ಸೆಪ್ಟೆಂಬರ್‌ 10 ಚಿತ್ರದ ಟೀಸರ್‌ ಬಿಡುಗಡೆ; ಆತ್ಮಹತ್ಯೆ ಕುರಿತು ಅರಿವು ಮೂಡಿಸುವ ಚಿತ್ರ!

By Kannadaprabha NewsFirst Published Mar 5, 2021, 9:40 AM IST
Highlights

‘ಈ ಸಿನಿಮಾದಲ್ಲಿ ಗ್ಲಾಮರ್‌ ಇಲ್ಲ, ಆ್ಯಕ್ಷನ್‌ ಇಲ್ಲ. ಹೀಗಾಗಿ ಕಮರ್ಷಿಯಲ್‌ ಚಿತ್ರ ಅಲ್ಲ. ಆದರೆ ಒಬ್ಬರ ಬದುಕನ್ನೇ ಬದಲಿಸಬಲ್ಲಂಥಾ ಗಟ್ಟಿಸಂದೇಶವಿದೆ’ ಅಂದರು ಓಂ ಸಾಯಿಪ್ರಕಾಶ್‌.

ಸೆಪ್ಟೆಂಬರ್‌ 10 ಚಿತ್ರದ ಟೀಸರ್‌ ಲಾಂಚ್‌ ಕಾರ್ಯಕ್ರಮದಲ್ಲಿ ಕಲಾವಿದರ ದೊಡ್ಡ ಹಿಂಡಿನ ಮಧ್ಯೆ ಕೂತು ಸಿನಿಮಾ ಬಗ್ಗೆ, ಆ ಸಿನಿಮಾ ಮಾಡುತ್ತಿರುವ ಕಾರಣಗಳ ಬಗ್ಗೆ ಸಾಯಿಪ್ರಕಾಶ್‌ ಮಾತನಾಡುತ್ತಿದ್ದರು.

ಸಂದೇಶ ಇಲ್ಲ, ಮಜಾ ಸಿನಿಮಾ ಹೀರೋ: ರಿಷಬ್‌ ಶೆಟ್ಟಿ 

‘ಕಾರ್ಗಿಲ್‌ ಯುದ್ಧದಲ್ಲಿ ಭಾಗವಹಿಸಿದ ಗ್ರೂಪ್‌ ಕ್ಯಾಪ್ಟನ್‌ ಜಿ.ಜೆ. ರಾವ್‌ ಪುಸ್ತಕ ಆಧರಿಸಿ ಮಾಡಿದ ಸಿನಿಮಾವಿದು. ಶಶಿಕುಮಾರ್‌ ಮನಃಶಾಸ್ತ್ರಜ್ಞರಾಗಿ ಕಾಣಿಸಿಕೊಂಡಿದ್ದಾರೆ. ಅವರಲ್ಲಿಗೆ ಆತ್ಮಹತ್ಯೆ ಮನಸ್ಥಿತಿಯಲ್ಲಿ ಬರುವ ವ್ಯಕ್ತಿಗಳ ಕತೆಯನ್ನು ಇಲ್ಲಿ ನಿರೂಪಿಸಲಾಗಿದೆ. ಚಿತ್ರದಲ್ಲಿ ಒಟ್ಟು ಏಳು ಕಥೆಗಳಿವೆ. ಆರು ಕತೆಗಳು ಎಲ್ಲಾ ಇದ್ದೂ ಆತ್ಮಹತ್ಯೆಗೆ ಪ್ರಯತ್ನಿಸುವವರದು, ಒಂದು ಮಾತ್ರ ಅಂಗವೈಕಲ್ಯ ಇದ್ದರೂ ಸರ್ಕಾರಿ ಸವಲತ್ತುಗಳನ್ನೆಲ್ಲ ಬಳಸಿ ನೆಮ್ಮದಿಯಿಂದ ಬದುಕುವ ವ್ಯಕ್ತಿಯ ಕತೆ’ ಎಂದರು ಸಾಯಿಪ್ರಕಾಶ್‌.

"

ಈ ಚಿತ್ರದ ನಿರ್ಮಾಣ, ಕತೆ, ನಿರ್ದೇಶನದ ಹೊಣೆಗಾರಿಕೆ ಓಂ ಸಾಯಿಪ್ರಕಾಶ್‌ ಮೇಲಿದೆ. ಶಶಿಕುಮಾರ್‌, ಶ್ರೀನಿವಾಸ ಮೂರ್ತಿ, ಶಿವ ಕುಮಾರ್‌, ರಮೇಶ್‌ ಭಟ್‌, ಸಿಹಿಕಹಿ ತಾರಾಗಣದಲ್ಲಿದ್ದಾರೆ. ಜೆಜಿ ಕೃಷ್ಣ ಛಾಯಾಗ್ರಹಣ, ಡಾ. ವಿ ನಾಗೇಂದ್ರ ಪ್ರಸಾದ್‌ ಸಾಹಿತ್ಯ, ಸಂಗೀತವಿದೆ.

click me!