
‘ಮುನಿಯನ ಮಾದರಿ’ ಸಿನಿಮಾದ ಟ್ರೇಲರ್ ಹಾಗೂ ಹಾಡುಗಳು ಇತ್ತೀಚೆಗೆ ಬಿಡುಗಡೆಗೊಂಡವು. ಈ ಸಂದರ್ಭ ಮಾತನಾಡಿದ ನಿರ್ದೇಶಕ ಮಹೇಶ್ ಮರಿಯಪ್ಪ, ‘ಪಾವಗಡ ಬರಪೀಡಿತ ಪ್ರದೇಶ. ಅಲ್ಲಿನ ರೈತರ ಸಮಸ್ಯೆಗಳನ್ನು ಹೇಳಲು ಪ್ರಯತ್ನಿಸಿದ್ದೇವೆ. ಮಧುಗಿರಿ ತಾಲೂಕಿನ ನೀರ್ಕಲ್ಲಿನಲ್ಲಿ 28 ದಿನಗಳ ಕಾಲ ಚಿತ್ರೀಕರಣ ನಡೆದಿದೆ’ ಎಂದರು.
ಸೆಪ್ಟೆಂಬರ್ 10 ಚಿತ್ರದ ಟೀಸರ್ ಬಿಡುಗಡೆ; ಆತ್ಮಹತ್ಯೆ ಕುರಿತು ಅರಿವು ಮೂಡಿಸುವ ಚಿತ್ರ!
ಮುಖ್ಯ ಪಾತ್ರದಲ್ಲಿ ನಟಿಸಿರುವ ನಾಗರಾಜ್ ಮಾತನಾಡಿ, ‘ನಾನು ರಂಗಭೂಮಿ ಹಿನ್ನೆಲೆಯಿಂದ ಬಂದವನು. ಈ ಚಿತ್ರದಲ್ಲಿ ನಟನೆಗೆ ಸಾಕಷ್ಟುಅವಕಾಶ ಸಿಕ್ಕಿದೆ. ಬರಪೀಡಿತ, ಅನಕ್ಷರಸ್ಥರೇ ಇರುವ ಹಳ್ಳಿಯಲ್ಲಿ ಒಬ್ಬ ರೈತ ಸ್ವತಂತ್ರವಾಗಿ ಬದುಕಲು ಹೊರಟಾಗ ಏನೆಲ್ಲ ಸಮಸ್ಯೆಗಳಾಗುತ್ತವೆ. ಎದುರಿಸಲಾಗದ ಆ ಸಮಸ್ಯೆಗಳು ಆತನನ್ನು ಹೇಗೆ ನೇಣಿನ ಕುಣಿಕೆಯೊಳಗೆ ನೂಕುತ್ತವೆ ಎಂಬುದನ್ನಿಲ್ಲಿ ಹೇಳಲಾಗಿದೆ’ ಎಂದರು. ರೈತನ ಮಗಳು ಲಕ್ಷ್ಮಿ ಪಾತ್ರದಲ್ಲಿ ಅಭಿನಯಿಸಿದ ಸ್ನೇಹಾ ಶರ್ಮಾ,‘ರೈತನ ಬವಣೆಗಳನ್ನು ವಿವರಿಸುವ ಈ ಚಿತ್ರ ಎಲ್ಲಾ ಕಾಲಕ್ಕೂ ಪ್ರಸ್ತುತ’ ಎಂದರು.
9 ಜನ ನಿರ್ದೇಶಕರು, 12 ಸಿನಿಮಾ; ಹೊಸ ಸಾಹಸಕ್ಕೆ ಜಯವಾಗಲಿ!
ನಿರ್ಮಾಪಕ ಕೆ. ಅಶೋಕ್ ಕುಮಾರ್, ಬಾಲ ನಟ ಮಾಸ್ಟರ್ ಹೇಮಂತ್, ನಿರ್ದೇಶಕ ನಾಗೇಂದ್ರ ಅರಸ್ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭ ಎರಡು ಹಾಡುಗಳ ಬಿಡುಗಡೆಯಾಯಿತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.