
ಸ್ಯಾಂಡಲ್‌ವುಡ್ (Sandalwood) ಸಿಂಪಲ್ ಹುಡುಗಿ ಅದಿತಿ ಪ್ರಭುದೇವ (Aditi Prabhudeva) ನಟಿಸಿರುವ ತೋತಾಪುರಿ (Totapuri) ಚಿತ್ರದ ಬಾಗ್ಲು ತೆಗೆ ಮೇರಿ ಜಾನ್ ಚಿತ್ರದ ಹಾಡು ಸೂಪರ್ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಚೆಲುವೆ ಯುಟ್ಯೂಬ್ ಚಾನೆಲ್ ತೆರೆದು, 1 ಲಕ್ಷ 60 ಸಾವಿರ ಫಾಲೋವರ್ಸ್ ಅನ್ನು ಪಡೆದುಕೊಂಡಿದ್ದಾರೆ.ಸಿನಿಮಾದಲ್ಲಿಯೂ ದುಡ್ಡು, ಯುಟ್ಯೂನ್‌ನಿಂದಲ್ಲೂ ದುಡ್ಡು ಎಂದು ಕಾಮೆಂಟ್ ಮಾಡುತ್ತಿರುವ ನೆಟ್ಟಿಗರಿಗೆ ಅದಿತಿ ಉತ್ತರ ಕೊಟ್ಟಿದ್ದಾರೆ.
ತೋತಾಪುರಿ ಹಾಡು:
'ಜಗ್ಗೇಶ್ (Jaggesh) ಸರ್ ಜೊತೆ ಸ್ಕ್ರೀನ್ ಶೇರ್ ಮಾಡಿರುವುದು ನನ್ನ ಭಾಗ್ಯ. ಶೂಟಿಂಗ್ ಸೆಟ್‌ನಲ್ಲಿ ನಕ್ಕು ನಕ್ಕು ಸಾಕಾಗಿತ್ತು. ಸಿನಿಮಾದಲ್ಲಿ ಒಂದು ಸ್ಟ್ರಾಂಗ್ ಮೆಸೇಜ್ ಇದೆ ಪ್ರತಿಯೊಬ್ಬರಿಗೂ ಈ ಸಿನಿಮಾ ಇಷ್ಟ ಆಗುತ್ತೆ,' ಎಂದು ಖಾಸಗಿ ಮಾಧ್ಯಮ ಸಂದರ್ಶನವೊಂದರಲ್ಲಿ ತೋತಾಪುರಿ ಚಿತ್ರದ ಬಗ್ಗೆ ಅದಿತಿ ಮಾತನಾಡಿದ್ದಾರೆ.
ಯುಟ್ಯೂಬ್ ಸಂಭಾವನೆ:
'ಯುಟ್ಯೂಬ್‌ನಿಂದ (Youtube channel) ಏನು ಜಾಸ್ತಿ ದುಡ್ಡು ಮಾಡ್ತಿಲ್ಲ. ಹಣಕ್ಕಿಂತ ನನಗೆ self satisfaction ಜಾಸ್ತಿ ಇದೆ. ಯುಟ್ಯೂಬ್‌ನಿಂದ ನನಗೆ 40 ಸಾವಿರ ಬರ್ತಿದೆ ಅಂದ್ರೂ ಅದು ನನ್ನ ಮನೆಗೆ ಬೇಕಾದ ಸಣ್ಣ ಪುಟ್ಟ ಖರ್ಚು, ನನ್ನ ಟಿವಿ EMI ಕಟ್ಟುತ್ತಿರುವೆ. ನಾನು ಬಳಸುವಂಥ ವಸ್ತುಗಳ ಜೊತೆ ಕೋಲಾಬೋರೇಷನ್ (Collaboration) ಮಾಡಿಕೊಂಡಿರುವುದರಿಂದ ಸ್ವಲ್ಪ ಹಣ ಬರುತ್ತೆ. ಅವರು ಕಳುಹಿಸಿರುವ ವಸ್ತುಗಳನ್ನು ಎರಡು ತಿಂಗಳು ಬಳಸುವೆ. ಆಮೇಲೆ ಸರಿ ಓಕೆ ಆದ್ಮೇಲೆ ನಾನು ಜನರಿಗೆ ಹೇಳುವುದು. ಆರಾಮ್ ಆಗಿ ಒಂದು ಸಂಸಾರ ನಡೆಸುವಷ್ಟು ಹಣ ಮಾಡ್ತಿದ್ದೀನಿ,' ಎಂದು ಅದಿತಿ ಹೇಳಿದ್ದಾರೆ.
'ಮುಖ್ಯವಾಗಿ ನಾನು ಜನರಿಗೆ ಧನ್ಯವಾದಗಳನ್ನು ಹೇಳಬೇಕು. ಸಿನಿಮಾದಲ್ಲಿ ನನ್ನ ನೋಡಿ ಈ ಬಣ್ಣದ ಚಿಟ್ಟೆ ಇಷ್ಟ ಪಡುವುದು ಬೇರೆ. ನಾರ್ಮಲ್ ಹುಡುಗಿ ಅಗಿ ಮನೆಯಲ್ಲಿ ಕಸ ಗುಡಿಸುವುದು, ನೆಲೆ ಒರೆಸುವುದು ಈ ತರ ನಾರ್ಮಲ್ ಆಗಿದ್ದೀನಿ ಅಂದ್ರೂ ಕೂಡ ನನ್ನ ಇಷ್ಟ ಪಡುತ್ತಾರೆ. ಅದು ನಿಜವಾದ ಪ್ರೀತಿ. ನಾನು ಕಾಮೆಂಟ್ಸ್ ನೋಡಿದಾಗ ಖುಷಿ ಪಡ್ತೀನಿ. ನಾನು ತುಂಬಾನೇ ಎಮೋಷನಲ್ ವ್ಯಕ್ತಿ (Emotional Person) ನಾನು. ನನಗೆ ನೆಗೆಟಿವ್ ಕಾಮೆಂಟ್ಸ್ ಅನ್ನೋದೆ ಬರೊಲ್ಲ. ಸಾಕಪ್ಪ ಸಾಕು, ಎನ್ನೇನು ಕೇಳಲಿ ದೇವರ ಬಳಿ? ಮಾಮೂಲಿ ಹುಡುಗಿ ನಾನು. ಯಾರೂ ಪ್ರೀತಿಯ ಭಿಕ್ಷೆ ಕೊಡುವುದಿಲ್ಲ. ಆದರೆ ನನ್ನಿಂದ ಏನೂ ಉಪಯೋಗವಿಲ್ಲ ಅಂದರೂ ತುಂಬಾನೇ ಪ್ರೀತಿ ಕೊಟ್ಟಿದ್ದಾರೆ,' ಎಂದಿದ್ದಾರೆ ಅದಿತಿ.
ಏನರ್ಜಿ ಹಿಂದಿರುವ ರಹಸ್ಯ:
'ನಾನು ಹೇಗೆ ಇಷ್ಟು ಪಾಸಿಟಿವ್ ಆಗಿ ಇರ್ತೀನಿ ಅಂತ ನನಗೇ ಗೊತ್ತಿಲ್ಲ. ಒಂದೊಂದು ಸಲ ಹೊಟ್ಟೆಯಲ್ಲಿ ಬೆಂಕಿ ಉರಿತಿರುತ್ತೆ. ಜೀವನ ಸಾಕಪ್ಪ, ಏನಿದು ನೋವು ಅನ್ನೋಷ್ಟು ನೋವು ಇರುತ್ತೆ. ಆದರೆ ತೋರಿಸಿಕೊಳ್ಳುವುದಕ್ಕೆ ಆಗೋಲ್ಲ. ಯಾಕೆ ಅಂತ ಗೊತ್ತಿಲ್ಲ. ಇರುವಷ್ಟು ದಿನ ಖುಷಿ ಆಗಿ ಇರಬೇಕು. ನನಗೆ ಸಮಯ ವ್ಯರ್ಥ ಮಾಡುವುದಕ್ಕೆ ಇಷ್ಟ ಇಲ್ಲ. ದೇವರು ನಮಗೆ ಕೊಟ್ಟಿರುವಷ್ಟು ಬೇರೆ, ಅವರಿಗೆ ಇರುವುದು ಅದನ್ನು ಬಳಸಿಕೊಂಡು ಆನಂತರ ನಮ್ಮ ಕೈಯಿಂದ ಆದಷ್ಟು ಬೇರೆ ಯವರಿಗೆ ಸಹಾಯ ಮಾಡಬೇಕು ಅನ್ನುವ ಮನಸ್ಸಿದೆ' ಎಂದು ಅದಿತಿ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.