9 ಜನ ನಿರ್ದೇಶಕರು, 12 ಸಿನಿಮಾ; ಹೊಸ ಸಾಹಸಕ್ಕೆ ಜಯವಾಗಲಿ!

Kannadaprabha News   | Asianet News
Published : Mar 05, 2021, 09:44 AM IST
9 ಜನ ನಿರ್ದೇಶಕರು, 12 ಸಿನಿಮಾ; ಹೊಸ ಸಾಹಸಕ್ಕೆ ಜಯವಾಗಲಿ!

ಸಾರಾಂಶ

ಹಲವು ಮಂದಿ ಸೇರಿ ಹಣ ಹಾಕಿ ಮಾಡುವ ಕ್ರೌಡ್‌ ಫಂಡಿಂಗ್‌ ಸಿನಿಮಾಗಳನ್ನು ನೋಡಿದ್ದೇವೆ. ಆದರೆ, ಕ್ರೌಡ್‌ ಮೂವಿಗಳನ್ನು ನೋಡಿರೋದು ಕಡಿಮೆ.

ಅಂದರೆ ಒಂದು ತಂಡ ಸೇರಿ ಹತ್ತಾರು ಸಿನಿಮಾಗಳನ್ನು ಮಾಡುವುದು. ಆದರೆ, ಆಗ ಅಂಥದ್ದೊಂದು ಪ್ರಯೋಗ ಆಗುತ್ತಿದೆ. ಇಲ್ಲಿ 9 ಮಂದಿ ನಿರ್ದೇಶಕರು. ಇದ್ದಾರೆ. ಈ ಒಂಭತ್ತು ಮಂದಿಯೂ ಸೇರಿ 12 ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಡಾ ವಿ. ನಾಗೇಂದ್ರ ಪ್ರಸಾದ್‌ ಹಾಗೂ ನಾಗೇಂದ್ರ ಅರಸ್‌ ಹಾಗೂ ನಟಿ ರಾಗಿಣಿ ಆಗಮಿಸಿ 12 ಚಿತ್ರಗಳ ಟೈಟಲ್‌ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿ ಹೊಸಬರ ಈ ಸಾಹಕ್ಕೆ ಶುಭ ಕೋರಿದರು. ಅಂದಹಾಗೆ ಆ ಚಿತ್ರಗಳ ಹೆಸರೇನು?

1. ಲವ್‌ ಯೂ ಚಿನ್ನು

2. ಆಂಡ್ರಾಯ್ಡ್‌ ಫೋನ್‌

3. ಮಂದಾರ

4. ರಕ್ತಾಕ್ಷಿ

5. ದೇವರ ಮಕ್ಕಳು

6. ಪ್ರೇಮಂ ಕಾರಣಂ ಗಚ್ಚಾಮಿ

7. ಡ್ರಗ್‌ ಪೆಡ್ಲರ್‌

8. ಶ್ರೀರಾಮ ಸಿದ್ಧಿ

9. ವ್ಯಾಕ್ಸಿನ್‌

10.ಲಾಕ್‌ಡೌನ್‌

11.ಟಕ್ಕ

12.ಸಂಧ್ಯಾರಾಗ

ಈ ಡೈರೆಕ್ಟರ್‌ ಸರ್ಕಲ್‌ನ ಮುಖ್ಯ ಸಾರಥಿ ಅಜಯ್‌ ಕುಮಾರ್‌ ಎ ಜೆ ಎಂಬುವವರು. ‘ಪ್ರೇಮಂ ಕಾರಣಂ ಗಚ್ಚಾಮಿ’ ಹಾಗೂ ‘ಡ್ರಗ್‌ ಪೆಡ್ಲರ್‌’ ಚಿತ್ರಗಳನ್ನು ನಿರ್ದೇಶನ ಮಾಡುತ್ತಿದ್ದಾರೆ. ತನುಶ್ರೀ ಬಿವಿ, ಡಾ ದೇವನಹಳ್ಳಿ ದೇವರಾಜ್‌, ನವ್ಯ ಶ್ರೀ ಎಸ್‌, ವನಿತ, ಅಶ್ವಿನಿ ಎಕೆ ಹೀಗೆ ಬೇರೆ ಬೇರೆ ನಿರ್ದೇಶಕರು ಇದ್ದಾರೆ. ಆಯಾ ಚಿತ್ರಗಳಿಗೆ ಬೇರೆ ಬೇರೆ ನಿರ್ಮಾಪಕರು ಕೂಡ ಇದ್ದಾರೆ. ಇವರೆಲ್ಲರನ್ನೂ ಒಟ್ಟುಗೂಡಿಸಿ ಒಂದೇ ವೇದಿಕೆಯಲ್ಲಿ 9 ಮಂದಿ ನಿರ್ದೇಶಕರ 12 ಚಿತ್ರಗಳನ್ನು ರೂಪಿಸುತ್ತಿದ್ದಾರೆ ಅಜಯ್‌ ಕುಮಾರ್‌ ಎ ಜೆ. ‘ಕನ್ನಡ ಚಿತ್ರರಂಗದಲ್ಲಿ ಒಂದು ಹೊಸ ಪ್ರಯೋಗ ನಡೆಯುತ್ತಿದೆ. ಇದನ್ನು ಎಲ್ಲರು ಸ್ವಾಗತಿಸಬೇಕು. ತುಂಬಾ ಕನಸುಗಳನ್ನು ಕಟ್ಟಿಕೊಂಡು ಸಿನಿಮಾಗಳನ್ನು ಮಾಡುತ್ತಿದ್ದೇವೆ. ಈಗಿನ ಜನರೇಷನ್‌ಗೆ ತಕ್ಕಂತೆ ಕತೆಗಳನ್ನು ಆಯ್ಕೆ ಮಾಡಿಕೊಂಡು ಸಿನಿಮಾಗಳನ್ನು ಮಾಡುತ್ತಿದ್ದೇವೆ’ ಎಂದರು ಅಜಯ್‌ ಕುಮಾರ್‌ ಎಜೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಒಂದೂ ನೆಗೆಟಿವ್‌ ಕಾಮೆಂಟ್ಸ್‌, ಟ್ರೋಲ್ಸ್‌ ನೋಡಿಲ್ಲ: ಏಕಾಏಕಿ ವಿಡಿಯೋ ಹರಿಬಿಟ್ಟ BBK 12 Winner Gilli Nata
ಕನ್ನಡನಾಡಿನ ಸೊಸೆಯಾಗಿದ್ದ ಈ ಬಾಲಿವುಡ್ ನಟಿಗೆ, ಪಾಕಿಸ್ತಾನ ಸೊಸೆಯಾಗೋ ಆಸೆಯಂತೆ!