆ. ಯಂಗ್ ಜನರೇಶನ್‌ಗಾಗಿ ಮಾಡಿರೋ ಸಿನಿಮಾ. ಈಗಾಗಲೇ ಕಾರ್ಕಳ ಮೊದಲಾದೆಡೆ ಟಿಕೆಟ್ ಸೋಲ್ಡ್ ಔಟ್ ಆಗಿದೆ.
- ಪವನ್ ಭಟ್, ನಿರ್ದೇಶಕ
ತಮ್ಮ ಹೊಸ ಪ್ರಯತ್ನದ ಬಗ್ಗೆ ಉತ್ಸಾಹದಿಂದ ಮಾತಾಡುವ ನಿರ್ದೇಶಕ ಪವನ್ ಭಟ್, ‘ಇದೊಂದು ಡ್ರಾಮಿಡಿ ಸಿನಿಮಾ’ ಎನ್ನುತ್ತಾರೆ. ಡ್ರಾಮಾ ಮತ್ತು ಕಾಮಿಡಿಯನ್ನು ಮಿಕ್ಸ್ ಮಾಡಿರುವ ವಿಶಿಷ್ಟಜಾನರ್ ಇದು. ‘ಎಡಿಟಿಂಗ್ ಟೇಬಲ್ ಅನುಭವ, ಸತ್ಯ ಘಟನೆ ಹಾಗೂ ಕಲ್ಪನೆ ಬೆರೆಸಿ ಮಾಡಿರುವ ಸಿನಿಮಾ. ಇದರ ಹೀರೋ ಒಬ್ಬ ಫಿಲಂ ಎಡಿಟರ್. ಅವನ ಲೈಫ್ ಜರ್ನಿ ಈ ಸಿನಿಮಾದಲ್ಲಿದೆ. ಆತನ ಎಡಿಟಿಂಗ್ ಆಸಕ್ತಿ, ಚಿತ್ರರಂಗಕ್ಕೆ ಎಂಟ್ರಿ ಕೊಡೋದು, ನಂತರದ ಗುದ್ದಾಟಗಳು, ಸಣ್ಣ ಮಟ್ಟದಿಂದ ಬಹು ಎತ್ತರಕ್ಕೆ ಬೆಳೆಯುವ ಕಥೆ. ಇಲ್ಲಿ ಕಾಮಿಡಿ ಜೊತೆಗೆ ಭಾವನೆಗಳನ್ನೂ ಬೆರೆಸಲಾಗಿದೆ. ಬಹುಶಃ ಸಿನಿಮಾ ಸಂಕಲನಕಾರನ ಬಗ್ಗೆ ಬರುತ್ತಿರುವ ದೇಶದ ಮೊದಲ ಸಿನಿಮಾ ಇದೇ ಇರಬೇಕು’ ಅಂತಾರೆ ಪವನ್.
ನನ್ನೊಳಗಿನ ನಟನನ್ನು ಇಷ್ಟಪಡುವವರ ಸಿನಿಮಾ ಟ್ವೆಂಟಿ ಒನ್ ಅವರ್ಸ್
ಕೆಬಿ ಪ್ರವೀಣ್, ಅರ್ಚನಾ ಕೊಟ್ಟಿಗೆ ನಾಯಕ ನಾಯಕಿಯರು. ದೀಪಕ್ ಭಟ್, ನವೀನ್ ಕೃಷ್ಣ, ಕಾರ್ತಿಕ್ ರಾವ್ ಕೊರ್ಡೇಲ್ ಮುಖ್ಯಪಾತ್ರಗಳಲ್ಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.