DilPasand: ಬೋಲ್ಡ್‌ ಲುಕ್‌ನಲ್ಲಿ ಡಾರ್ಲಿಂಗ್ ಕೃಷ್ಣ-ನಿಶ್ವಿಕಾ ಜೋಡಿ

Suvarna News   | Asianet News
Published : Nov 25, 2021, 03:58 PM IST
DilPasand: ಬೋಲ್ಡ್‌ ಲುಕ್‌ನಲ್ಲಿ ಡಾರ್ಲಿಂಗ್ ಕೃಷ್ಣ-ನಿಶ್ವಿಕಾ ಜೋಡಿ

ಸಾರಾಂಶ

ರಶ್ಮಿ ಫಿಲಂಸ್ ಲಾಂಛನದಲ್ಲಿ ಸುಮಂತ್ ಕ್ರಾಂತಿ ಅವರು ನಿರ್ಮಿಸುತ್ತಿರುವ ದಿಲ್ ಪಸಂದ್ ಚಿತ್ರದ​ ಫಸ್ಟ್​ಲುಕ್​ ಬಿಡುಗಡೆಯಾಗಿದ್ದು, ಡಾರ್ಲಿಂಗ್ ಕೃಷ್ಣ ಹಾಗೂ ನಿಶ್ವಿಕಾ ನಾಯ್ಡು ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ‌. 

'ಲವ್‌ ಮಾಕ್ಟೇಲ್‌' (Love Mocktail) ಚಿತ್ರದ ಯಶಸ್ಸಿನ ನಂತರ ಡಾರ್ಲಿಂಗ್ ಕೃಷ್ಣ (Darling Krishna) ಸ್ಯಾಂಡಲ್‌ವುಡ್‌ನಲ್ಲಿ ಸಖತ್ ಬ್ಯುಸಿಯಾಗಿದ್ದು, ಸಾಲು ಸಾಲು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಈಗಾಗಲೇ ಶುಗರ್​ ಫ್ಯಾಕ್ಟರಿ,‌ ಲವ್ ಮಾಕ್ಟೇಲ್ 2 ಸಿನಿಮಾಗಳಲ್ಲಿ ಕೃಷ್ಣ ತೊಡಗಿದ್ದು, ಅವರ ಇನ್ನೊಂದು ಚಿತ್ರ 'ದಿಲ್​ ಪಸಂದ್​' (DilPasand) ಫಸ್ಟ್​ಲುಕ್ (FirstLook)​ ಬಿಡುಗಡೆಯಾಗಿದೆ. ಹೌದು! ಡಾರ್ಲಿಂಗ್ ಕೃಷ್ಣ, ರಶ್ಮಿ ಫಿಲಂಸ್ (Rashmi Films) ಲಾಂಛನದಲ್ಲಿ ಸುಮಂತ್ ಕ್ರಾಂತಿ (Sumant Kranthi) ಅವರು ನಿರ್ಮಿಸುತ್ತಿರುವ 'ದಿಲ್ ಪಸಂದ್' ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇತ್ತೀಚೆಗೆ ಚಿತ್ರದ ರೊಮ್ಯಾಂಟಿಕ್ ಪೋಸ್ಟರ್ ಬಿಡುಗಡೆಯಾಗಿದೆ.

ಈ ಪೋಸ್ಟರ್‌ನಲ್ಲಿ ಡಾರ್ಲಿಂಗ್ ಕೃಷ್ಣ ಹಾಗೂ ನಿಶ್ವಿಕಾ ನಾಯ್ಡು (Nishvika Naidu) ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ‌.  'ಮಳೆ', 'ಧೈರ್ಯಂ' ಚಿತ್ರವನ್ನು ನಿರ್ದೇಶಿಸಿದ್ದ ಶಿವ ತೇಜಸ್ (Shiva Tejas) ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಇದೊಂದು ತ್ರಿಕೋನ ಲವ್ ಸ್ಟೋರಿ ಸಿನಿಮಾ. ಈ ಚಿತ್ರದಲ್ಲಿ ಕೃಷ್ಣನಿಗೆ ನಿಶ್ವಿಕಾ ನಾಯ್ಡು ಜೊತೆ ಮತ್ತೊಬ್ಬ ನಟಿ ಮೇಘಾ ಶೆಟ್ಟಿ (Megha Shetty) ಕೂಡ ಜೋಡಿಯಾಗಿದ್ದಾರೆ. ಈ ಹಿಂದೆ ಈ ಸಿನಿಮಾ ಕಾರ್ಯಕ್ರಮಕ್ಕೆ ಮೊದಲ ಬಾರಿಗೆ ಪೊಲೀಸ್​ ಅಧಿಕಾರಿ ರವಿ ಡಿ. ಚನ್ನಣ್ಣನವರ್ (Ravi D.Channannavar) ಆಗಮಿಸಿ ಸಿನಿಮಾದ ಟೈಟಲ್ ಅನ್ನು ಅನಾವರಣಗೊಳಿಸಿದ್ದರು.

'ಲವ್ ಮಾಕ್ಟೇಲ್ 2' ಚಿತ್ರಕ್ಕೆ ಸೆನ್ಸಾರ್‌ನಿಂದ ಯು ಸರ್ಟಿಫೀಕೆಟ್

ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದ್ದು, ಡಿಸೆಂಬರ್ ಮೊದಲ ವಾರದಲ್ಲಿ 2ನೇ ಹಂತದ ‌ಚಿತ್ರೀಕರಣ‌ ಶುರುವಾಗಲಿದೆ. ಹಾಡುಗಳಿಗೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ (Arjun Janya) ಸಂಗೀತ ನೀಡುತ್ತಿದ್ದು, ಶೇಖರ್ ಚಂದ್ರ ಛಾಯಾಗ್ರಹಣ ಮಾಡುತ್ತಿದ್ದಾರೆ. ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನ ಚಿತ್ರಕ್ಕಿದೆ. 'ದಿಲ್ ಪಸಂದ್' ರೊಮ್ಯಾಂಟಿಕ್ ಕಾಮಿಡಿ ಚಿತ್ರವಾಗಿದ್ದು ಸಾಧುಕೋಕಿಲ,‌‌ ರಂಗಾಯಣ ರಘು, ತಬಲ‌ ನಾಣಿ, ಅರುಣಾ ಬಾಲರಾಜ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

'ದಿಲ್​ ಪಸಂದ್​' ಇದು ಟೈಮಿಂಗ್‌ನಿಂದ ನಗಿಸುವ ಚಿತ್ರ. ಇಂಟರೆಸ್ಟಿಂಗ್ ಕತೆಯನ್ನು ಚಿತ್ರಕ್ಕಿಳಿಸುವುದು ಚಾಲೆಂಜ್. ನಾನು ಪೊಲೀಸ್ ಆಗ್ಬೇಕು ಅನ್ನೋದು ಅಪ್ಪನ ಕನಸಾಗಿತ್ತು. ಆದರೆ ನಂಗೆ ಓದುವಾಗ ನಿದ್ದೆ ಬರ್ತಿತ್ತು. ನಟನೆ ಸುಲಭ ಅಂತ ಈ ಫೀಲ್ಡ್ ಆರಿಸಿಕೊಂಡೆ. ಸಿನಿಮಾ, ಲವ್ ಅಂತ ಓಡಾಡ್ಕೊಂಡಿದ್ದೆ. ಮಿಲನಾ (Milana) ಬಂದ ಬಳಿಕ ಬದುಕು ಬದಲಾಯಿತು. 'ದಿಲ್ ಪಸಂದ್‌'ನಂತೆ ಸಿನಿಮಾ ಸ್ವೀಟ್ ಆಗಿದೆ. ಲಾಕ್‌ಡೌನ್‌ನಲ್ಲಿ ಈ ಕತೆ ತಲೆಗೆ ಬಂದಾಗ ಟೈಟಲ್ಲೂ ಹೊಳೆದಿತ್ತು. ಅದೇ ಈಗ ಫೈನಲ್ ಆಗಿದೆ ಎಂದು ಡಾರ್ಲಿಂಗ್ ಕೃಷ್ಣ ಈ ಹಿಂದೆ ತಿಳಿಸಿದ್ದರು.

ನಿರ್ದೇಶಕನಾಗಿ ರಘು ದೀಕ್ಷಿತ್ ಬೇಕು, ನಿರ್ಮಾಪಕನಾಗಿ ಬೇಡ: ಡಾರ್ಲಿಂಗ್ ಕೃಷ್ಣ

ಇನ್ನು ಡಾರ್ಲಿಂಗ್ ಕೃಷ್ಣ ಅಭಿನಯದ 'ಶುಗರ್ ಫ್ಯಾಕ್ಟರಿ', 'ಮಿಸ್ಟರ್ ಬ್ಯಾಚುಲರ್', 'ಲಕ್ಕಿ ಮ್ಯಾನ್', 'ಲವ್ ಮಿ ಔರ್ ಹೇಟ್ ಮಿ' ಹಾಗೂ 'ದಿಲ್ ಪಸಂದ್' ಸಿನಿಮಾಗಳು ಅನೌನ್ಸ್ ಆಗಿ ಚಿತ್ರೀಕರಣದ ಹಂತದಲ್ಲಿವೆ. ಕೃಷ್ಣ ನಟಿಸಿ ನಿರ್ದೇಶಿಸಿರುವ ಲವ್ ಮಾಕ್ಟೇಲ್ ಸೀಕ್ವೆಲ್ ಚಿತ್ರೀಕರಣ ಮುಗಿದಿದೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿಯವರು ಚಿತ್ರಕ್ಕೆ 'ಯು' (U Certificate) ಪ್ರಮಾಣ ಪತ್ರ ನೀಡಿದ್ದಾರೆ. ನಾಯಕಿಯರಾಗಿ ಮಿಲನಾ ನಾಗರಾಜ್ (Milana Nagaraj) ಮತ್ತು ರಾಚೆಲ್ (Rachel) ನಟಿಸಿದ್ದಾರೆ. ಚಿತ್ರಕ್ಕೆ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಬಂಡವಾಳ ಹೂಡಿದ್ದು, ನಕುಲ್ ಅಭಯಂಕರ್ ಸಂಗೀತ ಸಂಯೋಜನೆ ಮಾಡಿದ್ದಾರೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?