* ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಯಶ್
* ‘ಕೆಜಿಎಫ್ 2’ ರಿಲೀಸ್‌ಗೆ ಡೇಟ್ ಫಿಕ್ಸ್
ನಟ ಯಶ್ (Yash) ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಅವರ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ‘ಕೆಜಿಎಫ್ 2’ (KGF Chapter 2) ಸಿನಿಮಾಗಾಗಿ ಕಾದು ಕುಳಿತಿರುವ ಪ್ರೇಕ್ಷಕರಿಗೆ ಹಾಗೂ ಅಭಿಮಾನಿಗಳಿಗೆ ಗುಡ್ ನ್ಯೂಸ್ ಇಲ್ಲಿದೆ.
ಸಿನಿಮಾ ರಿಲೀಸ್ ವಿಚಾರದಲ್ಲಿ ಅಭಿಮಾನಿಗಳಿಗೆ ಪದೇಪದೇ ನಿರಾಸೆ ಆಗುತ್ತಲೇ ಇತ್ತು. ಇದೀಗ ಕೆಜಿಎಫ್ 2 ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಇದೇ ಏಪ್ರಿಲ್ 14 ಕ್ಕೆ ಕೆಜಿಎಫ್ 2 ವಿಶ್ವದಾದ್ಯಂತ ತೆರೆಗೆ ಅಪ್ಪಳಿಸಲಿದೆ.
ಕನ್ನಡ, ತೆಲುಗು, ತಮಿಳು, ಹಿಂದಿ , ಮಲಯಾಳಂ ಅಲ್ಲದೆ ಇಂಗ್ಲಿಷ್ ನಲ್ಲೂ ಬಿಡುಗಡೆಯಾಗಲಿದೆ . ಹೀಗೊಂದು ಸುದ್ದಿಯನ್ನು ಹೊಂಬಾಳೆ ಫಿಲ್ಮ್ ಎನ್ನುವ ಟ್ವಿಟ್ಟರ್ ಖಾತೆಯಿಂದ ಹೊರಬಿದ್ದಿದೆ. ಆದ್ರೆ, ಆ ಟ್ವಿಟ್ಟರ್ ಖಾತೆ ವೇರಿಫೈಡ್ ಅಲ್ಲ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗೊಂದಲವಾಗಿದ್ದು, ಈ ಬಗ್ಗೆ ಚಿತ್ರತಂಡ ಸ್ಪಷ್ಟನೆ ನೀಡಿದ ಬಳಿಕವಷ್ಟೇ ಎಲ್ಲಾ ಗೊಂದಲಗಳಿಗೆ ತೆರೆ ಬೀಳಲಿದೆ.
ಯಶ್ KGF 2 ಚಿತ್ರದಲ್ಲಿ ಸುಧಾರಾಣಿ ಮತ್ತು ಶ್ರುತಿ?
RISE OF ROCKY In Theaters
14 APRIL 2022 Worldwide in KANNADA ENGLISH TELUGU HINDI
TAMIL MALAYALAM pic.twitter.com/rI0a3FQngr
ನಟ ಯಶ್ (Yash) ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಅವರ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ‘ಕೆಜಿಎಫ್ 2’ (KGF Chapter 2) ಸಿನಿಮಾಗಾಗಿ ದೊಡ್ಡ ಪ್ರೇಕ್ಷಕ ವರ್ಗ ಕಾದು ಕೂತಿದೆ. ಸಿನಿಮಾ ರಿಲೀಸ್ ವಿಚಾರದಲ್ಲಿ ಅಭಿಮಾನಿಗಳಿಗೆ ಪದೇಪದೇ ನಿರಾಸೆ ಆಗುತ್ತಲೇ ಇತ್ತು. ಇದಕ್ಕೆ ನೇರ ಕಾರಣ ಕೊರೋನಾ ವೈರಸ್ ಕಾರಣವಾಗಿತ್ತು.
ಇದೀಗ ಕೊರೋನಾ ಎರಡನೇ ಅಲೆ ನಿಧಾನವಾಗಿ ಕಡಿಮೆಯಾಗುತ್ತಿದ್ದಂತೆಯೇ ಕೆಜಿಎಫ್-2 ಚಿತ್ರ ಬಿಡುಗಡೆಗೆ ಮುಹೂರ್ತ ಫಿಕ್ಸ್ ಮಾಡಲಾಗಿದೆ. ಇದರಿಂದ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಕೆಜಿಎಫ್ 2’ ಪ್ಯಾನ್ ಇಂಡಿಯಾ ಸಿನಿಮಾ. ಕೆಜಿಎಫ್ ಸಿನಿಮಾ ಬಾಲಿವುಡ್ ಹಾಗೂ ಟಾಲಿವುಡ್ನಲ್ಲೂ ದೊಡ್ಡ ಮಟ್ಟದ ಹವಾ ಮಾಡಿದೆ. ಈ ಕಾರಣಕ್ಕೆ ‘ಕೆಜಿಎಫ್ 2’ ಸಿನಿಮಾ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಇನ್ನು, ಪಾತ್ರವರ್ಗದಲ್ಲಿ ಬಾಲಿವುಡ್ನ ಖ್ಯಾತ ನಟರು ಕೂಡ ಇದ್ದಾರೆ.