
ಸುಕನ್ಯಾ ಎನ್.ಆರ್
ಆಳ್ವಾಸ್ ಕಾಲೇಜು ಮೂಡುಬಿದಿರೆ
ಜನವರಿ 3 ರಂದು ಆನಂದ ಆಡಿಯೋ ಮೂಲಕ ಈ ಚಿತ್ರದ ಶೀರ್ಷಿಕೆಯ ಆಡಿಯೋಗೆ ಧ್ವನಿಯಾಗಿದ್ದ ನಮ್ಮ ಕರುನಾಡ ಯುವರತ್ನ ಪುನೀತ್ ರಾಜಕುಮಾರ್ 'ಹರೀಶ ವಯಸ್ಸು 36 ಆದ್ರೆ ಮದುವೆ ಆಗಿಲ್ಲ ಅಂತ ಬೇಜಾರು' ಎಂದು ಹಾಡುವುದರ ಮೂಲಕ ಧ್ರುವ ನಕ್ಷತ್ರನಾಗಿ ಹರೀಶನ ತಂಡಕ್ಕೆ ಸದಾ ಶಕ್ತಿಯಾಗಿದ್ದಾರೆ.
ಶಿರಡಿ ಸಾಯಿ ಬಾಲಾಜಿ ಫಿಲಂ ಬ್ಯಾನರ್ ನ ಅಡಿಯಲ್ಲಿ ನಿರ್ಮಾಣವಾಗಿರುವ ಹರೀಶ ವಯಸ್ಸು 36 ಸಿನಿಮಾದ ನಿರ್ದೇಶಕ ಗುರುರಾಜ್ ಜೇಷ್ಠ ಕಥೆ,ಚಿತ್ರಕಥೆ ಬರೆದು ಈ ಸಿನಿಮಾವನ್ನು ಮೊದಲ ಬಾರಿಗೆ ನಿರ್ದೇಶನ ಮಾಡಿದ್ದು,ಮಾರ್ಚ್ 4 ರಂದು ಬಿಡುಗಡೆಗೆ ಸಿದ್ಧವಾಗಿದೆ.
ಹರೀಶ ವಯಸ್ಸು 36 ಚಿತ್ರದ ಟ್ರೈಲರ್ ಪ್ರೇಕ್ಷಕರ ಕುತೂಹಲಕ್ಕೆ ಕಾರಣವಾಗಿದೆ. ಚಿತ್ರದ ಟ್ರೈಲರ್ ಹೇಳುವ ಕಥೆ ಸಿನಿ ಪ್ರೇಕ್ಷಕರನ್ನು ಕಾತುರದಿಂದ ಕಾಯುವಂತೆ ಮಾಡಿದೆ 36 ರ ಹರೆಯದ ಇಳಿತಾರುಣ್ಯದಲ್ಲಿರುವ ವ್ಯಕ್ತಿ 'ಹರೀಶ ' ಮದುವೆಯಾಗಲು ಹೊರಟಾಗ ಸಮಾಜದಲ್ಲಿ ನಡೆಯುವ ಹಲವಾರು ಪ್ರಸಂಗಗಳನ್ನು ಈ ಚಿತ್ರಕಥೆ ಹಾಸ್ಯಮಯವಾಗಿ ಜನರಿಗೆ ನೈಜ್ಯ ಸಂದೇಶವನ್ನು ತಲುಪಿಸುವ ಉದ್ದೇಶದಿಂದ ಬಿಡುಗಡೆಗೆ ಸಜ್ಜಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಅನೇಕ ಯುವ ಪ್ರತಿಭಾ ಕಲಾವಿದರೂಳಗೊಂಡಿದ್ದು, ಸಂಪೂರ್ಣ ಚಿತ್ರವನ್ನು ಕರಾವಳಿಯ ಅಸು_ಪಾಸಿನಲ್ಲಿ ಚಿತ್ರಿಸಲಾಗಿದೆ. 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು'ಚಿತ್ರದಲ್ಲಿ ಜೋಸೆಫ್ ಮಾಸ್ಟರ್ ಪಾತ್ರದಲ್ಲಿ ಮಿಂಚಿದ ರಂಗಭೂಮಿ ಕಲಾವಿದ ಕಾಸರಗೋಡಿನ ಯೋಗೇಶ್ ಶೆಟ್ಟಿ ಈ ಚಿತ್ರದ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ. ನಾಯಕಿ ಪಾತ್ರದಲ್ಲಿ ಶ್ವೇತಾ ಅರೆಹೊಳೆ ನಟಿಸಿದ್ದಾರೆ.
ಲಕ್ಷ್ಮಿಕಾಂತ್ ರಾವ್, ತ್ರಿಲೋಕ,ಹಾಗೂ ಚಕ್ರಧರ್ ರೆಡ್ಡಿಯವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.ಲಕ್ಷ್ಮಿಕಾಂತ್ ಅವರು ಈ ಸಿನಿಮಾದ ನಿರ್ಮಾಪಕರು. ಕರಾವಳಿ ಜನರ ಜೀವನ ಶೈಲಿ, ಆಡುಭಾಷೆ,ಸಂಸ್ಕೃತಿ,ಹಾಗೂ ಆಹಾರ ಪದ್ಧತಿ ಹೀಗೆ ಅನೇಕ ವಿಚಾರಗಳನ್ನು ಹರೀಶ ವಯಸ್ಸು 36 ಸಿನಿಮಾ ಮೂಲಕ ಕಾಣಬಹುದು ಮೋಹನ್ ಪಡ್ರೆ ಛಾಯಾಗ್ರಹಣ ಮಾಡಿರುತ್ತಾರೆ. ಧರ್ಮಸ್ಥಳದ ಬಳಿ ಇರುವ 150 ವರ್ಷಗಳ ಹಳೆಯ ಗುತ್ತು ಮನೆಯಲ್ಲಿ ಚಿತ್ರೀಕರಣ ನಡೆದಿದೆ ಎಂದು ನಿರ್ದೇಶಕ ಗುರುರಾಜ್ ಹೇಳಿದ್ದಾರೆ.
ಈ ಚಿತ್ರದಲ್ಲಿ ಮಧ್ಯವಯಸ್ಸಿನ ಹುಡುಗನ ಮದುವೆ ಪ್ರಹಸನವನ್ನು ಹಾಸ್ಯದ ರೂಪದಲ್ಲಿ ತೆರೆಯ ಮೇಲೆ ತರಲಿದ್ದು,ಹಾಸ್ಯ ಪ್ರಿಯರುರನ್ನು ಹಾಗೂ ಚಿತ್ರಭಿಮನಿಗಳನ್ನು ರಂಜಿಸಲು ತಯಾರಾಗುತ್ತಾ,ಎಲ್ಲಾ ಕಲಾ ಪ್ರೇಮಿಗಳು ನಮ್ಮ ಚಿತ್ರ ತಂಡಕ್ಕೆ ಪ್ರೀತಿಯಿಂದ ಶುಭ ಹರಿಸಿ ತಂಡವನ್ನು ಪ್ರೋತ್ಸಾಹಿಸುವಂತೆ ಚಿತ್ರದ ನಿರ್ದೇಶಕರಾದ ಗುರುರಾಜ್ ಹೇಳಿದ್ದಾರೆ.
ಚಿತ್ರದ ತಾರಾಗಣದಲ್ಲಿ ರೋಹಿಣಿ ಜಗರಮ್,ಪ್ರಕಾಶ್ ತುಮಿನಾಡ್, ರಕ್ಷಣ್ ಮಾಡೂರು,ಶೋಭಾ ಶೆಟ್ಟಿ,ಮಂಜುಳಾ ಜನಾರ್ದನ್ , ರಮೇಶ್ ರೈ ಕುಕ್ಕುವಳ್ಳಿ ,ಉಮೇಶ್ ಮಿಜಾರ್ ಮುಂತಾದ ತಾರ ಬಳಗದ ಸತತ ಪ್ರಯತ್ನಕ್ಕೆ ತಕ್ಕ ಪ್ರತಿಫಲ ದೊರೆಯುವುದರಲ್ಲಿ ಅನುಮಾನವೇ ಇಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.