
ಜಿಲ್ಲೆ: ಚಿತ್ರದುರ್ಗ
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಸಾವರ್ಕರ್ ಬಗ್ಗೆ ಹಗುರವಾಗಿ ಮಾತನಾಡಿದ್ದಕ್ಕೆ ಕೂಡಲೇ ನೀವು ಕ್ಷಮೆ ಯಾಚಿಸಲೇಬೇಕು ಎಂದು ಆಗ್ರಹಿಸಿ ಅನಾಮಧೇಯ ಪತ್ರವೊಂದು ಕೋಟೆನಾಡಿನ ಸಾಹಿತಿ, ಕಾದಂಬರಿಕಾರ ಬಿ.ಎಲ್ ವೇಣು ಅವರಿಗೆ ಸಹಿಷ್ಣು ಹಿಂದು ಹೆಸರಿನಲ್ಲಿ ವಿಳಾಸವಿಲ್ಲದ ಬೆದರಿಕೆ ಪತ್ರ ಬಂದಿದೆ.
ಚಿತ್ರದುರ್ಗ ನಗರದ ಕೆಳಗೋಟೆ ಬಡಾವಣೆ ಬಳಿ ಇರುವ ಅವರ ನಿವಾಸಕ್ಕೆ ಪತ್ರ ಬಂದಿದ್ದು ಈ ಕುರಿತು ಸಾಹಿತಿ ಬಿ.ಎಲ್ ವೇಣು ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಸುಮಾರು ಎರಡು ಪುಟಗಳ ಕೈ ಬರಹ ಪತ್ರ ಬರೆದು ಎಚ್ಚರಿಕೆ ಕೊಡುವ ಮೂಲಕ ಸಾಹಿತಿಗಳಿಗೆ ಬೆದರಿಕೆ ಹಾಕಿದ್ದಾರೆ. ಅಂತಹ ಮಹಾನ್ ಜ್ಞಾನಿಗಳ ಬಗ್ಗೆ ತುಂಬಾ ಹಗುರವಾಗಿ ಮಾತನಾಡುವುದು ನಿಮಗೆ ಶೋಭೆ ತರುವುದಿಲ್ಲ.
ಈ ಕುರಿತು ರಾಜ್ಯದ ಸುಮಾರು ೬೧ ಜನ ಸಾಹಿತಿಗಳು ಕೂಡ ಇದೇ ರೀತಿ ಸಾವರ್ಕರ್ ಹಾಗೂ ಪಠ್ಯ ಪರಿಷ್ಕರಣೆ ಕುರಿತು ವ್ಯಂಗ್ಯ ಮಾಡಿದ್ದಾರೆ. ಅಂತವರಿಗೂ ಕೂಡ ನೀವು ಈ ಕೂಡಲೇ ತಿಳಿ ಹೇಳಬೇಕು ಎಂದು ಪತ್ರದಲ್ಲಿ ಸಲಹೆ ನೀಡಿದ್ದಾರೆ. ಜೊತೆಗೆ ಎಲ್ಲರೂ ಯಾವುದೇ ಮುಲಾಜಿಲ್ಲದೇ ಕ್ಷಮೆ ಯಾಚಿಸಲೇಬೇಕು ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಈ ಹಿಂದೆ ಇದ್ದ ಪಠ್ಯ ಪರಿಷ್ಕರಣೆ ವಿಚಾರದಲ್ಲಿ ಬರಗೂರು ರಾಮಚಂದ್ರಪ್ಪ ಸಮಿತಿಯಿಂದ ಇಡೀ ನಾಡಿಗೆ ದ್ರೋಹ ಆಗಿದೆ. ಅಂತಹ ನಾಡದ್ರೋಹಿ ಸಮಿತಿಗೆ ರಾಜ್ಯದ ಸುಮಾರು 61 ಸಾಹಿತಿಗಳು ಬೆಂಬಲ ನೀಡಿರೋದು ಖಂಡನೀಯ. ಇಂತಹ ೬೧ ಜನರನ್ನೂ ಕೂಡಲೇ ಗಲ್ಲಿಗೇರಿಸಬೇಕು, ಗುಂಡಿಕ್ಕಿ ಕೊಲ್ಲಬೇಕು ಎಂದಯ ಪತ್ರದಲ್ಲಿ ಬೆದರಿಕೆ ಹಾಕಿದ್ದಾರೆ.
ಇಂತಹ ಸಾಹಿತಿಗಳ ಜೊತೆಗೆ ಮಾಜಿ ಸಿಎಂ ಸಿದ್ದರಾಮಯ್ಯ, BK ಹರಿಪ್ರಸಾದ್, HDK ಹೆಸರು ಉಲ್ಲೇಖ ಮಾಡಿದ್ದಾರೆ. ಪಠ್ಯದಲ್ಲಿ ಭಗವದ್ಗೀತೆ ಅಂಶ ಸೇರಿಸದಂತೆ ಸರ್ಕಾರಕ್ಕೆ ಇವರೆಲ್ಲಾ ಪತ್ರ ನೀಡಿದ್ದರು. ಹುಟ್ಟಿದ ದೇಶದ ಬಗ್ಗೆ ನಿಮಗೆ ಯಾಕೆ ಇಷ್ಟೊಂದು ಹೀನ ಭಾವನೆ ಎಂದು ಪತ್ರದಲ್ಲಿ ಅನಾಮಧೇಯ ವ್ಯಕ್ತಿ ಪ್ರಶ್ನೆ ಮಾಡಿದ್ದಾರೆ. 61 ಜನ ಅಲ್ಲ 61 ಕೋಟಿ ಜನ ಸಹಿ ಹಾಕಿ ಕೊಟ್ಟರೂ ಭಗವದ್ಗೀತೆ ಸೂರ್ಯ, ಚಂದ್ರ ಇರುವವರೆಗೂ ಇರುತ್ತದೆ ಎಂದು ಹೇಳಿದ್ದಾರೆ. ಬಿ.ಎಲ್ ವೇಣು ಅವರೇ ಇಂಥವರಿಗೆ ನೀವು ಬುದ್ದಿ ಹೇಳಿ, ಇಲ್ಲ ಕಾಲನ ಉಪಚಾರಕ್ಕೆ ಸಿದ್ದರಾಗಿ ಎಂದು ಬೆದರಿಕೆ ಹಾಕಿದ್ದಾರೆ. ಈ ಹಿಂದೆಯೂ ಜೂನ್ 22 ರಂದು ಮೊದಲ ಬೆದರಿಕೆ ಪತ್ರ ಸಾಹಿತಿ ಬಿ.ಎಲ್ ವೇಣು ಅವರಿಗೆ ಬಂದಿತ್ತು ಇಂದು ಬಂದಿದ್ದು ಎರಡನೇ ಬೆದರಿಕೆ ಪತ್ರವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.