
ಸ್ಯಾಂಡಲ್ ವುಡ್‌ನ ಬ್ಯೂಟಿ ಕ್ವೀನ್, ಮೋಹಕ ತಾರೆ ನಟಿ ರಮ್ಯಾ (Ramya) ಸಿನಿಮಾ ಮಾಡುವುದನ್ನು ಬಿಟ್ಟು ಅನೇಕ ವರ್ಷಗಳೇ ಆಗಿವೆ. ಆದರೂ ಅವರ ಅಭಿಮಾನಿ ಬಳಗ ಕಡಿಮೆಯಾಗಿಲ್ಲ. ಇವತ್ತಿಗೂ ಅದೆ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ರಮ್ಯಾ ಮತ್ತೆ ಬಣ್ಣ ಹಚ್ಚಲಿ, ತೆರೆಮೇಲೆ ಮಿಂಚಲಿ ಎಂದು ಅದೆಷ್ಟೊ ಅಭಿಮಾನಿಗಳು ಕಾಯುತ್ತಿದ್ದಾರೆ. ಆದಷ್ಟು ಬೇಗ ರಮ್ಯಾ ಸಿನಿಮಾಗೆ ಬರಲಿ ಎನ್ನುವುದು ಅವರ ಫ್ಯಾನ್ಸ್ ಆಸೆಯಾಗಿದೆ.
ರಮ್ಯಾ ಸಿನಿಮಾ ಬಿಟ್ಟು ರಾಜಕೀಯ ಸೇರಿದ ಮೇಲೆ ಚಿತ್ರರಂಗದಿಂದ ಸಂಪೂರ್ಣ ದೂರ ಹೋಗಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ರಮ್ಯಾ ಸಿನಿಮಾಗಳ ಬಗ್ಗೆ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಸಾಕಷ್ಟು ಸಿನಿಮಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಅನೇಕ ನಟ-ನಟಿಯ ಜೊತೆ ಉತ್ತಮ ಸ್ನೇಹ ಬಾಂಧವ್ಯ ಹೊಂದಿದ್ದಾರೆ. ಈ ನಡುವೆ ರಮ್ಯಾ ಶೂಟಿಂಗ್ ಸೆಟ್ ನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಹೌದು, ಡಾಲಿ ಧನಂಜಯ್ (Dhananjay) ನಟನೆಯ ಹೊಯ್ಸಳ ಚಿತ್ರದ ಶೂಟಿಂಗ್ ಸೆಟ್ ನಲ್ಲಿ (hoysala film shooting set) ರಮ್ಯಾ ಕಾಣಿಸಿಕೊಂಡಿದ್ದಾರೆ. ಚಿತ್ರೀಕರಣದ ವೇಳೆ ರಮ್ಯಾ ಮತ್ತು ಡಾಲಿ ಧನಂಜಯ್ ಅವರು ಜೊತೆಯಾಗಿ ಕುಳಿತು ಮಾತನಾಡಿದ ವಿಡಿಯೋ ವೈರಲ್ ಆಗಿದೆ.
ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಡಾಲಿ ಧನಂಜಯ್ ಬ್ಯುಸಿ ಆಗಿದ್ದಾರೆ. ಸದ್ಯ ಹೊಯ್ಸಳ ಸಿನಿಮಾಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಸೆಟ್ ಗೆ ರಮ್ಯಾ ದಿಢೀರ್ ಭೇಟಿ ನೀಡಿರುವುದು ಅಚ್ಚರಿ ಮೂಡಿಸಿದೆ. ರಮ್ಯಾ ಸೆಟ್ ಗೆ ಭೇಟಿ ನೀಡಿರುವ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ರಮ್ಯಾ ಮತ್ತೆ ಚಟಿತ್ರೀಕರಣ ಸ್ಥಳದಲ್ಲಿ ಕಾಣಿಸಿಕೊಂಡಿರುವುದನ್ನು ನೋಡಿ ಅಭಿಮಾನಿಗಳು ಫುಲ್ ಖುಶ್ ಆಗಿದ್ದಾರೆ.
ಈ ಬಗ್ಗೆ ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. 'ವಾರಾಂತ್ಯದಲ್ಲಿ ವಿಜಯ್ ಅವರು ನಿರ್ದೇಶಿಸುತ್ತಿರುವ ಹೊಯ್ಸಳ ಚಿತ್ರದ ಸೆಟ್ ಗೆ ಭೇಟಿ ನೀಡಿದೆ. ಆ್ಯಕ್ಷನ್ ದೃಶ್ಯವೊಂದನ್ನು ಅವರು ಚಿತ್ರೀಕರಿಸುತ್ತಿದ್ದರು. ಅವರು ಚಿತ್ರೀಕರಿಸಿರುವ ಕೆಲವು ದೃಶ್ಯದ ತುಣುಕುಗಳನ್ನು ನೋಡಿದೆ ಹಾಗೂ ಬಹಳ ಚೆನ್ನಾಗಿ ಮೂಡಿಬಂದಿವೆ' ಎಂದು ರಮ್ಯಾ ಹೊಗಳಿದ್ದಾರೆ.
ಡಾಲಿ ಪ್ರಪೋಸ್‌ನಿಂದ ಅನುಭವಿಸಲಾರದ ಕಷ್ಟ ಅನುಭವಿಸಿದೆ: ಅಮೃತಾ ಅಯ್ಯಂಗಾರ್
'ಆಸಕ್ತಿದಾಯಕ ಮಾತುಕತೆ ಧನ್ಯವಾದಗಳು ಧನು. ತೆರೆಯ ಮೇಲೆ ನಿಮ್ಮನ್ನು ಪೊಲೀಸ್ ಪಾತ್ರದಲ್ಲಿ ನೋಡಲು ನನಗೆ ಬಹಳ ಕಾತುರವಿದೆ. ಅಮೃತಾ ಅಯ್ಯಂಗಾರ್, ಇದರಲ್ಲಿನ ನಿಮ್ಮ ಅತ್ಯುನ್ನತ ಅಭಿನಯಕ್ಕೆ ಬಹಳಷ್ಟು ಪ್ರಶಸ್ತಿಗಳು ನಿಮ್ಮ ಪಾಲಾಗುವುದರಲ್ಲಿ ಅನುಮಾನವಿಲ್ಲ. ಕಾರ್ತಿಕ್ ಗೌಡ, ಯೋಗಿ ಜಿ. ರಾಜ್ ಅವರೇ, ರತ್ನನ್ ಪ್ರಪಂಚ ಚಿತ್ರದ ಗೆಲುವಿನ ನಂತರ ಮತ್ತೆ ಗೆಲುವಿನ ಸರಮಾಲೆಯೊಂದಿಗೆ ಮುನ್ನುಗ್ಗುತ್ತಿರುವಿರಿ. ನನ್ನನ್ನು ಕರೆದದ್ದಕ್ಕೆ ಹಾಗೂ ನಿಮ್ಮ ಪ್ರೀತಿಗೆ ನನ್ನ ಧನ್ಯವಾದಗಳು. 2023ರಲ್ಲಿ ಎದುರು ನೋಡಬಯಸುವ ಚಿತ್ರ- ಹೊಯ್ಸಳ' ಎಂದು ರಮ್ಯಾ ಬರೆದುಕೊಂಡಿದ್ದಾರೆ.
ಅಂದಹಾಗೆ ರಮ್ಯಾ ಮತ್ತು ಅಮೃತಾ ಇಬ್ಬರು ಉತ್ತಮ ಸ್ನೇಹಿತರು. ಆಗಾಗ ಇಬ್ಬರು ಭೇಟಿಯಾಗುತ್ತಿರುತ್ತಾರೆ. ಇದೀಗ ಚಿತ್ರೀಕರಣ ಸೆಟ್ ನಲ್ಲಿ ಭೇಟಿ ಮಾಡಿರುವುದು ಅಮೃತಾಗೆ ಮತ್ತಷ್ಟು ಖುಷಿ ಹೆಚ್ಚಗಿದೆ. ಸದ್ಯ ಚಿತ್ರೀಕರಣ ಸೆಟ್ ನಲ್ಲಿ ಕಾಣಿಸಿಕೊಂಡಿರುವ ರಮ್ಯಾ ಸದ್ಯದಲ್ಲೇ ಬಣ್ಣ ಹಚ್ಚಿದ್ರು ಅಚ್ಚರಿ ಇಲ್ಲ. ಆದಷ್ಟು ಬೇಗ ರಮ್ಯಾ ಸಿನಿಮಾ ಮಾಡಲಿ ಎನ್ನುವುದೆ ಅಭಿಮಾನಿಗಳ ಆಶಯ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.