'ವ್ಯಾಲೆಂಟೈನ್ಸ್‌ ಡೇ'ಗೆ ಪ್ರೇಮಿಗಳಿಗೆ ಅಭಿದಾಸ್-ಶರಣ್ಯಾ 'ನಗುವಿನ ಹೂಗಳ ಮೇಲೆ' ಉಡುಗೊರೆ!

By Shriram Bhat  |  First Published Feb 8, 2024, 4:20 PM IST

'ಯಾರಿಗೂ ಗೊತ್ತಿಲ್ಲ' ಹಾಗೂ 'ಇರಲಿ ಬಿಡು ಈ ಜೀವ ನಿನಗಾಗಿ ' ಎನ್ನುವ ಎರಡು ಹಾಡುಗಳ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದ್ದು ಭರ್ಜರಿ ರೆಸ್ಪಾನ್ಸ್‌ ಪಡೆದುಕೊಳ್ತಿವೆ. ಅಭಿದಾಸ್‌ ಹಾಗೂ ಸ್ಮೈಲಿ ಕ್ವೀನ್‌ ಶರಣ್ಯಾ ಶೆಟ್ಟಿ ಜೋಡಿ ಬಗ್ಗೆ ಕಮೆಂಟ್‌, ಕಾಂಪ್ಲಿಮೆಂಟ್‌ಗಳು ಕೇಳಿಬರುತ್ತಿವೆ. 


ಪ್ರೇಮಿಗಳೆಲ್ಲರೂ ಕಾತುರದಿಂದ ಕಾಯ್ತಿರೋ ದಿನ ಮತ್ತು ಕ್ಷಣ ಹತ್ತಿರವಾಗ್ತಿದೆ. ಇದೇ ಹೊತ್ತಿಗೆ ಪ್ರೇಮಿಗಳಿಗೆ ಸ್ಪೆಷಲ್ಲಾಗಿ ಗಿಫ್ಟ್‌ ಕೊಡಬೇಕು ಅಂತ ಸ್ಯಾಂಡಲ್‌ವುಡ್‌ ನಿರ್ದೇಶಕ ವೆಂಕಟ್‌ ಭಾರದ್ವಾಜ್‌ ಅವರು ರೆಡಿಯಾಗಿದ್ದಾರೆ. ಆಲ್‌ ರೆಡಿ ಪ್ರೀತಿಯಲ್ಲಿರುವವರಿಗೆ ಮತ್ತು ಪ್ರೀತಿಯಲ್ಲಿ ಬೀಳುವವರಿಗೆ ನಿಜವಾದ ಪ್ರೀತಿ ಎಂದರೇನು? ಯಾವುದು ಆ ಪ್ರೀತಿ? ಅದು ಹೇಗಿರಬೇಕು ಮತ್ತು ಹೇಗಿರುತ್ತೆ ಅನ್ನೋದನ್ನ ಸಿನಿಮಾ ಮೂಲಕ ತಿಳಿಸಿ ಕೊಡೋದಕ್ಕೆ ಹೊರಟು ನಿಂತಿದ್ದಾರೆ. 

ʻನಗುವಿನ ಹೂಗಳ ಮೇಲೆʼ ಎಂಬ ಚೆಂದದ ಶೀರ್ಷಿಕೆಯನ್ನಿಟ್ಟು ಸುಂದರವಾದ ಪ್ರೇಮಕಥೆ ಕೆತ್ತಿದ್ದಾರೆ. ಅದನ್ನ ಬೆಳ್ಳಿಭೂಮಿ ಮೇಲೆ ಅನಾವರಣ ಮಾಡೋದಕ್ಕೆ ಒಂದೊಳ್ಳೆ ಮುಹೂರ್ತ ಕೂಡ ಫಿಕ್ಸ್‌ ಮಾಡಿದ್ದಾರೆ. ವ್ಯಾಲೆಂಟೈನ್ಸ್‌ ಡೇಗೂ ಮೊದಲೇ ʻನಗುವಿನ ಹೂಗಳ ಮೇಲೆʼ ಚಿತ್ರಾನಾ ಅದ್ದೂರಿಯಾಗಿ ತೆರೆಗೆ ತರುತ್ತಿದ್ದಾರೆ. 

Latest Videos

undefined

ʻನಗುವಿನ ಹೂಗಳ ಮೇಲೆʼ ಟೈಟಲ್ಲೇ ಸೊಗಸಾಗಿದೆ. ಅಣ್ಣಾವ್ರ ಕಂಠಸಿರಿಯಲ್ಲಿ ಮೂಡಿಬಂದ ʻಭಾಗ್ಯವಂತರುʼ ಚಿತ್ರದ ಹಾಡಿನ ಚರಣವನ್ನೇ ಸಿನಿಮಾದ ಶೀರ್ಷಿಕೆಯನ್ನಾಗಿಸಿದ ನಿರ್ದೇಶಕರು, ಸಾಕ್ಷಾತ್ಕಾರ ಸಿನಿಮಾದಿಂದ ಸ್ಪೂರ್ತಿ ಪಡೆದು ಈ ಚಿತ್ರ ಮಾಡಿರುವುದಾಗಿ ಹೇಳಿಕೊಳ್ತಾರೆ. ಪ್ರೀತಿಗೆ ವಯಸ್ಸಿನ ಹಂಗಿಲ್ಲ ಮತ್ತು ಸಾವಿಲ್ಲ ಎನ್ನುವ ಅವರು ನಿಜವಾದ ಪ್ರೀತಿ ಎಂದರೇನು? ಒಂದು ಹುಡುಗ ಮತ್ತು ಹುಡುಗಿ ಮಧ್ಯೆ ಹುಟ್ಟುವುದು ಮಾತ್ರ ಪ್ರೀತಿನಾ? 

ಸ್ನೇಹಿತರ ನಡುವೆ ಉಸಿರಾಡೋದು ಕೂಡ ಪ್ರೀತಿ ಅಲ್ಲವೇ? ಅಪ್ಪ-ಮಗಳ ಮಧ್ಯೆಯೂ ಒಂದು ಬಾಂದವ್ಯವಿರುತ್ತೆ. ಅಮ್ಮ-ಮಗನ ನಡುವೆಯೂ ಬಣ್ಣಿಸಲಾಗದ ಪ್ರೀತಿ ಇರುತ್ತೆ. ಆ ಪ್ರೀತಿನಾ ಈ  ನಮ್ಮ ʻನಗುವಿನ ಹೂಗಳ ಮೇಲೆʼ ಚಿತ್ರದ ಮೂಲಕ ತೋರಿಸಲಿಕ್ಕೆ ಹೊರಟಿದ್ದೇನೆ ಅಂತಾರೇ ನಿರ್ದೇಶಕರು.

ಅಂದ್ಹಾಗೇ, ಈ ಚಿತ್ರದಲ್ಲಿ ನಾಯಕ-ನಾಯಕಿಯಾಗಿ ಕಿರುತೆರೆಯಲ್ಲಿ ಖ್ಯಾತಿ ಗಳಿಸಿರುವ ಅಭಿದಾಸ್‌ ಹಾಗೂ ಶರಣ್ಯಾ ಶೆಟ್ಟಿ ಜೋಡಿಯಾಗಿ ಮಿಂಚಿದ್ದಾರೆ. ಇವರಿಬ್ಬರು ಸೋಲೋ ಹೀರೋ, ಹೀರೋಯಿನ್ನಾಗಿ ಕಾಣಿಸಿಕೊಳ್ತಿರುವ ಮೊದಲ ಚಿತ್ರ. ಹೀಗಾಗಿ, ಇಬ್ಬರು ಕೂಡ ತುಂಬಾ ಎಕ್ಸೈಟೆಡ್‌ ಆಗಿದ್ದಾರೆ. ಬಿಗ್‌ ಸ್ಕ್ರೀನ್‌ ಮೇಲೆ ಲೀಡ್‌ ಹೀರೋ, ಹೀರೋಯಿನ್ನಾಗಿ ಕಿಚ್ಚು ಹಚ್ಚುವ ತವಕದಲ್ಲಿರೋ ಈ ಜೋಡಿ, ಈಗಾಗಲೇ ಹಾಡುಗಳ ಮೂಲಕ ಸಿನಿಮಾ ಪ್ರೇಮಿಗಳನ್ನ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 

'ಯಾರಿಗೂ ಗೊತ್ತಿಲ್ಲ' ಹಾಗೂ 'ಇರಲಿ ಬಿಡು ಈ ಜೀವ ನಿನಗಾಗಿ ' ಎನ್ನುವ ಎರಡು ಹಾಡುಗಳ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದ್ದು ಭರ್ಜರಿ ರೆಸ್ಪಾನ್ಸ್‌ ಪಡೆದುಕೊಳ್ತಿವೆ. ಅಭಿದಾಸ್‌ ಹಾಗೂ ಸ್ಮೈಲಿ ಕ್ವೀನ್‌ ಶರಣ್ಯಾ ಶೆಟ್ಟಿ ಜೋಡಿ ಬಗ್ಗೆ ಕಮೆಂಟ್‌, ಕಾಂಪ್ಲಿಮೆಂಟ್‌ಗಳು ಕೇಳಿಬರುತ್ತಿವೆ. ತನು-ಮನು ಪಾತ್ರದಲ್ಲಿ ಕಾಣಿಸಿಕೊಳ್ತಿರುವ ಇವರಿಬ್ಬರು ಸಿಲ್ವರ್‌ ಸ್ಕ್ರೀನ್‌ ಮೇಲೆ ಕಮಾಲ್‌ ಮಾಡಿ ಪ್ರೇಕ್ಷಕರಿಂದ ಹೂಮಾಲೆ ಹಾಕಿಸಿಕೊಳ್ಳುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ. 

ಚಿತ್ರದಲ್ಲಿ ಅಭಿದಾಸ್, ಶರಣ್ಯ ಶೆಟ್ಟಿ ಜೋಡಿಯಾದರೆ, ಬಾಲ ರಾಜವಾಡಿ, ಆಶಾ ಸುಜಯ್, ಗಿರೀಶ್, ನಂಜಪ್ಪ, ಅಭಿಷೇಕ್ ಅಯ್ಯಂಗರ್, ಹರ್ಷಿತ್ ಗೌಡ, ಹರೀಶ್ ಚೌಹಾನ್, ಹರ್ಷ ಗೋ ಭಟ್ ತಾರಾಬಳಗದಲ್ಲಿದ್ದಾರೆ. ತ್ರಾಸಿ ಬೀಚ್‌, ಹುಲಿಕಲ್‌ಘಾಟ್‌, ಮಾಸ್ತಿಗುಡಿ, ಶಿವಮೊಗ್ಗ, ತೀರ್ಥಹಳ್ಳಿ, ಮಲೆನಾಡು, ಮರವಂತೆ ಬೀಚ್‌ ಸೇರಿದಂತೆ ಹಲೆವೆಡೆ ಈ ಸಿನಿಮಾ ಚಿತ್ರೀಕರಣಗೊಂಡಿದೆ. 

ನಾವು ತಲೆ ಬಗ್ಗಿಸದೇ ಇದ್ದಿದ್ದರೆ ಆಸ್ಪತ್ರೆ ಸೇರಿಕೊಳ್ಳಬೇಕಿತ್ತು; ಯಾಕೆ ಹೀಗಂದಿದ್ರು ನಟ ಡಾ ವಿಷ್ಣುವರ್ಧನ್...!?

ನೇಚರ್‌ನ ಸೆಟ್‌ ಥರ ಮಾಡಿಕೊಂಡು ನಮ್ಮ ಸಿನಿಮಾ ಕ್ಯಾಪ್ಚರ್‌ ಮಾಡಿದ್ದೇವೆ ಎನ್ನುವ ನಿರ್ದೇಶಕರು,  ಇಡೀ ಫ್ಯಾಮಿಲಿ ಕುಳಿತುಕೊಂಡು ನಮ್ಮ ಸಿನಿಮಾ ನೋಡಬಹುದು. ಸೆನ್ಸಾರ್‌ ಮಂಡಳಿಯಿಂದ ಕ್ಲೀನ್‌ ʻಯುʼ ಸರ್ಟಿಫಿಕೇಟ್‌ ಸಿಕ್ಕಿದೆ. ಕಂಟೆಂಟ್‌, ಮೇಕಿಂಗ್‌, ಸಾಂಗ್ಸ್‌, ಆರ್ಟಿಸ್ಟ್‌ ಗಳ ಪರ್ಫಾಮೆನ್ಸ್‌ ಎಲ್ಲವೂ ಅದ್ಭುತವಾಗಿದೆ ಎಂದರು. 

'ಬುದ್ದಿವಂತ'ನ ತಲೆಗೆ ಹುಳ ಬಿಡಲು ಹೋಗಿ ಎಡವಟ್ಟು ಮಾಡಿಕೊಂಡ್ರಾ 'ಒಳ್ಳೇ ಹುಡುಗ' ಪ್ರಥಮ್

ನಿರ್ದೇಶಕ ವೆಂಕಟ್‌ ಭಾರದ್ವಾಜ್‌ ಅವರು ಕನ್ನಡ ಚಿತ್ರರಂಗದ ಹೆಸರಾಂತ ಸಾಹಿತಿ ಮತ್ತು ನಿರ್ದೇಶಕರಾಗಿದ್ದ ಸಿ.ವಿ. ಶಿವಶಂಕರ್‌ ಅವ್ರ ಪುತ್ರ. ತಂದೆಯಂತೆ ವೆಂಕಟ್‌ ಭಾರದ್ವಾಜ್‌ ಕೂಡ ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಐಟಿ ಕಂಪೆನಿಗಳಲ್ಲಿ ಸೇಲ್ಸ್‌ ಹೆಡ್‌ ಆಗಿ ಕೆಲಸ ಮಾಡ್ಕೊಂಡು ನೂರಾರು ದೇಶ ಸುತ್ತಿರೋ ಇವರು, ಕೊನೆಗೆ ಸಿನಿಮಾ ಫೀಲ್ಡಿಗೆ ಬಂದಿಳಿದಿದ್ದಾರೆ.

ನಿರೀಕ್ಷೆ ಹುಟ್ಟಿಸಿ ಭರವಸೆ ಹೆಚ್ಚಿಸಿದೆ 'ಮತ್ಸ್ಯಗಂಧ' ಸಿನಿಮಾದ 'ಕಡಲ ಒಡಲ ಮೇಲೆ..' ಹಾಡು ರಿಲೀಸ್ 

'ಎ ಡೇ ಇನ್‌ ದಿ ಸಿಟಿʼ, ʻಬಬ್ಲೂಷʼ, ಕೆಂಪಿರ್ವೆʼ, ʻಆಮ್ಲೆಟ್‌ʼ ಸೇರಿದಂತೆ ಹತ್ತಕ್ಕೂ ಹೆಚ್ಚು ಸಿನಿಮಾಗಳನ್ನು ಡೈರೆಕ್ಟ್‌ ಮಾಡಿದ್ದಾರೆ. ಕೆಂಪಿರ್ವೆ ಚಿತ್ರಕ್ಕಾಗಿ ರಾಜ್ಯಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಇದೀಗ ʻನಗುವಿನ ಹೂಗಳ ಮೇಲೆʼ ಎಂಬ ಪ್ರೇಮಕಥಾಹಂದರವುಳ್ಳ ಸಿನಿಮಾದ ಮೂಲಕ ಪ್ರೇಕ್ಷಕರನ್ನು ಎದುರುಗೊಳ್ಳಲು ಸಜ್ಜಾಗಿದ್ದಾರೆ.

ಶುರುವಾಗ್ತಿದೆ ಐಶ್ವರ್ಯ ಪಿಸ್ಸೆ-ನಾಗಾರ್ಜುನ ಜೋಡಿ 'ಕಸ್ತೂರಿ' ಕಲರವ; ಸೋಮವಾರದಿಂದ ನೋಡಿ ಸ್ಟಾರ್ ಸುವರ್ಣ! 

ʻನಗುವಿನ ಹೂಗಳ ಮೇಲೆʼ ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು ಪ್ರಮೋದ್‌ ಮರವಂತೆ, ಕಬ್ಬಡಿ ನರೇಂದ್ರ ಬಾಬು, ಚಿದಂಬರ ನರೇಂದ್ರ, ಕಿರಣ್‌ನಾಗರಾಜ್‌ ಸಾಹಿತ್ಯ ಗೀಚಿದ್ದಾರೆ. ಲವ್ ಪ್ರಾನ್ ಮೆಹತಾ ಸಂಗೀತ ನಿರ್ದೇಶನ ಸಂಯೋಜಿಸಿದ್ದಾರೆ. ಅಭಿಷೇಕ್ ಅಯ್ಯಂಗಾರ್ ಸಂಭಾಷಣೆ, ಪ್ರಮೋದ್ ಭಾರತಿಯ ಛಾಯಾಗ್ರಹಣ, ಚಂದನ್ ಪಿ ಸಂಕಲನ, ಟೈಗರ್ ಶಿವು ಸಾಹಸ ಚಿತ್ರಕ್ಕಿದೆ. 

'ಸುವರ್ಣ ಸೂಪರ್ ಸ್ಟಾರ್'ಗೆ 1000 ಸಂಚಿಕೆಗಳು; ಸ್ಟಾರ್ ಸುವರ್ಣದಲ್ಲಿ ಮೂರು ಗಂಟೆಗಳ ಮಹಾ ಸಂಭ್ರಮ!

ಟಾಲಿವುಡ್ ನಲ್ಲಿ ಬೆಂಗಾಲ್ ಟೈಗರ್, ಪಂಥಂ, ಬಾಸ್ ಚಿತ್ರಗಳನ್ನು ನಿರ್ಮಾಣ ಮಾಡಿರುವ ಕೆ. ಕೆ.ರಾಧಾ ಮೋಹನ್ ಶ್ರೀ ಸತ್ಯಸಾಯಿ ಆರ್ಟ್ಸ್ ಬ್ಯಾನರ್ ನಡಿ ಈ ಸಿನಿಮಾ ನಿರ್ಮಾಣಗೊಂಡಿದೆ.  ಈ ಸಂಸ್ಥೆಯಿಂದ ತಯಾರಾಗಿರುವ ಕನ್ನಡದ ಮೊದಲ ಸಿನಿಮಾ ಇದಾಗಿದ್ದು, ಇದೇ ಫೆಬ್ರವರಿ 09ರಂದು ಕರುನಾಡಿನಾದ್ಯಂತ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಲಗ್ಗೆ ಇಡ್ತಿದೆ. ನಗುವಿನ ಹೂಗಳ ಮೇಲೆ ಸ್ವಚ್ಚ ಕನ್ನಡದ ಸಿನಿಮಾ, ದಯವಿಟ್ಟು  ಪೈರಸಿ ಮಾಡದೇ ಥಿಯೇಟರ್‌ಗೆ ಬಂದು ನೋಡಿ ಹರಸಿ ಹಾರೈಸಿ ಎಂದು ಕೇಳಿಕೊಳ್ಳುತ್ತೆ ಸಿನಿಮಾ ಟೀಮ್‌.

click me!