
ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್ ಯಶ್ ಮತ್ತು ಸಿಂಡ್ರೆಲಾ ರಾಧಿಕಾ ಪಂಡಿತ್ ಲಾಕ್‌ಡೌನ್ ಸಮಯದಿಂದಲೂ ಮಕ್ಕಳ ಜೊತೆ ಸಮಯ ಕಳೆಯುತ್ತಿದ್ದಾರೆ. ಅವರ ತುಂಟಾಟ, ತೊದಲ ಮಾತುಗಳು ಎಲ್ಲವನ್ನೂ ವಿಡಿಯೋ ರೆಕಾರ್ಡ್ ಮಾಡಿ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡುತ್ತಿರುತ್ತಾರೆ. ಕಳೆದ ವಾರ ಡಾಡ-ಮಮ್ಮ ಎನ್ನುತ್ತಿದ್ದ ಯಥರ್ವ್ ಈಗ ಜಾನಿ ಜಾನಿ ಹೇಳುತ್ತಿರುವ ವಿಡಿಯೋ ನೋಡಿ...
ಕನ್ನಡದ ಈ ನಟಿ ಅಂದ್ರೆ ಕ್ರಿಕೆಟರ್ ಶ್ರೇಯಸ್ ಗೋಪಾಲ್‌ಗೆ ತುಂಬಾ ಇಷ್ಟವಂತೆ!
ವಿಡಿಯೋ ಹೀಗಿದೆ:
'ಲಾಕ್‌ಡೌನ್ ಡೈರೀಸ್: ಒಂದು ಜಾನಿ ಮತ್ತೊಂದು ತಾಳ್ಮೆ ಇಲ್ಲದ ಪುಟ್ಟಿ,' ಎಂದು ರಾಧಿಕಾ ಬರೆದು ಕೊಂಡಿದ್ದಾರೆ. ರಾಗವಾಗಿ ರೈಮ್ಸ್ ಹೇಳುತ್ತಿದ್ದ ಯಶ್ ಜೊತೆ ಆಟವಾಡುತ್ತಾ ಯಥರ್ವ್ ಎಸ್ ಪಪ್ಪಾ ಎಂದು ಕೊನೆಯಲ್ಲಿ ಧ್ವನಿ ಸೇರಿಸಿದ್ದಾನೆ. ಎರಡನೇ ವಿಡಿಯೋದಲ್ಲಿ ಐರಾ ಕ್ಯಾಮೆರಾಗೆ ಅಡ್ಡ ಬಂದು ಜಾನಿ ಜಾನಿ ಹೇಳುತ್ತಾಳೆ.
ನನ್ನ ರಾಜಕುಮಾರನಿಗೆ 11 ತಿಂಗಳು ಎಂದ ರಾಧಿಕಾ..! ಮಮ್ಮ ಫುಲ್ ಹ್ಯಾಪಿ
ಮಕ್ಕಳ ಬಗ್ಗೆ ರಾಧಿಕಾ ಅಭಿಮಾನಿಗಳಿಗೆ ಅಪ್ಡೇಟ್ ನೀಡುತ್ತಿರುತ್ತಾರೆ. ಸೆಪ್ಟೆಂಬರ್ 28ರಂದು ಡಾಟರ್ಸ್ ಡೇಗೆ ಐರಾ ಜೊತೆ ಸಮುದ್ರದ ದಳದಲ್ಲಿ ವಿಶ್ರಾಂತಿಸುತ್ತಿರುವ ಫೋಟೋ ಶೇರ್ ಮಾಡಿ ಕೊಂಡಿದ್ದರು. 'ಮಗಳು, ನಮ್ಮೆಲ್ಲರ ಫಸ್ಟ್ ಬೆಸ್ಟ್ ಫ್ರೆಂಡ್. ನಿಜವಾದ ಬ್ಲೆಸ್ಸಿಂಗ್,' ಎಂದು ಬರೆದುಕೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.