
ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿ ಇಂದಿಗೆ 12ನೇ ದಿನಗಳಾಗಿವೆ. ಪುಣ್ಯಸ್ಮರಣೆ ನಡೆದ ನಂತರ ಕುಟುಂಬಸ್ಥರು ಹಾಗೂ ಸಿನಿ ಆಪ್ತರಿಗೆ ನಿವಾಸದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಪುನೀತ್‌ಗೆ ಬಿಳಿ ಬಣ್ಣದ ಹೂಗಳು ಇಷ್ಟವೆಂದು ಮನೆಯಲ್ಲಿ ಹಾಗೂ ಸಮಾಧಿಯಲ್ಲಿ ಅಪ್ಪುವಿನ ಫೋಟೋಗಳಿಗೆ ಬಿಳಿ ಹೂಗಳಿಂದ ಅಲಂಕಾರ ಮಾಡಿದ್ದರು. ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಭಿಮಾನಿಗಳಿಗೆ ದೊಡ್ಮನೆ ಕುಟುಂಬ ಅನ್ನ ಸಂತರ್ಪಣೆ ಹಮ್ಮಿಕೊಂಡಿದೆ. ಸುಮಾರು 30 ಸಾವಿರ ಮಂದಿಗೆ ಅಡುಗೆ ಮಾಡಲಾಗಿದ್ದು, 50 ಸಾವಿರ ಮಂದಿ ಸೇರುವ ನಿರೀಕ್ಷೆ ಇದೆ, ಎನ್ನಲಾಗಿದೆ.
ಚಿತ್ರರಂಗದ ಪ್ರತಿಯೊಬ್ಬ ಕಲಾವಿನ ಜೊತೆಯೂ ಅತ್ಯುತ್ತಮ ಬಾಂಧವ್ಯ ಹೊಂದಿರುವ ನಟ ಕಮ್ ನಿರ್ದೇಶಕ ಒಳ್ಳೆಯ ಹುಡುಗ ಪ್ರಥಮ್ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಪ್ರಥಮ್ ಅವರು ಪುನೀತ್ ಪತ್ನಿ ಅಶ್ವಿನಿ ಅವರ ಜೊತೆ ಕ್ಲಿಕ್ ಮಾಡಿಕೊಂಡಿರುವ ಸೆಲ್ಫೀಯನ್ನು ಹಂಚಿಕೊಂಡಿದ್ದಾರೆ. 'ಸಾಮಾನ್ಯವಾಗಿ ಇವ್ರು ಫೋಟೋಗೆ ಕಾಣಿಸಿಕೊಳ್ಳುವುದು ತುಂಬಾ ಕಮ್ಮಿ. ನಿಮಗೆ ಕ್ಯಾಮೆರಾ ಮುಂದೆ ಇರೋ ಪವರ್ ಸ್ಟಾರ್ ಗೊತ್ತು. ಕ್ಯಾಮೆರಾ ಹಿಂದೆ ಇರೋ ಪವರ್ ಹೌಸ್ ಬಗ್ಗೆ ಗೊತ್ತಿರಲ್ಲ. ನನಗಿರೋ ಒಂದೇ ಒಂದು ಆತಂಕ, ಕಾತುರತೆ ಏನಂದ್ರೆ ಇವರ ಮುಖದಲ್ಲಿ ಮತ್ತೆ ಬೆಲೆ ಕಟ್ಟಲಾಗದ ಮಂದಹಾಸ ನೋಡೋದ್ ಯಾವಾಗಪ್ಪ ಅಂತ. ಪವರ್ ಸ್ಟಾರ್ ಅವರ ಬಿಗ್ ಶಕ್ತಿ ಇವರು. ಅವರೇ ನಮ್ಮ ಅಶ್ವಿನಿ ಮೇಡಂ. ಇಷ್ಟು ದಿನ ಅಪ್ಪು ಸರ್‌ಗೆ strength ಆಗಿದ್ರು. ಈಗ ನೀವೆಲ್ಲರೂ ಅಶ್ವಿನಿ ಮೇಡಂ ಅವರಿಗೆ ಮಾರೆಲ್ ಸಪೋರ್ಟ್ ನೀಡಬೇಕು,' ಎಂದು ಬರೆದುಕೊಂಡಿದ್ದಾರೆ.
ಪುನೀತ್ ಅವರು ಆಸ್ಪತ್ರೆಗೆ ದಾಖಲಾದಾಗ ವೈರಲ್ ಆದ ಫೋಟೋ ಹಂಚಿಕೊಂಡ ಪ್ರಥಮ್ 'ಮೊನ್ನೆಯಷ್ಟೇ ಅಪ್ಪು ಸರ್ ಹತ್ತಿರ ಮಾತನಾಡಿದ್ದೆ. ಈ ಫೋಟೋ ಸುಳ್ಳಾಗಿರಲಿ ಎಂಬುದೇ ಕೋಟ್ಯಾಂತರ ಜನರ ಪ್ರಾರ್ಥನೆ. ಈಗಲೂ ಪವಾಡ ನಡೆಯಲಿ. ಭಗವಂತ ಕನ್ನಡಿಗರ ಪ್ರಾರ್ಥನೆಗೆ ಸ್ಪಂದಿಸಲಿ,' ಎಂದು ಪುನೀತ್ ರಾಜ್‌ಕುಮಾರ್ ಕೊನೆಯುಸಿರೆಳೆದ ದಿನ ಪೋಸ್ಟ್‌ವೊಂದನ್ನು ಹಂಚಿ ಕೊಂಡಿದ್ದರು. ಆನಂತರ ವಿಚಾರ ನ್ಯೂಸ್ ಮೂಲಕ ಖಚಿತವಾದ ಬಳಿದ 'ಈ innocenceನ ಇನ್ನೆಲ್ಲಪ್ಪಾ ನೋಡೋದು? ಎಷ್ಟೇ ಬ್ಯುಸಿ ಇರ್ಲಿ, ಒಂದು ಫೋನ್ ಕಾಲ್‌ಗೆ ರೆಸ್ಪಾಂಡ್ ಮಾಡ್ತಿದ್ದ ಲೆಜೆಂಡ್ ಇನ್ನಿಲ್ಲ. ನಿನ್ನ ಹತ್ತಿರ ಲೈಫ್ ಅಲ್ಲಿ ವಾದ ಮಾಡಲ್ಲ ಪ್ರಥಮ್, ನೀನ್ ಏನೇ ಹೇಳಿದರೂ ಅದು ರೈಟ್. ಬಾಂಡ್ ಪೇಪರ್ ಮೇಲೆ ಬರೆದುಕೊಡಬೇಕಾ ಹೇಳು? ಹೀಗನ್ನುತ್ತಿದ್ದ ಬಾಸ್ ಇನ್ನು ನೆನಪು ಮಾತ್ರ. ಭಾರತ ಚಿತ್ರರಂಗದ ಇತಿಹಾಸದ ಅತೀ ಕರಾಳ ದಿನ,' ಎಂದು ದುಃಖ ತೋಡಿಕೊಂಡಿದ್ದರು.
ಬಿಗ್ ಬಾಸ್ ಸೀಸನ್ 5ರ ಟ್ರೋಫಿ ಗೆದ್ದ ಪ್ರಥಮ್‌ಗೆ ಪುನೀತ್ ಅವರೇ ಕರೆ ಮಾಡಿದ್ದರಂತೆ. 'ಬಿಗ್ ಬಾಸ್‌ಗೆ ಹೋಗೋದನ್ನು ಯಾರಿಗೂ ಹೇಳೋ ಹಾಗಿಲ್ಲ. ಅದು ನಿಯಮ. ಆದರೂ ಸಂತೋಷದಿಂದ ಬಾಸ್‌ಗೆ ಕರೆ ಮಾಡಿದೆ. ಲೇಯ್ ನಿನಗೋಸ್ಕರ ಬಿಗ್ ಬಾಸ್ ನೋಡ್ತೀನಪ್ಪ. ಟ್ರೋಫಿ ಜೊತೆಗೆ ಮನೆಗೆ ಬಾ, ಬೀರ ಕೈಯಲ್ಲಿ ಬರಬೇಡ, ಎಂದು ಹಾರೈಸಿದ್ದರು. ಬಿಗ್ ಬಾಸ್ ಗೆದ್ದಾಗ ನನ್ನ ಫೋನ್ ನನ್ನ ಕೈಗೆ ವಾಪಸ್ ಬಂತು. ಈಶ್ವರನ ಮೇಲೆ ಪ್ರಮಾಣ ಮಾಡಿ ಹೇಳ್ತೀನಿ, ವಾಟ್ಸಪ್‌ನಲ್ಲಿ ಅಪ್ಪು ಸರ್ ಕಳಿಸಿದ್ದ ಮೆಸೇಜ್ Congrats ಮ್ಯಾನ್ You deserve it. ಮನೆಗೆ ನಾಡಿದ್ದು ಬಾ. ಈಗಲೂ ನನ್ನ ಹೃದಯದಲ್ಲಿ ಅಚ್ಚ ಹಸಿರಾಗಿರೋದು ಆ ಮೆಸೇಜ್,' ಎಂದು ಅಪ್ಪು ತಬ್ಬಿಕೊಂಡಿರುವ ಫೋಟೋ ಅಪ್ಲೋಡ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.