ಹೈದರಾಬಾದ್‌ ಅನ್ನಪೂರ್ಣ ಸ್ಟುಡಿಯೋದಲ್ಲಿ ಮಿನಿ ಫಾರೆಸ್ಟ್‌; ಕಿಚ್ಚನ ಫ್ಯಾಂಟಮ್!

Kannadaprabha News   | Asianet News
Published : Jul 06, 2020, 08:59 AM IST
ಹೈದರಾಬಾದ್‌ ಅನ್ನಪೂರ್ಣ ಸ್ಟುಡಿಯೋದಲ್ಲಿ ಮಿನಿ ಫಾರೆಸ್ಟ್‌; ಕಿಚ್ಚನ ಫ್ಯಾಂಟಮ್!

ಸಾರಾಂಶ

‘ಫ್ಯಾಂಟಮ್‌’ ಚಿತ್ರತಂಡ ಹೈದರಾಬಾದ್‌ನಲ್ಲಿ ಬೀಡು ಬಿಟ್ಟಿದೆ. ಕಳೆದ ಎರಡು ವಾರಗಳಿಂದ ಇಲ್ಲಿನ ಅನ್ನಪೂರ್ಣ ಸ್ಟುಡಿಯೋದಲ್ಲಿ ಚಿತ್ರಕ್ಕಾಗಿ ಕಾಡಿನ ಸೆಟ್‌ಗಳನ್ನು ನಿರ್ಮಿಸುವುದರಲ್ಲಿ ಚಿತ್ರತಂಡ ಬ್ಯುಸಿ ಆಗಿದೆ. ಜೂ.19ಕ್ಕೆ ಶುರುವಾದ ಚಿತ್ರದ ಸೆಟ್‌ ನಿರ್ಮಾಣದ ಕೆಲಸಗಳು ಬಹುತೇಕ ಮುಗಿಯುತ್ತ ಬಂದಿದೆ.

ಸುದೀಪ್‌ ಪಾತ್ರದ ಚಿತ್ರೀಕರಣ ಕಾಡಿನಲ್ಲೂ ನಡೆಯುವುದರಿಂದ ಕಾಡಿನ ಸೆಟ್‌ ನಿರ್ಮಾಣ ಮಾಡಲಾಗುತ್ತಿದೆ.

‘ನಮ್ಮ ನಿರೀಕ್ಷೆಗೆ ತಕ್ಕಂತೆ ಸೆಟ್‌ ನಿರ್ಮಾಣ ಆಗಿದೆ. ಎಲ್ಲಾ ರೀತಿಯ ಸುರಕ್ಷತೆಗಳನ್ನು ತೆಗೆದುಕೊಂಡೇ ಸೆಟ್‌ನಲ್ಲಿ ಕೆಲಸ ಮಾಡಲು ಕಾರ್ಮಿಕರು ಹಾಗೂ ತಂತ್ರಜ್ಞರು ಹಾಜರಿ ಹಾಕುತ್ತಿದ್ದಾರೆ. ಯಾರಿಗೂ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಕಂಡುಬಂದಿಲ್ಲ. ಅಷ್ಟರ ಮಟ್ಟಿಗೆ ಮುನ್ನೆಚ್ಚರಿಕೆ ಕೈಗೊಳ್ಳಲಾಗಿತ್ತು. ಇನ್ನೆರಡು ದಿನದಲ್ಲಿ ಸೆಟ್‌ ಕೆಲಸ ಸಂಪೂರ್ಣವಾಗಿ ಮುಕ್ತಾಯವಾಗಲಿದೆ. ಕೇವಲ ಕಾಡಿನ ಸೆಟ್‌ ಫೋಟೋಗಳನ್ನು ಮಾತ್ರ ಬಹಿರಂಗ ಮಾಡುತ್ತಿದ್ದೇವೆ. ಒಳಾಂಗಣದಲ್ಲಿ ನಿರ್ಮಿಸಿರುವ ಕಲರ್‌ಫುಲ್‌ ಸೆಟ್‌ಗಳು ಬೇರೆ ಇವೆ’ ಎಂಬುದು ಚಿತ್ರದ ನಿರ್ಮಾಪಕ ಜಾಕ್‌ ಮಂಜು ವಿವರಣೆ.

ಅನೂಪ್‌ ಭಂಡಾರಿ ನಿರ್ದೇಶಿಸಿ, ಸುದೀಪ್‌ ನಾಯಕನಾಗಿ ನಟಿಸುತ್ತಿರುವ ಈ ಚಿತ್ರಕ್ಕೆ ಯಾವಾಗ ಶೂಟಿಂಗ್‌ ಎಂಬುದು ಚಿತ್ರತಂಡಕ್ಕೆ ಸ್ಪಷ್ಟತೆ ಇಲ್ಲ. ಯಾಕೆಂದರೆ ಮತ್ತೆ ಲಾಕ್‌ಡೌನ್‌ ಮಾಡುವ ಸಾಧ್ಯತೆಗಳು ಕೇಳಿ ಬರುತ್ತಿರುವುದೇ ಈ ಅನುಮಾನಕ್ಕೆ ಕಾರಣ.

 

‘ನಿರ್ಮಾಪಕನಾಗಿ ಶೂಟಿಂಗ್‌ಗೆ ಬೇಕಾದ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿದ್ದೇನೆ. ನಿರ್ದೇಶಕರ ತಂಡ ಕೂಡ ರೆಡಿ ಇದೆ. ಆದರೆ, ಮತ್ತೊಮ್ಮೆ ಲಾಕ್‌ಡೌನ್‌ ಆಗಲಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಹಾಗೊಂದು ವೇಳೆ ಮತ್ತೆ ಲಾಕ್‌ಡೌನ್‌ ಆದರೆ, ಶೂಟಿಂಗ್‌ ಮಾಡಲು ಕಷ್ಟವಾಗುತ್ತದೆ. ಹೀಗಾಗಿ ಯಾವಾಗ ಶೂಟಿಂಗ್‌ ಆರಂಭವಾಗುತ್ತದೆ ಎಂಬುದು ನಾಲ್ಕೈದು ದಿನಗಳಲ್ಲಿ ಗೊತ್ತಾಗಲಿದೆ’ ಎನ್ನುತ್ತಾರೆ ಜಾಕ್‌ ಮಂಜು. ಈ ನಡುವೆ ಚಿತ್ರಕ್ಕೆ ಸಂಗೀತ ನಿರ್ದೇಶಕ ಅಜನೀಶ್‌ ಲೋಕನಾಥ್‌ ಜತೆಯಾಗಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ಧಂ' ಬೇಕಲೇ ಎಂದಿದ್ದ ದರ್ಶನ್‌ಗೆ ಟಾಂಗ್ ಕೊಟ್ರಾ ಸುದೀಪ್? ಏನಿದು ಮಾರ್ಕ್ ಡೈಲಾಗ್ ಮರ್ಮ?
ಸಿನಿಮಾ ರಿಲೀಸ್‌ಗೂ ಮುನ್ನವೇ ಜೈಲಲ್ಲಿ ಡೆವಿಲ್ ರೂಪ ತಾಳಿದ ದರ್ಶನ್; ಸಹ ಕೈದಿಗಳಿಗೆ ಕಾಲಿನಿಂದ ಒದ್ದು ದುರಹಂಕಾರ!