
‘ಕೆಜಿಎಫ್ 2’ ಚಿತ್ರದ ಟೀಸರ್ ಒಂದು ದಿನದಲ್ಲಿ ಹೊಂಬಾಳೆ ಫಿಲ್ಮ್ ಯೂಟ್ಯೂಬ್ ಚಾನಲಲ್ಲಿ 78ಮಿಲಿಯನ್ ಗೂ ಜಾಸ್ತಿ ಹಿಟ್ಸ್ ಗಳಿಸಿ ದಾಖಲೆ ಮಾಡಿದೆ.
ಯಶ್ ಪರ್ಫೆಕ್ಟ್ ಆಗಲು ಕಾರಣ ಗೊತ್ತಾ? ರಾಧಿಕಾ ಹೇಳ್ತಿದ್ದಾರೆ ಕೇಳಿ
ಬೆಂಗಳೂರಿನ ಗೌಡನಪಾಳ್ಯದಲ್ಲಿರುವ ಶ್ರೀನಿವಾಸ ಚಿತ್ರಮಂದಿರದಲ್ಲಿ ‘ಕೆಜಿಎಫ್’ ಚಿತ್ರದ ಗರುಡ ಪಾತ್ರಧಾರಿ ರಾಮಚಂದ್ರ ರಾಜು ಸಾರಥ್ಯದಲ್ಲಿ ಚಿತ್ರದ ಟೀಸರ್ ಪ್ರದರ್ಶನ ನಡೆಯಿತು. ನಾನಾ ಚಿತ್ರರಂಗದ ಗಣ್ಯರು ಯಶ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭ ಕೋರಿ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಎಂಬುದನ್ನು ನಿರೂಪಿಸಿದರು. ಟೀಸರ್ ಲೀಕ್ ಆಗಿದ್ದ ಕಾರಣ ನಿಗದಿತ ಸಮಯಕ್ಕೆ ಮೊದಲೇ ರಿಲೀಸ್ ಆಗಿದ್ದ ಟೀಸರ್ ಅನ್ನು ಅಭಿಮಾನಿಗಳು ಗೆಲ್ಲಿಸಿದರು. ಆ ಮೂಲಕ ಲೀಕ್ ಮಾಡಿದವರಿಗೆ ಉತ್ತರ ಕೊಟ್ಟರು.
ಟೀಸರಲ್ಲಿ ಪ್ರಕಾಶ್ ರೈ ಧ್ವನಿ
ಈ ಟೀಸರ್‌ನ ನಿರೂಪಣೆ ಪ್ರಕಾಶ್ ರೈ ಅವರದು.ಅವರ ಖಡಕ್ ಧ್ವನಿ ಟೀಸರನ್ನು ಮತ್ತೊಂದು ಎತ್ತರಕ್ಕೆ ತೆಗೆದುಕೊಂಡು ಹೋಗಿದೆ. ಇದೇ ಸಂದರ್ಭದಲ್ಲಿ ಬಹುತೇಕರು ಸೋಷಿಯಲ್ ಮೀಡಿಯಾದಲ್ಲಿ ಕೆಜಿಎಫ್ 1 ಪಾತ್ರಧಾರಿ ಅನಂತ್ ನಾಗ್ ಅವರನ್ನೂ ನೆನಪಿಸಿಕೊಂಡು, ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.