ಹರಿಪ್ರಿಯಾ ಅಭಿನಯದ 'ಅಮೃತಮತಿ' ಸಿನಿಮಾ ಆಸ್ಟ್ರಿಯಾ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆ!

By Suvarna News  |  First Published Jun 25, 2020, 5:19 PM IST

ಬರಗೂರು ರಾಮಚಂದ್ರಪ್ಪನವರ ನಿರ್ದೇಶನದ ಚಿತ್ರ 'ಅಮೃತಮತಿ' ಆಸ್ಟ್ರಿಯಾ ದೇಶದ ಅಂತರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.


ಸ್ಯಾಂಡಲ್‌ವುಡ್‌ ಮುದ್ದು ಮುಖದ ನಟಿ ಹರಿಪ್ರಿಯಾ ಅಭಿನಯದ 'ಅಮೃತಮತಿ' ಸಿನಿಮಾ ಆಸ್ಟ್ರೀಯಾ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಕೊರೋನಾ ಲಾಕ್‌ಡೌನ್‌ ಸಂಕಷ್ಟ ಇರುವ ಕಾರಣ ಸಿನಿಮಾವನ್ನು ಜುಲೈ 22ರಿಂದ ಆಗಸ್ಟ್‌ 5ರ ವರೆಗೆ ಆನ್‌ಲೈನ್‌ಲ್ಲಿ ಸ್ಕ್ರೀನಿಂಗ್ ಮಾಡಲಾಗುತ್ತದೆ. ಹೀಗೆ ಆನ್‌ಲೈನ್‌ನಲ್ಲಿ ಸ್ಕ್ರೀನ್‌ ಆಗುವ ಸಿನಿಮಾಗಳು ಸ್ಪರ್ಧಾಕಣದಲ್ಲೂ ಇದ್ದು ಫಲಿತಾಂಶವನ್ನು ಪ್ರಕಟಿಸಿ ವಿಶೇಷ ಸಮಾರಂಭವನ್ನು ಆಯೋಜಿಸಲಾಗುತ್ತದೆ. 

Tap to resize

Latest Videos

undefined

'ಅಮೃತಮತಿ'ಯೂ 13ನೇ ಶತಮಾನದ ಕವಿ ಜನ್ನ ರಚಿಸಿದ 'ಯಶೋಧರ ಚರಿತೆ' ಕಾವ್ಯವನ್ನು ಆಧರಿಸಿದೆ. ಖ್ಯಾತ ಸಾಹಿತಿ, ನಿರ್ದೇಶಕ ಬರಗೂರು ರಾಮಚಂದ್ರಪ್ಪ ನಿರ್ದೇಶನದಲ್ಲಿ ಮೂಡಿಬಂದಿರುವ  'ಅಮೃತಮತಿ'ಯಲ್ಲಿ ನಟಿ ಹರಿಪ್ರಿಯಾ ಅಮೃತಮತಿಯಾಗಿ, ನಟಿ ಕಿಶೋರ್‌ ಯಶೋಧರನಾಗಿ  ಅಭಿನಯಿಸಿದ್ದಾರೆ. 

'ಅಮೃತಮತಿ' ಹರಿಪ್ರಿಯಾಗೆ ಯಶೋಧರನಾದ ಕಿಶೋರ್! 

ನಟಿ ಹರಿಪ್ರಿಯಾ ಅವರು 'ನೋಯ್ಡಾ ವಿಶ್ವ ಚಿತ್ರೋತ್ಸವ'ದಲ್ಲಿ ಈ ಪಾತ್ರಾಭಿನಯಕ್ಕೆ 'ಶ್ರೇಷ್ಟ ನಟಿ' ಪ್ರಶಸ್ತಿ ಪಡೆದುಕೊಂಡಿದ್ದರು. ಚಿತ್ರದಲ್ಲಿ ಸುಂದರ್ ರಾಜ್‌, ಪ್ರಮಿಳಾ ಜೋಷಾಯ್, ತಿಲಕ್ ಸುಪ್ರಿಯಾರಾವ್, ವತ್ಸಲಾ ಮೋಹನ್, ಅಂಬರೀಶ್‌ ಸಾರಂಗಿ, ಭೂಮಿಕಾ ಲಕ್ಷ್ಮೀನಾರಾಯಣ್‌ ಅಭಿನಯಿಸಿದ್ದಾರೆ. ಸುರೇಶ್‌ ಅರಸು ಸಂಕಲನ, ನಾಗರಾಜು ಆದವಾನಿ ಛಾಯಾಗ್ರಹಣ ಹಾಗೂ ಗಾಯಕಿ ಶಮಿತಾ ಮಲ್ನಾಡ್‌ ಸಂಗೀತ ನಿರ್ದೇಶನವಿದೆ.

click me!