
ಕನ್ನಡ ಹಾಗೂ ತಮಿಳು ಚಿತ್ರರಂಗದ ಹಿರಿಯ ನಟ, ಸಂಗೀತ ನಿರ್ದೇಶಕ ಆರ್.ಜೀವರತ್ನ ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದು,ಚೆನ್ನೈನಲ್ಲಿ ಕೊನೆ ಉಸಿರೆಳೆದಿದ್ದಾರೆ.
'ಡಿಂಡಿಮ ಕವಿ' ಹಿರಿಯ ಕಲಾವಿದ ಶನಿ ಮಹದೇವಪ್ಪ ಇನ್ನಿಲ್ಲ
97 ವರ್ಷದ ಜೀವರತ್ನ ಅವರನ್ನು ಅವರ ಅಭಿಮಾನಿಗಳೇ ಬಹಳ ವರ್ಷಗಳಿಂದ ಸಾಕುತ್ತಿದ್ದರು ಎನ್ನಲಾಗಿದೆ. ಅವರ ಅಪ್ಪಟ ಅಭಿಮಾನಿ ವೆಂಕಟರಾಮಯ್ಯ ಹೆಚ್ಚಾಗಿ ಕಾಳಜಿ ವಹಿಸಿ, ನೋಡಿಕೊಳ್ಳುತ್ತಿದ್ದರು ಎಂಬ ಮಾಹಿತಿ ಇದೆ.
ಖ್ಯಾತ ನಿರ್ಮಾಪಕ ಕೆ. ಬಾಲು ನಿಧನ
ತಮಿಳಿನ 'ದಾನಶೂರ ಕರ್ಣ' ಸಿನಿಮಾದಲ್ಲಿ ಜೀವರತ್ನ ಅಭಿನಯಿಸುವ ಮೂಲಕ ನಾಯಕ ನಟರಾಗಿದ್ದರು. ಆನಂತರ 1961ರಲ್ಲಿ 'ಚಕ್ರವರ್ತಿ ತಿರುಮಗಲ' ಮೂಲಕ ಸಂಗೀತ ನಿರ್ದೇಶಕರಾದರು. ಕನ್ನಡದ 'ಮನೆ ಕಟ್ಟಿ ನೋಡು' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೂ ಪರಿಚಯವಾದರು.
ಈ ಜೀವಕ್ಕೆ ಸದ್ಗತಿ ಸಿಗಲಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.